ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಮಾಡಿದ್ದು ಮಹಾರಾಯ, ವರಮನೆಯಲ್ಲಿ ಕೂತಿದ್ದ ತಂದೆಯಮುಂದೆ ಬಂದು ಅಳುತಾ ನಿಂತುಕೊಂಡನು. ಉಪಾದ್ರಿಯು ಪುನ: ಹೊಡೆದನೋ ಏನೋ ಆದ್ದರಿಂದ ಮಗುವು ಹೀಗೆ ಹೆದರಿಕೊಂಡು ಗಡಗಡನೆ ನಡ ಗುತಾ ಓಡಿಬಂತು, ಎಂದು ಗಾಬರಿಯಾಗಿ- ಯಾಕಪ್ಪ, ಏನಾ ಯಿತು, ಉವಾದ್ರಿ ಹೊಡೆದನೆ ? ಎಂದು ಕೇಳುತಾ ಹುಡು ಗನ ಹಿಂದೆಯೇ ಮನೆಯವರೆಲ್ಲರೂ ಓಡಿಬಂದರು. ಹುಡುಗ ನು ಯಾರಸಂಗಡ ಮಾತನಾಡಲಿಲ್ಲ. ಸುಮ್ಮನೆ ಅಳುತಾ ನಿಂತಿದ್ದನು. ಮಗನನ್ನು ನೋಡಿ ದೀಕ್ಷಿತನು- ಏನಾಯಿತ ಹೃ, ಯಾಕೆ ಅಳುತೀಯ, ಉಪಾದ್ರು ಹೊಡೆದರೆ ? ಎಷ್ಟು ಹೇಳಿದರೂ ಆತನ ಕೆಟ್ಟ ಚಾಳಿಯನ್ನು ಆತಬಿಟ್ಟಾನೆ ! ಎಂದನು. ಆಗ ಮಹಾದೇವನು- ಹೊಡೆಯಲಿಲ್ಲ, ಉಪಾದ್ರು ಜಗಲಿಯೇ ಲೆ ಹಳ್ಳದೊಳಕ್ಕೆ ಬಿದ್ದಿದಾರೆ, ಒಂದುಸಾರಿ ಗಟ್ಟಿಯಾಗಿ ಕಿರಚಿ ಕೊಂಡರು. ಹುಡುಗರೆಲ್ಲಾ ಮಠದಿಂದ ಓಡಿಹೋದರು, ನಾನೂ ಇನ್ನಿಬ್ಬರು ಹುಡುಗರೂ ಮಾತ್ರ ಜಗಲೀಬಳಿ ಹೋಗಿ ನೋಡಿ ದೆವು, ಹೆದರಿಕೆಯಾಯಿತು, ನಾವು ಓಡಿಬಂದೆವು, ಅಯ್ಯೋ ಪಾಪ ! ಉವಾದ್ರು ಹಾಗೆಬಿದ್ದಿದಾರೆ, ನೀನು ಬಂದು ನೋಡು, ಈಗಲೇ ಬರಬೇಕು ಎಂದನು. ಆಗ ದೀಕ್ಷಿತನು- ಅಯ್ಯೋ ಏನಾಯಿತೋ ಕಾಣೆ, ಆ ಬ್ರಾಹ್ಮಣನಿಗೆ ಇನ್ನು ಯಾರೂ ದಿಕ್ಕಿಲ್ಲವಲ್ಲಾ, ಎಂದು ತಾನು ಮಾಡುತ್ತಾ ಇದ್ದ ಕೆಲಸವನ್ನು ಅಲ್ಲಿಯೇ ಬಿಟ್ಟು ಮರಕ್ಕೆ ಹೋಗಿನೋಡಿದನು. ಅಲ್ಲಿ ನೆರೆ ಹೊರೆಯವರಿಬ್ಬರು ಮಠದ ಬಾಗಿಲಲ್ಲಿ ನಿಂತು- ಒಳ್ಳೆ ಕೆಲಸ ವಾಯಿತು, ಅವನು ಹುಡುಗರ ಗೋಳನ್ನು ಹೂಯಿದುಕೊ