ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಸುಟು, ಒಂದೇ ಉಸಿರಿನಿಂದ ಮುಂದಕ್ಕೆ ಓಡಲಾರಂಭಿ ಸಿದನು. ಒಂದು ಕ್ಷಣಕಾಲವೆನ್ನುವುದರೊಳಗಾಗಿ, ದೇವೇಂ ದನು, ಹರೇಕರಾಮನ ತೋಟದ ಮುಂದುಗಡೆಗೆ ಬಂದು ಸೇರಿದನು. ಅವನು ತೋಟದೊಳಗೆ ಪ್ರವೇಶಮಾಡಿ ಪಕ್ಷಿ ಮದ ಕಡೆಗೆ ಹೊರಟನು; ಅಲ್ಲಿ ಎರಡಂತಸ್ತಿನ ಮನೆಯೊಂ ದು ಕಾಣಿಸಿತು. ದೇವೇಂದ್ರನು ಅದರ ಎಡಭಾಗದಲ್ಲಿದ್ದ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದನು. ಅಚಲಂ ಹನು ನಿಶ್ಚಿಂತನಾಗಿ ತಂಬಾಕುಸೇವನೆಯನ್ನು ಮಾಡುತ್ತಾ ಹೊರಗಿನ ಕೈಸಾಲೆಯಲ್ಲಿ ಕುಳಿತಿದ್ದನು. ದೇವೇಂದ್ರನು ನಿಶ್ಯಬ್ದವಾಗಿ ಹೋಗಿ ಅವನ ಹಿಂದೆ ನಿಂತನು. ಅಚಲನು ತಂಬಾಕನ್ನು ಸೇವಿಸುತ್ತಾ ಪಪಂಚವನ್ನೇ ಮರೆತು ಕುಳಿ ತಿರುವಲ್ಲಿ, ದೇವೇಂದ್ರನು ಹಿಂದಿನಿಂದ ಅವನ ಗಂಟನ್ನು ಬಲವಾಗಿ ಅದಿಮಿ ಹಿಡಿದನು. ಅಚಲನ ಶ್ವಾಸವು ರುದ್ದ ವಾಗಿ, ಅವನ ಗಂಟಲಿನಲ್ಲಿ ಗುರ ಗುರಿ ಎಂದು ಶಬ್ದವು ತಲೆದೋರಿತು; ಎರಡು ಕಣ್ಣುಗುಡ್ಡೆಗಳೂ ಮೇಲಕ್ಕೆ ಸಿಕ್ಕಿ ಕೊಂಡು, ಅಚಲನು ಜ್ಞಾನವಿಲ್ಲದೆ ನೆಲದಮೇಲೆ ಬಿದ್ದು ಬಿ ಟ್ಟನು. ದೇವೇಂದ್ರನು ಅನಂತರ ಅವನ ಕೈ ಕಾಲುಗಳನ್ನು ಒಲವಾಗಿ ಕಟ್ಟಿ ಹಾಕಿ, ಅವನ ಬಾಯಿಯಲ್ಲಿಯೂ ಬಟ್ಟೆ ಯನ್ನು ತುರುಕಿ, ಮೇಲಿನಿಂದ ಕೆಳಗೆ ಇಳಿದು ಬಂದು ಬಿಟ್ಟನು.