ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಮಾಡಿದ್ದುಣೋ ಮಹಾರಾಯ, ಮಹಾದೇವ ಬರುವುದನ್ನು ಕಂಡು ಎಳೆದುಕೊಂಡು ಬನ್ನಿ ರೂ ಅವನನ್ನ ? ಎಷ್ಟು ಹೊತ್ತು ಬರುವುದು ? ಎಂಬದಾಗಿ ಆಲಿ ಅಬ್ಬರಿಸುತಾ ಮಹಾದೇವನನ್ನು ಮನಸ್ಸು ಬಂದಹಾಗೆ ಬೆತ್ತ ದಿಂದ ಹೊಡೆಯಲು ಆರಂಧಿಸಿ-ನಿನ್ನನ್ನು ಮಠದಲ್ಲಿ ಗುಂಡಿ ತೋಡಿ ಹೂಳಿಬಿಡುತ್ತೇನೆ, ಎಂದನು. ಆಗ ಮಹಾದೇವನನ್ನು ಕರೆದುತಂದ ಹುಡುಗರು-ಪಂಧರೆ, ಮಹಾದೇವನ ಅಪ್ಪ ನಿಮಗೆ ಹೇಳು ಎಂದರು. ಹೊಡೆಯಬೇಡಿಯಂತ ಹೇಳು ಎಂದರು, ಎಂದು ಹೇಳಿದರು. ಅದಕ್ಕೆ ನಾರಪ್ಪಯ್ಯನು- ಶಿಪಾರ್ಶಿ ತಂದೆ ಯೇನೋ ಶಿವಾರ್ಶಿ? ಎನ್ನು ತಾ ಮಹಾದೇವನನ್ನು ಇನ್ನೂ ಎರ ಡು ಎಟ ಹೆಚ್ಚಾಗಿ ಹಾಕಿದನು. ಮಹಾದೇವನು ಹೊಡೆತನ ನ್ನು ತಾಳಲಾರದೆ ಸಂಕಟಪಡ ವುದನ್ನು ಕಂಡು ಮಠದ ಹು ಡುಗರೆಲ್ಲಾ ಇಂಥಾ ಒಳ್ಳೆ ಹುಡುಗನನ್ನು ಹೀಗೆ ಅನ್ಯಾಯ ವಾಗಿ ಹೊಡೆದರಲ್ಲಾ ಎಂದು, ಅಳುತಾ ಇರುವ ಮಹಾದೇವನ ಮುಖವನ್ನು ನೋಡಿ ಸಹಿಸಲಾರದೆ ತಾವೂ ಅಳುವವರಹಾಗೆ ಮುಖರಸವನ್ನು ತೋರಿಸುತಾ ಸರಿತಾಪ ಪಡುತಾ, ತಮ್ಮೊಳಗೆ ಗುಸ ಗುಸನೆ ಏನೋ ಮಾತನಾಡಿಕೊಳ್ಳುತಿದ್ದರು. ಆ ದಿವಸ ಎಲ್ಲಾ ಸಂತನ ಕೋಪ ಇಳಿಯಲೇ ಇಲ್ಲ. ಮಧ್ಯಾಹ್ನದಲ್ಲಿ ಹಲಗೇ ಬರೆಯುವ ಹುಡುಗರಿಗೆ ಕೈ ಬೆರಳ ಗಿಂಣುಗಳಮೇಲೆ ಏಟು ಬಿತ್ತು, ಕರಡು ಎಂದರೆ ಕಾಗದದಮೇಲೆ ಬರೆದು ಮ ಸಕು ಮಾಡುವ ಹುಡುಗರಿಗೆ ಲೆಕ್ಕಣಿಕೆಯಲ್ಲಿ ಚೆನ್ನಾಗಿ ಪೆ ಟ್ಟು ಬಿತ್ತು, ಮರಳಮೇಲೆ ಬರೆಯುವ ಚಿಕ್ಕ ಹುಡುಗರ ಬೆನ್ನಿನ ಮೇಲಂತೂ ಬೆತ್ತಸೀಳಿ ಮುರಿದುಹೋಗುವಮುಟ್ಟಿಗೂ ಛಡಿ