ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


2 රළු ಮಾಡಿದ್ದುಣ್ಣೆ ಮಹಾರಾಯ, ಐವತ್ತು ಬಹದರೀ ವರಹಾವನ್ನೂ ಒಂದು ತಟ್ಟೆಯಲ್ಲಿರಿಸಿ ಭವಜಿಗೂ, ಸಾಧಾರಣ ಉಡುಗರೆಯನ್ನು ಗಿರಿಯಣನಿಗೂ, ತಂದು ಇರಿಸಿದರು. ಸೀತಮ್ಮ ನೂ ಮಹಾದೇವನೂ ಆ ಬ್ರಾ ಹ್ಮಣರಿಬ್ಬರಿಗೂ ನಮಸ್ಕಾರಮಾಡಿದರು. ಆಗ ಭಟಜಿಯು ಸ್ವಾಮಿ ತಾವು ಸತ್ಪುರುಷರು, ನನ್ನಲ್ಲಿದ್ದ ಅಲ್ಪ ಶಕ್ತಿಯ ನ್ನು ನಾನು ತೋರಿಸಿದ ಮಾತ್ರಕ್ಕೆ ತಾವು ಹೀಗೆ ನನಗೆ ಪ್ರತ್ಯುಪಕಾರ ರೂಪವಾಗಿ ಇದನ್ನು ತಂದು ಇರಿಸಿ ಸ್ವೀಕರಿಸ ಬೇಕೆಂದು ಕೇಳುವುದು ತಮ್ಮ ಸತ್ಯ: ಭಾವವನ್ನು ಪ್ರಕಾಶ ಮಾಡುತ್ತೆ. ಆದರೆ ನಾನು ಯಾವುದನ್ನೂ ಅಂಗೀಕರಿಸತಕ್ಕ ವನಲ್ಲ. ಹಾಗೆ ಅಂಗೀಕರಿಸಿದ ಕ್ಷಣದಲ್ಲಿ ನನ್ನ ಮಂತ್ರಶಕ್ತಿ ಎಲ್ಲಾ ಹೋಗುತ್ತೆ. ಅದು ನನಗೆ ಒಂದು ಶಿಕ್ಷೆ ಎಂದು ಭಾವಿಸುತ್ತೇನೆ. ದಯಮಾಡಿ ಕ್ಷಮಿಸಬೇಕು. ನಾನು ಏನನ್ನೂ ಮುಟ್ಟತಕ್ಕವನಲ್ಲ. ಇದು ನಮ್ಮ ಗುರುಗಳ ಅಪ್ಪ ಣೆಯಾಗಿದೆ. ಆಪತ್ಕಾಲಗಳಲ್ಲಿ ನನ್ನ ಶಕ್ತಿಯನ್ನು ಪ್ರಯೋ ಗಿಸಿ ಜನರಿಗೆ ನಾನು ಮಾಡುವ ಉಪಕಾರವನ್ನು ತಾವಾಗಿ ನಿಲ್ಲಿಸಿ ಆರ್ತರಾದವರ ಕಷ್ಟವನ್ನು ತಾವಾಗಿ ಹೆಚ್ಚು ಮಾಡಿ ದಂತಾಗುತ್ತೆ. ಈ ಪಾಪಕ್ಕೆ ತಾವು ಗುರಿಯಾಗುತ್ತೀರಿ, ಎಂ ದು ಖಂಡಿತವಾಗಿ ಹೇಳಿದನು. ಆಗ ಪಶುಪತಿ ಸಾಂಬಶಾ ಸ್ತ್ರೀಯ ಸದಾಶಿವದೀಕ್ಷಿತನೂ ಆತನನ್ನು ಕುರಿತು- ಸ್ವಾಮಿ ತಾವು ಯಾರೋ ಮಹರ್ಷಿಗಳೇ ಸರಿ. ಈ ಕಲಿಯುಗದಲ್ಲಿ ಲೋಕೋಪಕಾರಾರ್ಥವಾಗಿ ದಯಮಾಡಿಸಿದ್ದೀರಿ. ತಮ್ಮ ದ ರ್ಶನವಾದ್ದು ನಮ್ಮ ಪೂರ್ವಾರ್ಜಿತ ಪುಣ್ಯ ಫಲವೇ ಹೊರ ತು ಬೇರೆ ಇಲ್ಲ. ತಾವು ಅಪ್ಪಣೆ ಕೊಡಿಸಿದ ಮಾತಿಗೆ