ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಎಂದೂ ಅನುಭವಿಸದಅನಿರ್ವಚನೀಯವಾದಶೈತ್ಯವು.ಟಾಗಿ, ಆತನ ಶರೀರವೆಲ್ಲವೂ ಅರಳಿಯ ಎಲೆಯಂತೆ ನಡುಗಲಾರಂ ಭಿಸಿತು. ಅಂತಹ ಭಯಂಕರವಾದ ಅವಸ್ಥೆಯನ್ನು ಆತ ನಂದಿಗೂ ನೋಡಿರಲಿಲ್ಲ. ದೇವೇಂದ್ರನ ಆ ಕಾಲದ ಭಾವ ವನ್ನು ಕುರಿತು ವರ್ಣಿಸಲು ಆದಿಶೇಷನಿಗೂ ಅಸದಳವು. ಆದರೆ, ಅತನ ಬಹಿರ್ಭಾವಗಳೆಲ್ಲವೂ ಸ್ಥಿರವಾಗಿದ್ದುವು. ದೇ ವೇಂದ್ರನು ಈ ದೃಶ್ಯವನ್ನು ನೋಡಿದ ಬಳಿಕ, ಅತಿ ತೀವ) ವಾದ ದೃಷ್ಟಿಯಿಂದ ಜ್‌ಮೆಲೆಯನ್ನೊಂದುಸಲ ನೋಡಿ, ಕರ್ಕಶವಾದ ಸ್ವರದಿಂದ, “ಆಮೆಲೆ ! ನಾನು ಸಮ್ಮತಿಸ ಲಾರೆನು, ಎಂದು ಉತ್ತರವಿತ್ತನು. ಆರನೆಯ ಸಂಧಿ, (ಸತ್ತೆಸಯುವಳು) 'ನಾನು ಸಮ್ಮತಿಸಲಾರನು, ದೇವೇಂದ್ರನು ಹೀಗೆ ಹೇಳಿದ ಮಾತನ್ನು ಕೇಳಿದೊಡನೆಯೇ ಜಮೆಲೆಯ ಸರ್ವಾಂ ಗವೂ ನಡುಗಿಬಿಟ್ಟಿತು. ಹೃದಯದ ಆವೇಗವು ತನ್ನನ್ನು ಧ್ವಂಸಮಾಡುತ್ತಿದ್ದರೂ, ಅದನ್ನು ಅತಿಪ್ರಯಾಸದಿಂದ ಹೃದ ಯದಲ್ಲಿಯೇ ಅಡಗಿಸಿಕೊಂಡು, ಜ್ವಾಲೆಯು ನಸುನಗುತ ದುಡುಕಬೇಡ, ದೇವೇಂದ್ರ, ಚೆನ್ನಾಗಿಯೂ ಯೋಚಿಸಿ ನೋಡು, ಎಂದು ಮೃದುಮಧುರ ಸ್ವರದಿಂದ ಹೇಳ ತಿಭು ವನ ಮನಮೋಹಕವಾದ ತನ್ನ ತೀಕವಾದ ಕಟಾಕ್ಷ ವನ್ನು ದೇವೇಂದ್ರನ ಮೇಲೆ ಬೀರಿದಳು.