ಪುಟ:ಮಿಂಚು.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

164 ಮಿಂಚು

ಬಹುದೊಂತ ಆಸೆ ಇಟ್ಕೊಂಡಿದ್ದೆ. ಅದು ಹುಸಿಯಾಯ್ತು, ಅವನೀಗ ಅವಳ ಕಂಕುಳ ಕೂಸು,"

     “ನನಗೂ ಒಂದು ಫಾರೀನ್ ಟ್ರಿಪ್ ಏರ್ಪಾಟು  ಮಾಡಿದ್ರೆ   ನಾನೂ   ಕೂಸಾ

ಗ್ತೀನಿ. ನನ್ನನ್ನೂ ಅವಳು ಎತ್ಕೋಬಹುದು."

     “ನಮ್ಮನ್ನು ಅವಳು ಹೊತ್ಕೊಳ್ಳೋ ಕಾಲ ಕಳೀತು."
     ಧ್ವನಿ ಕುಗ್ಗಸಿ ರಂಗಸ್ವಾಮಿ ಕೇಳಿದರು : 
     “ಇವಳು ಅವಳೇ ಅನ್ನೋದರಲ್ಲಿ ನಿಮಗೆ ಸಂಶಯವಿಲ್ಲ ಅನ್ನಿ.” 
     “ಇದೆಯಪ್ಪ, ಇನ್ನೂ ಇದೆ....ನಾವು ರಾಜಕೀಯ ನೆಲೆಯಲ್ಲಿ ಹೋರಾಡ್ಬೇಕು.  

ಅವಳನ್ನು ಪಟ್ಟದಿಂದ ಇಳಿಸಿ ಜೈಲಿಗೋ ಮಠಕ್ಕೋ ಕಳಿಸ್ಬೇಕು,”

     “ಅವಳಿಗೆ ದಿಲ್ಲಿ ಬೆಂಬಲ ಇರೋವರೆಗೂ ಇದೊಂದೂ ಆಗೋದಿಲ್ಲ.”
     “ಅವರಿಗೆ ಬೇಕಾದ್ದೇನು   ? ರಾಜ್ಯದಲ್ಲಿ  ಸುಭದ್ರ   ಸರಕಾರ,   ಕಾಲಕಾಲಕ್ಕೆ

ಕಪ್ಪ . ಈ ಸೂತ್ರದ ಆಧಾರದ ಮೇಲೆ ಕೆಲಸ ನಡೀಬೇಕು.”

     ಇವತ್ತು ನಮ್ಮ ಸ್ನೇಹದ ಪುನರುದ್ದೀಪನ.   ಆದರ ನೆನಪಿಗಾಗಿ   ಒಂದೊಂದು ಚೋಟಾ ಪೆಗ್.”
     "ಸರಿ!"
               *               *                *
     ಧನಂಜಯಕುಮಾರ ನಿಗಮದ ಹತ್ತು ಗುದಾಮಗಳನ್ನು     ಖಾಲಿ  ಮಾಡಿದ್ದ.

ಅರ್ಧಕ್ಕರ್ಧ ರಿಜೆಕ್ಟ್ಸ್ ಎಂದು ಬರೆಸಿದ್ದರಿಂದ ಬಿಲ್ ಕಿರಿದಾಗಿತ್ತು. ಅಂಗಡಿ ಸಣ್ಣ ಪೇಟೆಯಲ್ಲೇ ಇದ್ದರೂ ಎಷ್ಟು ಎತ್ತರಕ್ಕೆ ಏರಿದ್ದ ಆತ ! ಕೊಡಬೇಕಾದವರಿಗೆಲ್ಲ ಕೊಡುತ್ತಿದ್ದ, ತಪ್ಪದೆ. ಹೇಳಿದ ಅವಧಿಯೊಳಗೆ ಲೆಕ್ಕ ಚುಕ್ತಾ,

     ಸೌದಾಮಿನಿಯ ಎದುರು ಅವನು ತೋಡಿಕೊಂಡಿದ್ದ : 
     “ನನಗೆ ಹಣ ಮುಖ್ಯ ಅಲ್ಲ ಮಾತಾಜಿ.  ಅತ್ಯಂತ  ಶ್ರೇಷ್ಠವಾದದ್ದು    ತಮ್ಮ

ವಿಶ್ವಾಸ.”

     ಆ ವಿಶ್ವಾಸದ  ಫಲವಾಗಿಯೇ  ನಗರದ  ರಾಜಬೀದಿಯಲ್ಲಿ ದೊಡ್ಡ   ಕಟ್ಟಡ

ಸಿಕ್ಕಿತು, ಅಂಗಡಿ ಅಲ್ಲಿಗೆ ಸ್ಥಳಾಂತರಿಗೊಂಡಿತು. ಸಣ್ಣ ಪೇಟೆಯಲ್ಲಿದ್ದ ಸೌದಾಮಿನಿ ಚಿತ್ರ ಇಲ್ಲಿ ಬಂಗಾರದ ಒಪ್ಪವಿಟ್ಟ ಚೌಕಟ್ಟಿನಲ್ಲಿ ಬಂದಿಯಾಯಿತು.

     ನೃತ್ಯ ಕಾರ್ಯಕ್ರಮದ ವಿಷಯ ಅವನಿಗೆ ಗೊತ್ತಾದದ್ದು  ಪತ್ರಿಕೆಗಳ ಮೂಲಕ,

ನೇರವಾಗಿ ಮುಖ್ಯಮಂತ್ರಿಯ ನಿವಾಸಕ್ಕೆ__ಗೃಹಕಾರ್ಯಾಲಯಕ್ಕೆ ಬಂದ.

     ಪರಶುರಾಮ್ನನ್ನು ಕೇಳಿದ :
     “ಪ್ರತಿಷ್ಠಾನದವರು ಬಂದಿದ್ದಾರಂತಲ್ಲ, ನಮ್ಮ ಸೇವೆ ಬೇಡವೆ?”