ಪುಟ:ಮಾತೃನಂದಿನಿ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 138 ಸಿಹಿತ್ಯ ಪಿಣೀ ದಾಂಭಿಕವೃತ್ತಿಯನ್ನು ಬಿಟ್ಟು, ಆಚಲಚಂದ್ರನ ಮಾರ್ಗಾನುಯಾಯಿಯಾಗಿ ದ್ದರೂ, ನನ್ನನ್ನು ನೀನು ವಿಶ್ವಾಸಿಸುವಂತೆ ತೋರಲಿಲ್ಲ. ನಿನ್ನ ಪ್ರತಿಯೊಂದು ಮಾತಿನಲ್ಲಿ ನನ್ನ ನಿರೀಕ್ಷಾಭಂಗವೇ ಅಗುವಂತೆ ತೋರುವರಾದರೂ, ಕೇವಲ ನಿನ್ನ ಅಣ್ಣನ ಬೋಧನೆಯ ಬಲದಿಂದ ಸ್ವಲ್ಪಸ್ವಲ್ಪವಾಗಿ ಆಶೆ ಯುಳ್ಳವನಾಗುತ್ತಿರುವೆನು. ಹೀಗೆಯೇ ಇನ್ನೆಷ್ಟು ಕಾಲವನ್ನು ಕಳೆಯ ಬೇಕೆಂದಿರುವೆ? ದೇವಿ ! ಹೀಗೆ ಬರೆದುದರಿಂದ ನನ್ನನ್ನು ನೀನು ಕಾಮುಕ ನೆಂರಾಗಲೀ ವ್ಯಮಾಲಾಪಿಯಿಂದಾಗಲೀ ಭಾವಿಸಬಾರದು. ನಿನ್ನ ಉತ್ಕೃಷ್ಟ ಗುಣಗಳನ್ನು ನೋಡಿದುದು ಮೊದಲು, ನಾನು, ಸಂನಾರಯಾತ್ರೆಗೆ ಸಾರಪಾತ್ರವೆಂದರೆ ನೀನೇ ಸರಿಯೆಂದು ಭಾವಿಸಿ ಭಾವಿಸಿ, ನಿನ್ನನ್ನು ಗೌರವಿ ಸುತ್ತಿರುವೆನಲ್ಲದೆ, ನಿನ್ನ ಸಹವಾಸಲಾಭದಿಂದಲೇ ನಾನು ನನ್ನ ಪುತ್ರಕರ್ತವ್ಯ ವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದಿರುವೆನು. ಇದನ್ನು ನೀನೇಕೆ ನಡಿಸಬಾರದು? ಪವಿತ್ರಹೃದಯ ! ಇಂದಿನ ಭಾಷಣಕಾಲದಲ್ಲಿ ನಡೆದ ವಿದ್ಯಮಾನಗಳಿಂದ ನಾನು ಮತ್ತೂ ಕುತೂಹಲಿಯಾಗಿರುತ್ತೇನೆ. ಇದನ್ನು ನಿನ್ನ ಸಮಕ್ಷದಲ್ಲಿ ಹೇಳಿ-ಕೇಳಿ ಬರ ಬೇಕೆಂದಿದ್ದರೂ, ಅದು ಸರಿಯಾದುದಲ್ಲವೆಂದು ಭಾವಿಸಿ, ಹೀಗೆ ಪತ್ರಮುಖ ಏಂದ ಕೇಳುತ್ತಿರುವೆನು. ನು ಹೇಳುವೆಯೋ ಒರೆದು ತಿಳಿಸು. ಮತ್ತೊಂದು ಮಾತು:- ನಿನ್ನನ್ನು ಕರೆತರಬೇಕೆಂದು ನಿಮ್ಮ ಗುರುಜನರ ಅಜ್ಞಾನತ್ರವು ಬಂದಿದೆ. ನಿನ್ನನ್ನು ನಾಳಿನ ದಿನವೇ ಸಕಲಸಂಭ್ರಮ ದಿಂದಲೂ ಕರೆದೊಯ್ದು ಅನಂದವನದಲ್ಲಿ ಬಿಡಬೇಕೆಂಬ ಸಂಕಲ್ಪವೂ ಆಗಿದೆ. ಆ ವೇಳೆಯಲ್ಲಿ ಅಲ್ಲಿ ನಡೆವ ಉತ್ಸವಾದಿಗಳನ್ನು ನೋಡಲು ಈ ನಗರದ ಪ್ರತಿಯೊಬ್ಬರೂ ಆಮಂತ್ರಿತರಾಗಿರುತ್ತಾರೆ. ನನ್ನನ್ನೂ ಅಲ್ಲಿಗೆ ಕರೆದೊಯ್ಯ ಬೇಕೆಂದು ಅಚಲಚಂದ್ರನು ಹಠತೊಟ್ಟಿರುವನು. ಆದರೆ, ನಾನು ಬಂದು ಫಲವೇನು ? ನೀನು ನನ್ನ ಕೈ ತಪ್ಪಿ ಹೋಗುವ ಪಕ್ಷದಲ್ಲಿ, ನಾನು ಅಲ್ಲಿಗೆ ಬಂದು, ನಿರುತ್ಸಾಹಿಯಾಗಿ ಮರಳಿ ಬರಲಾರೆನು, ಹಾಗಾಗುವುದಾದರೆ, ಮುಂದಿನ ಪರಿಣಾಮವೂ ನಿನಗೆ ತಿಳಿದೇ ಇದೆ. ಇದಕ್ಕೆ ನೀನೇನು ಹೇಳು ಯೋ, ನಿನ್ನ ಅಂತರಂಗದ ನಿಜವಾದ ಉದ್ದೇಶವೇನೋ ಇಲ್ಲಿ ಸ್ಪಷ್ಟ ಪಡಿ