ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಶಚೀಂದ್ರನು ತಪ್ಪಿಸಿಕೊಂಡವನ ಸಂಗತಿಯನ್ನು ತಿಳಿ ಯಲು ಮನೆಯೆಲ್ಲವನ್ನೂ ಹುಡುಕುವುದಕ್ಕೆ ಹೊರಟ ಈ ಡಲೆ, ಒಂದು ತೀವ್ರವಾದ ತೇಜೋರಾಶಿಯು ಮುಖದ ಹ ತಿರ ಕಾಣಿಸಿತು. ಶಚೀಂದ್ರನು ತಕ್ಷಣವೇ ಒಂದು ಹೆಜ್ಜೆ ಹಿಂದಾದನು. ಆ ತೇಜಸ್ಸಿನ ಉತ್ತರ ಕ್ಷಣದಲ್ಲಿಯ, ಢಂ, ಢಂ ಢಂ ಎಂದು ಪಿಸ್ತೂಲಿನ ಶಬ್ದವು ಕೇಳಿಸಿತು. ಈ ಚೀಂದ್ರನು ಬಹಳವಾಗಿ ಬೆದರಿದವನಾಗಿ, ದೇವೇಂದ್ರನ ಪಾದ ಮೂಲದಲ್ಲಿ ಹೋಗಿ ಬಿದ್ದನು. ಆಗ ದೇವೇಂದ್ರನು ತಾನೇ ಏನುಮಾಡಬಲ್ಲನು ? ಆಗ ಸಾವಧಾನವಾಗಿ ಯೋ ಚನೆಗೆ ಕಾಲವಾಗಿರಲಿಲ್ಲ; ಆಕ್ಷಣವೇ ದೇವೇಂದ್ರನೂ ತನ್ನ ಏಸೂಲನ್ನು ಹೊರಗೆ ತೆಗೆದು; ಯಾವ ಕಡೆಯಲ್ಲಿ ಬೆಳಕು ಕಾಣಿಸಿತೋ, ಆ ಕಡೆಗೆ ಗುರಿಯಿಟ್ಟು ಹೊಡೆದನು. ಆಗ ಯಾವುದೋ ಒಂದು ಭಾಗವಾಗ ವಸ್ತುವು ಕೆಳಗೆ ಬಿದ್ದ ತಾಗಿ, ರೋದನ ಧ್ವನಿಯೊಂದು ಕೇಳಿಸಿತು. ಅಂತೂ ದೇ ವೇಂದ್ರನ ಪಿಸ್ತೂಲಿನ ತೋಟವು (cartridge) ವ್ಯರ್ಥ ವಾಗಲಿಲ್ಲ. ದೇವೇಂದ್ರನು, ಶಚೀಂದ್ರನನ್ನು ಅಲ್ಲಿಯೇ ಬಿಟ್ಟು ಹೊರಗೆ ಬಂದು ಶಬ್ದ ಕೇಳಿಸಿ ಬಂದ ಸ್ಥಳಕ್ಕೆ ನಾಲ್ಕಾರು ಹೆಜ್ಜೆ ಮುಂದೆ ಹೋಗಿ ನೋಡಲಾಗಿ, ದಾರಿಯಲ್ಲಿ ಯಾವ ನೋ ಒಬ್ಬನು ಸತ್ತಂತೆ ಬಿದ್ದಿದ್ದನು. ಆದರೆ, ಆತನ ದೇ ಹದಲ್ಲಿ ಪ್ರಾಣವಾಯುವು ಕೊಂಚ ಕೊಂಚವಾಗಿ ಸಂಚು ರಮಾಡುತ್ತಿತ್ತು. ದೇವೇಂದ್ರನು ನಿಶ್ಯಬ್ದವಾಗಿ ಅಲ್ಲಿಯೇ ನಿಂತುಬಿಟ್ಟನು. -೦- 7-8