ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೮ ಮಾಡಿದ್ದುಣೋ ಮಹಾರಾಯ. ಯಾಡಿ ಹೋಯಿತು. ಎಲ್ಲಾ ಬಾಲಕರಿಗೂ ಆದಿವಸ ಪ್ರಾಯ ಸ್ಥಿತವಾಯಿತು. ಎಲ್ಲರಿಗೂ ಮೈಯೆಲ್ಲಾ ಬಾಸುಂಡೆ ಬಂತು. * ತರುವಾಯ ಪ್ರದೋಷಬಂತು. ಸಾಯಂಕಾಲದಲ್ಲಿ ಎಂದಿ ನಂತೆ ಸರಸ್ವತೀಪೂಜೆ ಮೊದಲಾದ್ದು ಜರಗಿತು. ವಾಡಿಕೆ ಮೇರೆ ಕಾಗದಾ ಪುಸ್ತಕ ಓದುವ ಹುಡುಗರು ತಲೆಗೆ ಒಂದು ದುಡ್ಡನ್ನೂ, ಹಲಗೇ ಬರೆಯುವವರು ಮೂರುಕಾಸನ್ನೂ, ನೆಲ ದಮೇಲೆ ಸಳ್ಳಿ ಬರೆಯುವವರು ಎರಡುಕಾಸನ್ನೂ ತಂದು ಪಂತರಿಗೆ ಆ ದಿವಸಕೊಟ್ಟು ಶಾರದಾಪೂಜೆಯನ್ನು ಮಾಡಿದರು. ಸಂತ ರಿಗೆ ಆ ದಿನ ಸಾಯಂಕಾಲ ಬಹಳ ಸಂತೋಷವಾಯಿತು. ಆಗ ಹುಡುಗರೆಲ್ಕಾ-ಸಂತರೇ, ನಾಳೆಯಿಂದ ಮೂರುದಿವಸ ಅನಧ್ಯಯನ, ನಾಲೆಯಿಲ್ಲ. ಮಠದಲ್ಲಿ ಕಸ ಹೆಚ್ಚಾಗಿದೆ, ಈ ಮೂರುದಿವಸದೊಳಗಾಗಿ ಗುಡಿಸಿ ಸಾರಿಸಿ ಚೊಕ್ಕಟಮಾಡು ತೇವೆ ಎಂದರು. ನಾರಪ್ಪಯ್ಯನು ಹಾಗೇ ಆಗಲಿ ಎಂದು ಒಪ್ಪಿಕೊಂಡು ಮನೆಗೆ ಹೊರಟುಹೋದನು. ರೂಪಿನಲ್ಲಿ ಅಕ್ಷಣವಾಗಿಯೂ, ಬುದ್ಧಿಯಲ್ಲಿ ವಿಶೇಷ ವಾಗಿ ಪಟುವಾಗಿಯ, ಗುಣದಲ್ಲಿ ಹೆಚ್ಚಾದ ಸಾತ್ವಿಕ ಸಭಾ ನವುಳ್ಳವನಾಗಿಯೂ ಇದ್ದ ಮಹಾದೇವನಿಗೆ ಬಿದ್ದ ಏಟಿನ ಪ್ರ ಸ್ವಾಸವನ್ನು ಪದೇಪದೇ ಮಠದ ಹುಡುಗರೆಲ್ಲಾ ಹೊರಗೂ ಮನೆಯಲ್ಲಿಯೂ ಮಾತನಾಡಿಕೊಳ್ಳುತ್ತಾ ಇದ್ದರು. ಸಂತರು ಇತರ ಹುಡುಗರಿಗೆ ಕೊಟ್ಟ ಏನೂ ಅವರು ಸಂಕಟಪಡು ವುದೂ ಸಹಿತ ಈ ಸಂದರ್ಭದಲ್ಲಿ ಜ್ಞಾಪಕಕ್ಕೆ ಬರತಕ್ಕದ್ದು ಸಹ ಜವಾಗಿಯೇ ಇದೆ. ಈ ಹುಡುಗರಲ್ಲಿ ಬಸವನೆಂಬ ಸುಮಾರು