ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩oಳಿ ಮಾಡಿದ್ದು ನ್ಯೂ ಮಹಾರಾಯ, ಉಪಚರಿಸಿ ಹೆಚ್ಚಾದ ಮಯ್ಯಾದೆಯಿಂದ ಕಾಣುತಾ ಬಲವಂತ ವಾಗಿ ಅವರನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡನು. ಅತ್ತ ಮೈಸೂರಿಗೆ ಈ ವರ್ತಮಾನವು ಸದಾ ಶಿವದೀಕ್ಷಿತ ನ ಕಾಗದ ತಲಪುವದಕ್ಕೆ ಮುಂಚೆಯೇ ಮುಟ್ಟಿತ್ತು. ಆ ಕೂಡಲೇ ಪಶುಪತಿ ಸಾಂಬಶಾಸ್ಸಿಗೆ ಕಾಗದದ ಮೂಲಕ ನೇಟಾದ ವರ್ತಮಾನವೇ ತಲಪಿತು. ಆ ಶಾಸ್ತ್ರಿಯ ಅನ ರ ಮನೇಜನರೂ ಈ ಕಾಗದವನ್ನು ಓದಿದ ಕ್ಷಣದಲ್ಲಿ ಬೆಚ್ಚಿ ಬೆರಗಾಗಿ ಹೋದರು. ಶಸ್ಸಿಯು ಆ ಗಳಿಗೆಯಲ್ಲಿಯೇ ಅ ರಮನೆಗೆ ಹೋಗಿ ಸಮಯವನ್ನು ದೊರಕಿಸಿಕೊಂಡು ಅ೦ಬಾ ವಿಳಾಸದಲ್ಲಿ ಸದಾಸಿವದೀಕ್ಷಿತನ ಕಾಗದವನ್ನು ಕೃಷ್ಣರಾಜ ಪ್ರಭು ಗಳ ಸನ್ನಿಧಿಯಲ್ಲಿ ಓದಿ ಅರಿಕೆ ಮಾಡಿದನು. ಆಗ ಮಹಾರಾಜ ರೂ ಅಲ್ಲಿದ್ದ ಸಭೆಯ ಅತ್ಯಾಶ್ಚರ್ಯಪಟ್ಟು ಪುನಃ ಪುನಃ ಕಾ ಗದವನ್ನು ಓದಿಸಿ ಕೇಳಿ-ಇದೇನಾಶ್ರ್ಯ ? ಎಲ್ಲಿಯೂ ನಡೆಯು ದೇ ಇದ್ದ ಸಂಗತಿ ನಮ್ಮ ರಾಜ್ಯದಲ್ಲಿ ಜರಗಿದೆ. ಸತ್ತ ಹೆಣಕ್ಕೆ ಜೀವಕಳೆಯನ್ನು ತುಂಬಿ ಪ್ರಾಣದಾನವನ್ನು ಮಾಡಿದ ಆ ಮಹಾ ತನ ದರ್ಶನವನ್ನು ನಾವು ಮಾಡಲೇ ಬೇಕು. ಆತನನ್ನು ಇಲ್ಲಿ ಗೆ ಕರೆದುಕೊಂಡು ಬನ್ನಿ ಎಂದು ಅಪ್ಪಣೆಯಾಯಿತು. ಸಾಂಬ ಶಾಸ್ತ್ರಿಯ ಅವರ ಮನೆಜನರೆಲ್ಲರೂ ಸೇರಿ ಹೊರಟು ಅತಿ ಜಾಗ್ರತೆಯಾಗಿ ಸಂಜನಾಡಿಯನ್ನು ಸೇರಿದರು. ಸೀತಮ್ಮ ನನ್ನು ಕಂಡಕೂಡಲೆ ಇವರುಗಳ ಆನಂದಕ್ಕೆ ಅಂತ್ಯವೇ ಇಲ್ಲದೇ ಹೊ ಯಿತು. ಎಲ್ಲರೂ ಈ ಮಾತನ್ನೆ ಪುನಃ ಪುನಃ ಕುಣಚಿಕುಣಚಿ ಕೇಳುತಾ ಬಂದರು.