ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಒಂದು ವೇಳೆ ನಾನು ಹಿಂದೆ ಅಪಾರವಾಗಿ ಮಾಡಿದ ಗುಪ್ತತಮವಾದ ಪಾಪಕೃತ್ಯಗಳೆಲ್ಲವನ್ನೂ ಪ್ರಾಯಶ್ಚಿತ್ಯಾದಿ ಗಳಿಂದ ಹೋಗಲಾಡಿಸಿಕೊಳ್ಳುವುದಾದರೆ, ಆಗಲಾದರೂ ನಾ ನು ನಿನ್ನ ಮನವೊಪ್ಪಿದ ಸುಂದರಿಯಾಗುವೆನೇ ? ಇಲ್ಲ, ನಾನು ನಿನ್ನನ್ನು ಬಹಳವಾಗಿ ದ್ವೇಷಿಸುವನು. ನಿನ್ನ ಮನಸ್ಸನ್ನು ಇತರರು ಆಕರ್ಷಿಸದೇ ಇರುವು ದಾಗಿದ್ದರೆ, ಈಗ ನೀನು ನನ್ನನ್ನು ಪ್ರೀತಿಸುತಿದ್ದೆಯೋ, ಇಲ್ಲವೋ ? ಹೇಳು, ದೇವೇಂದ್ರ ! ಇಲ್ಲ. ಈ ಮಾತು ಮಿತಿಮೀರಿತು. ಆಮಲೆಯ ಹೃದಯ ವ ಡಪ್, ಡಪ್*, ಎಂದು ಬಡೆದುಕೊಳ್ಳಲಾರಂಭಿಸಿತು. ನಿಶ್ವಾಸಪುಶ್ಯಾಸಗಳು ಶುದ್ಧವಾದುವು. ಆಕೆಯ ಮು ಖಮಂಡಲವು ಕ್ಷಣಮಾತ್ರದಲ್ಲಿಯೇ ಕೆಂಪಾಗಿ, ತದುತ್ತರ ಕ್ಷಣದಲ್ಲಿಯೇ ಕಪಾಗಿ ಬಿಟ್ಟಿತು. ಮಲೆಯು ಕೊಂಚ ಹೊತ್ತು ನೀರವಳಾಗಿದ್ದು, ಪ್ರನಃ ತನ್ನ ಪೂರ್ವಾವಸ್ಥೆಯ ನ್ನು ಹೊಂದಿದವಳಾಗಿ,ಮೊದಲಿಗಿಂತಲೂ ಮೃದುಮಧುರವಾ ದ ಕಂಠಸ್ವರದಿಂದ ದೇವೇಂದ್ರನನ್ನು ಕುರಿತು, ನನ್ನನ್ನು ಪ್ರೀತಿಸುವುದಿಲ್ಲವೋ? ದೇವೇಂದ್ರು, ಹಾಗಾದರೆ ನೀನು ನನ್ನ ನ್ನು ಪ್ರೀತಿಸುವುದಿಲ್ಲವೋ ?, ಎಂದು ಅಂಗಲಾಚಿಕೊಂ ಡಳು. ಹಾಗಾದರೂ ಇಲ್ಲ ಎಂದು ದೇವೇಂದ್ರನು ಉತ್ತರ ವಿತ್ತನು. ದೇವೇಂದ)ವಿಜಯ, ಈಗ ನನಗೆ 44 ವರ್ಷ ವಯ ಸ್ಟು, ಈ ಮೂವಾರು ವರ್ಷ ವಯಸ್ಸಿನಲ್ಲಿ, ಎಷ್ಟೋಜನ