ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 . ಮಾಡಿದ್ದುಣೋ ಮಹರಾಯ, ಹೋಗಿದ್ದ ಈತನ ಹೆಂಡತಿಗೆ ದೇಹದಲ್ಲಿ ಏನೋ ಜೆಡ್ಡು ಪ್ರಾಪ್ತವಾಗಿ ಆಕೆ ತರುಮನೆಯಲ್ಲಿಯೇ ಔಷಧವನ್ನು ತೆಗೆ ದುಕೊಳ್ಳುತ್ತಾ ಇದ್ದಳು. ಈ ಕಾರಣದಿಂದ ಪಂತನು ಜೋ ಯಿಸರ ಮನೆಯಲ್ಲಿಯೇ ನಿಂತನು. ಮಹಾದೇವನಿಗೆ ಮಠದಲ್ಲಿ ಓದು ತಪ್ಪಿಹೋಯಿತು. ಆದಕಾರಣ ಸದಾಶಿವದೀಕ್ಷಿತನು ಮಗನಿಗೆ ತಾನೇ ನಾ ರಹೇ ಛಲು ಆರಂಭಿಸಿದನು. ಗರ್ಭಾಷ್ಟಮದಲ್ಲಿ ಮಗನಿಗೆ ಉಪ ನಯನವನ್ನು ಮಾಡಿದನು. ಬೆಳಗಿನ ಝಾವದಲ್ಲಿ ಅವರ ಶಬ್ದ ಸ್ತೋತ್ರಾದಿಗಳನ್ನು ಹೇಳುತ್ತಿದ್ದನು. ತರುವಾಯ ಬಾಲ ಕನು ಎದ್ದು ಕೈ ಕಾಲಿಗೆ ಹೋಗಿಬಂದು ಮೈ ತೊಳೆದುಕೊಂಡು ಸಂಧ್ಯಾವಂದನೆ ಅಗ್ನಿ ಕಾರ್ಯ ಮೊದಲಾದ್ದನ್ನು ಮಾಡಿ, ತರು ವಾಯ ರಘುವಂಶ ನಾನು ಮೊದಲಾದ ಕಾವ್ಯಗಳನ್ನು ಚಿಂ ತನೆ ಮಾಡುತ್ತಾ ಇದ್ದನು. ಮಧ್ಯಾಹ್ನ ಊಟವಾದಮೇಲೆ ಕರಡನ್ನು ಮಸಕುಡುವುದು, ಲೆಕ್ಕ ಮೊದಲಾದ್ದನ್ನು ಹೇ ಳಿಸಿಕೊಳ್ಳುವುದು, ಬರೆದ ಕಾಗದಗಳನ್ನು ಓದುವುದು, ಈವಾ ಠಗಳು ನಡೆಯುತಾ ಇದ್ದವು. ದೀಕ್ಷಿತನು ಮಡಿ ಉಟ್ಟು ಕೊಂಡಮೇಲೆ ಮಗನಿಗೆ ಅಧ್ಯಯನವನ್ನು ಹೇಳುವುದೂ ಸಹಾ ಕ್ಲಿಪ್ತವಾಗಿ ಜರಗುತಾ ಇತ್ತು. ಮಹಾದೇವನು ಸಹಜವಾಗಿ ಜಾಣ, ತಂದೆಯು ಉಪಾಯವಾಗಿಯೂ ಮಕ್ಕಳಿಗೆ ತಿಳಿ ಯುವಹಾಗೆಯ ಬೋಧಿಸುತ್ತಾ, ಅವರಿಗೆ ಅಸಹವೂ ಬೇಸರಿಕೆಯ ಭೀತಿಯೂ ಇಲ್ಲದಹಾಗೆ ಪಾಠದಲ್ಲಿ ಒಂದು ಅಕ್ಕರೆಯನ್ನು ಹುಡುಗರಿಗೆ ಹುಟ್ಟಿಸಿ, ಬೋಧಿಸುವ ಕ್ರಮವು