ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಮಾಡಿದ್ದು ಣೋ ಮಹಾರಾಯ, ಡುಗನಿಗೆ ಬರುವುದಿಲ್ಲ, ಎಂಬಯಾಚನೆಯಿಂದ ತನ್ನ ಮಾತಿನ ಲ್ಲಿಯ ರೀತಿಯಲ್ಲಿಯ ಮಗನ ಕಡೆಗೆ ವಾಲದೇ ತೂಕಮಾ ಡಿದಂತೆ ಮಾತನಾಡುತಿದ್ದ ದೂರದರ್ಶಿಯಾದ ಸದಾಶಿವದೀಕ್ಷಿತ ನಿಂದ ಕೂಡ ಉವಾಧ್ಯಾಯರಮೇಲೆ ಆಕ್ಷೇಪಣರೂಪವಾಗಿ ಹ ಲವು ಮಾತುಗಳನ್ನು ಆ ತರಳನ ಸ್ಥಿತಿಯು ಹೊರಡಿಸಿತು. ಆಗ ಆತನು ಮಗುವನ್ನು ಇಷ್ಟು ಕಷ್ಟ ಪಟ್ಟು ಹಾಕಿದ್ದು ಇ ಲ್ಲಿಗೆ ಬಂತೆ, ಎಂದುಕೊಂಡು ಒಳಗೇ ಸಂಕಟಪಡುತಾ ಮ ಗುವನ್ನು ಉಪಚರಿಸಿದನು. ಹೆಚ್ಚಿನ ಬಾಧೆಯಿಂದ ಮನೆಯಲ್ಲಿ ಯೇ ಆಡಿಕೊಂಡು ಚತುರ್ದಶಿ ಆದಿಯಾದ ಮೂರುದಿವಸ ನನ್ನ ಮನೆಯಲ್ಲಿಯೇ ಕಳೆಯುತ್ತಿದ್ದ ಮಹಾದೇವನಿಗೆ ಬಹು ವಾಗಿ ಮನೆಯವರೆಲ್ಲಾ ಉಪಚರಿಸಿದರು. ವೆದ್ದನಾದ ಕಿಟ್ಟನೂ ಸಹಿತ ಹಾರಾಡುವುದಕ್ಕೆ ಮೊದಲುಮಾಡಿದನು. ಇವನು ಆಗತಿಮ , ಮಗೂನ ಆ ಹಾಳನುರಕ್ಕೆ ಕಳಿಸಬೇಡಕಣೆ, ಭಾವ ಏನಾದರೂ ಹೇಳಲಿ, ಈ ಕುಂಟುಪಾದ್ರಿಗೆ ಬುದ್ದಿ ಕಲಿಸಿಬಿಡು ತೇನೆ ಬುದ್ದೀನ, ನನ್ನ ಹೀಗೆ ಹೊಡೆಯುತ್ತಾ ಇದ್ದ. ನಾನು ಕಾಲಿಗೆ ಬದ್ಭಹೇಳಿದ್ದೇ ಕೆಲಸ ! ಅಷ್ಟಲ್ಲದೇ ಏನು ? ನನ್ನು ಮಗುವನ್ನು ಇವನು ಯಾಕೆ ಹೊಡೆಯುವುದು, ಇವನ ನ ಗುವನ್ನು ನಾವೇನಾದರೂ ಹೊಡೆದೆವೆ ? ಅವನ ಪ್ರತಿಷ್ಟೆ ಅಷ್ಟೇ ರಲ್ಲಿಯೇ ಇದೆ. ಇವನ ಧಾರಾಳವನ್ನು ನಾವೇನೂ ಕಾಣೆವೋ ? ಅವತ್ತು ಒಂದು ಚಿಟಗಿ ನೆಶ್ಯಾ ಕೊಡೊ ಎಂದರೆ ಕೊಡಲಿಲ್ಲ. ಕೊಟ್ಟಿದ್ದರೆ ಇವರ ಅಪ್ಪನಗಂದು ಹೋಗುತಿತ್ತೋ ! ಭಾನ ಈ ಉವಾದೀ ಮಠಕ್ಕೆ ಮಹಾದೇವನನ್ನು ಕಳುಹಿಸಬೇಡ, ಇನ್ನು ಮೇಲೆ