ಪುಟ:ಮಾತೃನಂದಿನಿ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನ೦ದಿನಿ {2} ದಲ್ಲಿ ಹರಪಟ್ಟ ಮೇಲ್ಕಂಡವರ ಮಹಾಪರಾಧಗಳೂ , ಅದಕ್ಕಾಗಿ ಅವರು ಮರುದಿನವೇ ತೀರ್ಥಯಾತ್ರಾವ್ಯಾಜದಿಂದ ಪರಿವಾರಸಮೇತರಾಗಿ ಹೊರಟು ಹೋಗಿರುವರೆಂಬುದೂ, ಒಹು ಸ್ವಾರಸ್ಯವಾಗಿ ವರ್ಣಿಸಲ್ಪಟ್ಟಿವೆ. ಚಿತ್ರ:-ನಕ್ಕು-'ನಮಗೆ, ಬಹಿಷ್ಕಾರಪತ್ರಿಕೆಯನ್ನು ಕೊಟ್ಟು, ತಾವೇ ದೇಶಭ್ರಷ್ಟರಾಗಿ ಓಡಿಹೋದರೇ ? ಹೋಗಲಿ; ಅನುಭವಿಸಲಿ. ಹಿಂದಿನ ಕರ್ಮಫಲವನ್ನು !' ನಗೇಶ: ನೀನೇನು, ಈದಿನ ನನ್ನ ಪ್ರಯಾಣದ ವಿಷಯವನ್ನು ವಿಚಾರಿಸುವುದನ್ನೇ ಮರೆತುಬಿಟ್ಟೆ ? ಚಿತ್ರ: - ಈ ಬಾರಿಯು ಪ್ರಯಾಣಕಾಲದಲ್ಲಿ ನೀವು ನನಗೆ ತಿಳಿಸಿದ್ದ ಪಕ್ಷದಲ್ಲಿ, ನಾನು, ಹೋಗಿದ್ದ ಕಾರ್ಯವನ್ನಾಗಲೀ ಸ್ಥಳವನ್ನಾಗಲೀ ವಿಚಾರಿಸಬಹುದಾಗಿದ್ದಿತು. ಅದಾವುದೂ ಇಲ್ಲದ ಬಳಿಕ, ಅದೆಂತಹ ಗೌರವದ ಕೆಲಸವೋ ಏನು ರಹಸ್ಯವೋ ನಾನು ಹೇಗೆ ವಿಚಾರಿಸಲೆಂದು ಸುಮ್ಮ ನಿದ್ದೆನು. ಇದೇ ತಪ್ಪೇನು? ನಗೇಶ:--ತಪ್ಪಲ್ಲ. ನಿನಗೆ ಆಹ್ಲಾದ ದಾಯಕವಾದ ವಿಚಾರವೇ ತಿಳಿಯದೆ ತಪ್ಪುತ್ತಿದ್ದಿತು. ಅದಕ್ಕಾಗಿ ನಾನೇ ನಿನಗೆ ಎಚ್ಚರಿಸಿರುತ್ತೇನೆ. ಚಿತ್ರ:-ಹಾಗಾದರೆ. ಈಗಲಾದರೂ ಹೇಳಬಹುದಷ್ಟೆ ? ಹೋಗಿದ್ದುದು ಎಲ್ಲಿಗೆ? ನಗೇಶ: - ಆನಂದವನಕ್ಕೆ: ಮಾತೃಮಂದಿರದ ಸಂದರ್ಶನಕ್ಕಾಗಿ ಹೋಗಿದ್ದೆವು. ಚಿತ್ರ:-. -ಮತ್ತಾರಾರು ಬಂದಿದ್ದರು ? ನಗೇಶ: ಕಲೆಕ್ಟರರು, ಶರಚ್ಚಂದ್ರನಾಥ ಮತ್ತು ನಾನು-ಮೂವರೇ. ಚಿತ್ರ:-ನೆನೆದಂತೆಯೇ ಹೋಗಿದ್ದ ನಿಮಿತ್ತವೇನು? ನಗೇಶ:--ತಕ್ಷಣವೇ ಅಲ್ಲಿಗೆ ಹೊರಟು ಬರಬೇಕೆಂದು, ಸತ್ಯಾನಂದ ಸ್ವಾಮೀಜೀಯವರ ನಿರೂಪವು ಬಂದಿದ್ದಿತು. ಆದುದರಿಂದ ಹೋಗಿದ್ದೆವು. ಚಿತ್ರ: -ಸ್ವಾಮೀಜೀಯವರು ಬಂದರೆ?

ನಗೇಶ: ಅವರು ಎಲ್ಲಿಗಾದರೂ ಹೋಗಿದ್ದರಲ್ಲವೇ, ಬರುವುದಕ್ಕೆ?

ಚಿತ್ರ: -ದೇಶಸಂಚಾರಕ್ಕೆ ಹೋಗಿರಲಿಲ್ಲವೆ?