ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ಅವರ ಜಗಲೀಮೇಲೆ ಹಾಕಿರುವ ಚಾಪೇಮೇಲೆ ಕೂತು ಕೊಂಡು ತೂಕಡಿಸುತಾರೆ. ಆಮೇಲೆ ಗೊರ್ ಗೊರ್ ಎಂ ದು ನಿದ್ರೆಮಾಡುತ್ತಾರೆ. ಆಗ ಹುಡುಗರೆಲಾ ಪಿಸಪಿಸನೆ ಮಾತನಾಡುತ್ತಾರೆ. ಸಿದ್ದ ಎನ್ನುವ ಹುಡುಗ ಇದಾನೆ. ಇವನು ಪಂತರಿಗೆ ನಿತ್ಯವೂ ಬೆಳಗ್ಗೆ ಒಂದುಕಾಸಿನ ನೆಸ್ಯ ಮಧ್ಯಾಹ್ನದಮೇಲೆ ಎಲೆ ಅಡಕೆ ತಂದುಕೊಡುತಾನೆ. : ಇನ ನು ಏನಮಾಡಿದರೂ ಸಂತರು ಇವನನ್ನು ಹೊಡೆಯುವು ದಿಲ್ಲ. ಹುಡುಗರೆಲ್ಲಾ ಇವನಿಗೆ ತಿಂಡಿ ತಂದುಕೊಡಬೇಕು. ಇಲ್ಲದಿದ್ದರೆ ಸಂತರಸಂಗಡ ಸುಮ್ಮ ಸುಮ್ಮನೆ ಚಾಡಿ ಹೇಳು ತಾನೆ. ತಾನೇ ಹುಡುಗರನ್ನು ಚಿವುಟುವುದು ಅವರು ಚಿ ವುಟಿದರೆಂದು ತಾನೇ ಅವರಮೇಲೆ ಚಾಡಿ ಹೇಳುವುದು, ಹೀಗೆಲ್ಲಾ ಏನೇನೋ ತುಂಟತನ ಮಾಡುತ್ತಾನೆ. ಈ ಸಿ ದ್ಧನು ಅವ ಬೈದ ಇವ ಉಗುಳಿದ ಅಂತ ಸುಳ್ಳು ಸು ೪ು ಕೂಗುತ್ತಾನೆ. ಆಗ ಸಂತರು ನಿದ್ದೆಗಣ್ಣಿನಲ್ಲಿಯೇ ಎದ್ದು ಬಂದು ಬೆತ್ತದಿಂದ ಎಲ್ಲರನ್ನೂ ನಾಲ್ಕು ನಾಲ್ಕು ಏ ಟು ಹೊಡೆಯುತ್ತಾರೆ. ಸಿದ್ದನ್ನ ಹೊಡೆಯುವುದಿಲ್ಲ. ಚಾಡೀ ಹೇಳುವವರನ್ನು ಹೊಡೆಯುವುದಿಲ್ಲ. ಉಳಿದವರಿಗೆ ಲ್ಲರಿಗೂ ಏದು. ಸದಾ-ನಿನ್ನನ್ನು ಹಾಗೆ ಹೊಡದರೆ ? ಮಹಾ-ನಿತ್ಯವೂ ಹೊಡೆಯುತ್ತಾರೆ. ಬೆಳಗ್ಗೆ ಎದ್ದು ಬೆಕ್ಕಿನ ಮುಖ ನೋಡಬೇಡ, ಉಪಾದ್ರು ಹೊಡೆಯುತ್ತಾರೆ ಎಂದು ಅಜ್ಜಿ ಹೇಳಿದಾಳೆ. ನಾನು ಬೆಕ್ಕಿನಮುಖ ನೋಡುವುದೇ