ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೫ ಮಾಡಿದ್ದು ಮಹಾರಾಯ, ಅತ್ತಲಾ ದಂಡಿನ ಜನರು ಚಾಮರಾಜನಗರದಲ್ಲಿ ಬಂದು ಇಳಿದಿದ್ದರಷ್ಟೆ. ಇವರು ಸೀತಮ್ಮನನ್ನು ತೆಗೆದುಕೊಂಡು ಹೋಗಿ ಉರಿಯಮೇಲೆ ಇಟ್ಟ ರಾತ್ರೆಯ ದಾರಿಬಿಟ್ಟು ದಾರಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಹೊರಟು ಸಂಜ ನಾಡೀ ಬಳಿಗೆ ಬಂದು ಊರಸುತ್ತಲೂ ಮುತ್ತಿಗೆ ಹಾಕಿಕೊಂ ಡರು. ಅಮ್ಮ ನಗುಡಿ ಸಿದ್ದಪ್ಪಾಜಿಯವರ ಮನೆಯ ಮತ್ತು ಗುಡಿಯ ಸುತ್ತಲೂ ಹೆಚ್ಚು ಬಿಗಿಯುಳ್ಳ ಪಹರೇ ಬಂದು ಮುತ್ತಿಕೊಂಡಿತು. ಈ ಊರ ಜನಗಳ ಸ್ಥಿತಿಯು ಅಮಾಸೆ ಹೇಳಿದ ಚರಿತ್ರೆಯಲ್ಲಿ ವಿಶದವಾಯಿತು, ಅಲ್ಲಿ ಕಳ್ಳರ ಹುತ್ತ ವೇ ಸೇರಿಕೊಂಡಿತ್ತು. ಈ ಜನರು ಯಾತಕ್ಕೂ ಹೇಸತಕ್ಕನ ರಲ್ಲ. ಸಮಯ ಬಂದರೆ ಎಷ್ಟು ಜನರನ್ನಾದರೂ ಕೊಂದು ತಪ್ಪಿಸಿಕೊಂಡು ಓಡಿಹೋಗುವ ಸಾಮರ್ಧ್ಯವೂ ಅಭ್ಯಾಸವೂ ಇವರಿಗೆ ಇತ್ತು. ಮತ್ತು ಪೂಜಾರಿ ಸಿದ್ದ ಸ್ಮಾಜಿಯ ಕಡೆ ಯವರು ಕೇವಲ ಸಾಹಸಿಗಳೆಂದೂ, ಇವನು ಈಚೆಗೆ ವಿಶೇ ಷವಾಗಿ ಖ್ಯಾತಿಗೆ ಬಂದ ಗುಡಿಯ ಪೂಜಾರಿಯಾದ್ದರಿಂದ ದೇವರ ಭಕ್ತರೂ ಒಗಟಾಗಿ ಮೇಲೆ ಬರಬಹುದೆಂದೂ ಸಹ ಭಯವಿತ್ತು. ಆದ ಕಾರಣ ಹೆಚ್ಚಾದ ಸೇನೆಯು ಅಲ್ಲಿ ಸೇರಿ ಮುತ್ತಿಗೆ ಹಾಕಿದರು. ಬೆಳಗಿನ ಜಾವದಲ್ಲಿ ಸೀತಮ್ಮ ಊರೊಳಕ್ಕೆ ಬಂದಳು. ಬೆಳಗಾದಮೇಲೆ, ದಂಡಿನವರು ಬಂದು ಈ ಮುತ್ತಿಗೆ ಹಾಕಿದರು. ಆ ಊರಲ್ಲಿ ಎಲ್ಲಾ ಮನೆ ಯೊಳಕ್ಕೂ ಏಕಕಾಲದಲ್ಲಿ ನುಗ್ಗಿ ಅಲ್ಲಿದ್ದ ಹೆಂಗಸರು ಗಂಡ ಸರು ಎಲ್ಲರನ್ನೂ ಹಿಂಗು ಮುರಿಕಟ್ಟಿ ಕೂರಿಸಿ ಎಲ್ಲಾ 89