ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨d ಮಾಡಿದ್ದು ನ್ಯೂ ಮಹಾರಾಯ, ತಾಯಿಯನ್ನು ಕುರಿತು-ಅಮ್ಮಾ, ಮಾವನವರು ತೀರಿಹೋಗಿ ಅಲ್ಲಿ ಯಾರೂ ದಿಕ್ಕಿಲ್ಲದೆ ಭಾರಿ ಸ್ವತ್ತು ಕಾಡುಪಾಲಾಗುವ ಸಂದರ್ಭವಂತೂ ಗೊತ್ತೇ ಇದೆ. ಮುದುಕಿಯಾದ ನಿನ್ನನ್ನು ಇಲ್ಲಿ ಬಿಟ್ಟು ನಾನು ಅಲ್ಲಿರುವುದಕ್ಕೆ ಆಗುವುದಿಲ್ಲ. ಮಗು ಸಣ್ಣದು, ಅದರ ಪೋಷಣೆಯೂ ಆಗಬೇಕು. ಇನ್ನು ಮೇಲೆ ನಿನ್ನ ಕೈಯಿಂದ ಏನೂ ಸಾಗುವುದಿಲ್ಲ. ಸನ್ನಿಧಾನದಲ್ಲಿಯೂ ನಾವು ಸಂಜನಾಡಿಯಲ್ಲಿಯೇ ಇರಬಹುದು, ಸಂಬಕ್ಕೇನೂ ಲೋ ಪವಿಲ್ಲವೆಂದು ಎಲ್ಲಾ ಅಂಶವನ್ನೂ ಪರಿ ಚಿಸಿ ಅಪ್ಪಣಿ ಕೊಟ್ಟರು.. ನೀನು ಹೇಗೆ ಹೇಳಿದರೆ ಹೇಗೆ ಮಾವನಮುನೆಗೆ ಹೋಗಿ ಸೇರಿಕೊಂಡನೆಂಬ ಒಂದು ಮಾತು ಮಾತ್ರ ಉಂಟು, ಎಂದನು. ಆಗ ಪಶುಪತಿ- ಅಕ್ಕ, ಯಾವ ಸಂದರ್ಭವನ್ನು ನೋಡಿದಾಗೂ ಸಂಜನಾಡಿಗೆ ಹೋಗುವುದೇ ಎಲೆಂದು ನನಗೆ ತೋರು ಇನ್ನು, ನಿನ್ನ ಮನಸ್ಸಿಗೆ ಇನ್ನೇನೂ ತಿಳಿದುಕೊಳ್ಳಬೇಡ, ನಿನ್ನ ಕೈಯಲ್ಲಿ ಇನ್ನು ಮೇಲೆ ಕೆಲಸಸಾಗುವುದಿಲ್ಲ. ತಾಯಿ ಸತ್ತ ಮಗುವನ್ನು ಪೋಷಣೆಮಾಡಿಕೊಂಡು ಮನೇ ಕೆಲ ಸವನ್ನೂ ನಿರ್ವಹಿಸುವುದು ಬರೀ ಬಾಯಿಮಾತಲ್ಲ. ಪಾರ್ವತಮ್ಮ -ನೀವೆಲ್ಲಾ ಹೇಗೆ ಹೇಳಿದರೆ ಹಾಗಾಗಲಿ, ನನ ಗೇನು ತಿಳಿಯುತ್ತೆ ? ಸಾಯುವ ಮುದುಕಿ. * ಈಪ್ರಕಾರ ಆಲೋಚನೆ ಮಾಡಿಕೊಂಡು, ಸದಾಶಿವದೀಕ್ಷೆ ತನು ತನ್ನ ಮನೆಯನ್ನೂ ಭೂಮಿಕಾಣಿಯನ್ನೂ ನೋಡಿಕೊ