ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಕನು ತನ್ನ ತೀಕ್ಷವಾದ ದೃಷ್ಟಿಯಿಂದ ಸಾಧ್ಯವಾದಷ್ಟು ದೂರ, ಭಿಕ್ಷುಕನನ್ನೇ ನೋಡತೊಡಗಿದನು. ಆಗಂತು ಕನು ಕೊಂಚಹೊತ್ತು ನೋಡಿ ತನ್ನಲ್ಲಿ ತಾನೇ'ಇಲ್ಲ, ಇವ ನಿಗೆ ಭಯಪಡಬೇಕಾದ ಕಾರಣವಿಲ್ಲ. ಇವನು ಅರ್ಧ ಹು ಜ, ಇವನು ಎಲ್ಲಿಗಾದರೂ ಹೋಗಲಿ, ಇವನು ಪತ್ತೆದಾರ ನಾಗಿರಬಹುದೆಂದು ನನಗೆ ಭಯವಿದ್ದಿತು, ಈಗ ಆ ಭಯ ವು ತೊಲಗಿಹೋಯಿತು, ಎಂದು ಮುಂತಾಗಿ ಯೋಚಿ ಸುತ್ತಾ,ಜುಮಲೆಯು ಹೋದ ಮಾರ್ಗದಲ್ಲಿಯೇ ಹೊರಟು ಹೋದನು. ಈ ಆಗಂತುಕನು ಜಮಲೆಯ ಚಾಕರನಾಗಿ ದನು, ಆಗ ಭಿಕ್ಷುಕ ವೇಷಧಾರಿಯಾದ ಶಚೀಂದ್ರನು ಬ ಹಳ ದೂರ ಹೋಗಲಿಲ್ಲ, ಆಗಂತುಕನು ಕಣ್ಮರೆಯಾಗಿ ಹೋಗುವವರೆಗೂ, ಶಚಿಂದ್ರನು ಒಂದು ಗಿಡದ ಮರೆಯ ಲ್ಲಿಯೇ ಇದ್ದುಕೊಂಡು ಕಾಲವನ್ನು ನಿರೀಕ್ಷಿಸುತ್ತಿದ್ದನು. ಆಗಂತುಕನು ಹೊರಟೇ ಹೋದವೆಂದು ಮನಸ್ಸಿಗೆ ನಿರ್ಧರ ವಾದಮೇಲೆ, ಶಚೀಂದ್ರನು ತನ್ನ ಗುಪ್ತವಾದ ಸ್ಥಾನವನ್ನು ಬಿಟ್ಟು ಹೊರಗೆ ಬಂದು, ಆಗಂತುಕನು ಹೊರಟುಹೋದ ದಾರಿಯನ್ನೇ ಹಿಡಿದು ತಾನೂ ಹೊರಟನು. ಶಚೀಂದ್ರನು ಹೊರಡುವ ಕಾಲದಲ್ಲಿ ಕೈಯಲ್ಲಿದ್ದ ದೊಣ್ಣೆಯು ಬಾರಿ ಬಾರಿಗೂ ನೆಲದಮೇಲೆ ಬೀಳುತ್ತಿದ್ದಿತ್ತು, ಅವನು ಪದೇ ಪದೇ ಮುಗುಳುನಗೆಯೊಡನೆ ಜಾರಿಬಿದ್ದ ಕೋಲನ್ನು ತೆಗೆದುಕೊಳ್ಳುತಿದ್ದನು. ವಿ,ಯ ಪಾಠಕರೆ ! ಶಚೀಂದ್ರನ ಮುಗುಳುನಗೆಗೆ ಕಾರಣವೇನಿರಬಹುದು ?'ದೇ ವೇಂದ್ರನು ಹೊರಡುವ ಕಾಲದಲ್ಲಿ ಧಾನ್ಯವನ್ನು ಚೆಲ್ಲಿಕೊ೦