ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಮಾಡಿದ್ದುಣೋ ಮಹಾರಾಯ, ಡೆಯುತಾರೆ, ತುಂಟತನ ಮಾಡಿದರೂ ಹೊಡೆಯುತ್ತಾರೆ, ಇಲ್ಲದಿದ್ದರೂ ಹೊಡೆಯುತ್ತಾರೆ. ಸದಾ ಅದುಹೇಗೆ ? ಮಹಾ-ಹಾಗಾದರೆ ಹೇಳುತ್ತೇನೆ ಕೇಳು. ಹುಡುಗರು ಏನಾ ದರೂ ತಿಳಿಯದೇಹೋದಾಗ ಸಂತರನ್ನು ಕೇಳಿದರೆ ಅಂ ಧಾಹುಡುಗರನ್ನು ಚೆನ್ನಾಗಿ ಹೊಡೆಯುತ್ತಾರೆ. ಕೇಳಿದ್ದನ್ನು ಹೇಳಿಕೊಡುವುದೂ ಇಲ್ಲ. ಯಾರಾದರೂ ಹುಡುಗರು ಗಟ್ಟಿ ಯಾಗಿಕೂಗಿ ಗದ್ದಲ ಮಾಡಿದರೆ ತನ್ನ ಜಗಲೀಮೇಲಿ ನಿಂದ ದುಮಿಕಿ ಬಂದು ಹತ್ತರ ಯಾವ ಹುಡುಗ ಕೈಗೆ ಸಿಕ್ಕು ತಾನೋ ಅವನನ್ನೇ ಹಿಡಿದು ಹೊಡೆಯುತ್ತಾರೆ. ತಪ್ಪಿ ಇಲ್ಲದಿದ್ದರೂ ಹೊಡೆಯುತ್ತಾರೆ. ಸದಾ ನಾನಲ್ಲ ಎಂದು ಆ ಹುಡುಗ ಹೇಳಬೇಕು. ಮಹಾ- ಹಾಗೆ ಅವ ಅಂದರೆ ಅವನ ಆಶೆಯೇ ಇಲ್ಲ, ಬೆತ್ಯ ಮುರಿಯ ಹೊಡೆಯುತ್ತಾರೆ. ಅದೂಸಾಲದೆ ಮು ಷ್ಟಿಯಿಂದ ತಲೆಯಮೇಲೆ ಮಟ್ಟ ಮಟ್ಟ ತಲೆಯನ್ನೆ ಲ್ಯಾ ಹರಳ ಕಾಯಿ ಮಾಡುತ್ತಾರೆ. ಹೆಚ್ಚಾಗಿ ರೋಷದಿಂ ದ ಹಿಂತಿರುಗಿ ತಿರುಗಿ ಬಂದು ಮೊಳಕೈಯಿಂದ ತಲೆಯ ಮೇಲೂ ಬೆನ್ನ ಮೇಲೂ ಕುಕ್ಕು ತಾರೆ, ಕಿವಿಹಿಡಿದು ಮೇ ಲಕ್ಕೆ ಎತ್ತು ತಾರೆ, ಒಳಸುಂತಿಗಳಂತೂ ಗೊತ್ತೇ ಇಲ್ಲ. ಆ ಗೋಳನ್ನು ನಾನು ನೋಡಲಾರೆ ಭಾವ. ಸದಾ-ಇಷ್ತಾನೆ ! ಮಹಾ-ಇನ್ನೂ ಹೇಳುತ್ತೇನೆ ಕೇಳು, ಮಧ್ಯಾಹ್ನದಲ್ಲಿ ಬಂದು