ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಧವನ್ನು ನಿನಗೇ ಕುಡಿಸುವನು. -ಫಲವಾಗುವುದು, ದೇವೇಂದ್ರ ವಿಜಯನು ರೇವತಿಯ ಮೃತಪಯ ವಾದ ಕಪ್ಪರಿದ ದೇಹವನ್ನು ತನ್ನ ತೊಡೆಯ ಮೇಲೆ ಮೆಲ್ಲನೆ ಇಟ್ಟುಕೊಳ್ಳುವಾಗ, ಅವನ ಹೃದಯದಲ್ಲಿ ಎಂ ತಹ ಯಾತನೆಯುಂಟಾಗಿರಬಹುದೋ, ಅದನ್ನು ಸಂಸ ರದ ಸುಖದುಃಖಗಳೇನೆಂಬುದನ್ನೇ ಅರಿಯದ ಗ್ರಂಥಕಾ ರರಾದ ನಮ್ಮಿಂದ ವರ್ಣಿಸಲಸದಳವು, ಹೃದಯದಲ್ಲಿ ಆಪ ರಿಮಿತವಾದ ಸಂಕಟವು ಆಧಿಕಾರಮಾಡುತಿದ್ದರೂ, ದೇ ವೇಂದ್ರನ ಮುಖದಲ್ಲಿ ಮಾತ್ರ ಯಾತನೆಯ ಯಾವ ಚಿಕ್ಕ ಯೂ ಕಂಡುಬರುತಿರಲಿಲ್ಲ. ದೇವೇಂದ್ರನು ಕಾಲಹರ ಇವನ್ನು ಸಹಿಸಲಾರದೆ, ಔಷಧವನ್ನು ತೊಟ್ಟು ತೊಟ್ಟಾಗಿ ರೇವತಿಯ ಬಾಯಲ್ಲಿ ಹಾಕಿದನು. ಆತನ ಕಣ್ಣೀರೂ ಆಕೆಯ ಬಾಯಲ್ಲಿ ಒಂದು ತೊಟ್ಟು ಜಾರಿಬಿದ್ದಿದ್ದರೂ ಬಿ ದ್ದಿರಬಹುದು, ನಿಮಿಷಗಳ ಮೇಲೆ ನಿಮಿಷಗಳು ಕಳೆದುಹೋಗು ತಿದ್ದುವು. ಮನೆಯಲ್ಲಿ ಯಾವ ವಿಧವಾದ ಶಬ್ದವೂ ಕೇಳಿ ಬರುತಿರಲಿಲ್ಲ, ದೇವೇಂದ್ರನು ರಪ್ಪೆಹಾಕದೆ ರೇವತಿಯ ಮುಖವ ನೇ ನಿರೀಕ್ಷಿಸಿಕೊಂಡಿದ್ದನು. ಸ್ವಲ್ಪ ಹೊತ್ತಿನೊಳಗಾಗಿ ಯೋ, ರೇವತಿಯು ಎಚ್ಚೆತ್ತವಳಾಗಿ, ಮೆಲ್ಲನೆ ಕಣ್ಣುಗ ಳನ್ನು ಬಿಡಲಾರಂಭಿಸಿದಳು. ರೇವತಿಯು ಕಣ್ಣುಗಳನ್ನು ತರೆದ ಕೂಡಲೆ, ಕೋಣೆಯ ನಾಲ್ಕು ದಿಕ್ಕುಗಳನ್ನೂ ಆಶ್ಚರದಿಂದ ನೋಡಿದಳು