ಪುಟ:ಮಿಂಚು.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

198 ಮಿ೦ಚು

 ಅವನ ಹತ್ತಿರ ನಮ್ಮ ಮಾತುಕತೆ ಸೂಕ್ಷ್ಮತಮ ರಾಯಭಾರ. ಐದು ಸಾವಿರ 
 ಸಂಭಾವನೆ ಕೊಡೋಣ. ನಾಳೆಯೇ, ಆದರೆ ಈ ಸಂಗತಿ ಅತ್ಯಂತ ರಹಸ್ಯವಾಗಿರ 
 ಬೇಕು. ನೀನೆಲ್ಲಾದರೂ ಡಿಂಗಾಗಿ, ಬಾಯಿ ಬಿಟ್ಟಿರೋ ಕೆಟ್ಟೆವು. ಈ ವ್ಯವಹಾರ 
 ಕುದುರಿಸಿದಿರೋ ನಿಮ್ಮನ್ನು ದಿಲ್ಲಿಯಲ್ಲಿ ಕಿಷ್ಕ್ರಿಂಧೆಯ ಸಂಪರ್ಕಾಧಿಕಾರಿ ಮಾಡ್ರೇವೆ."
    ರೋಗಿ ಬಯಸುವುದೇನು ! ವೈದ್ಯ ನೀಡುವುದೇನು ! ಗೆದ್ದೆ ಎನಿಸಿತು 
 ಫೆರ್ನಾಂಡೀಸ್ಗೆ ಇವತ್ತು ಬೆಳಗ್ಗೆ ಯಾರ ಮುಖ ನೋಡಿ ಎದ್ದೆ? ಹೆಂಡತೀದು, 
 ಇನ್ನು ಯಾರದು ? ಆ ಮಿತ್ರ ಒಳ್ಳೆಯವನು. ಒಂದು ಸಾವಿರ ನನಗೆ ಕೊಟ್ಟಾನು. 
 ಆ ಸೂಟ್ಕೇಸಿನಲ್ಲಿ ನಗದು ಎಷ್ಟಿದೆಯೊ ? ಎಷ್ಟಿದ್ದರೇನು? ಐದು ಸಾವಿರ ಇದ್ದೇ 
 ಇರ್ತದೆ. ಆ ಮಿತ್ರನಿಗೆ ಫೋನ್ ಮಾಡಬೇಕು.
    ಆ ವಾರ ಅವನಿಗೆ ಹಗಲು ಪಾಳಿ. ಸಿಕ್ಕಿದ :
    “ಆರು ಘಂಟೆಗೆ ಬರೀನಿ. ಹೊರಗೆ ಬಾಗಿಲ ಹತ್ತಿರ ಕಾಯ್ದಿರು. ಒಂದು 
 ಸ್ಕೂಪಿದೆ. ಈಗಲೇ ಯಾರಿಗೂ ಏನೂ ಹೇಳಬೇಡ."
    ಮುಖ್ಯಮಂತ್ರಿಯ బಳಿಚ ಹೋಗಿ ಫೆರ್ನಾಂಡೀಸ್ ಅ೦ದ :
    “ವಿಕಾಸ್ ಸಿಕ್ಕಿದ, ಅವತ್ತು ಬಂದಿದ್ದ ಗೆಳೆಯ, ಆರೂವರೆ ಗಂಟೆಗೆ ಕರ 
 ಕೊಂಡು ಬರಾನೆ. ಒಂದು ಸ್ಕೂಪ್ ಇದೆ ಅಂತಷ್ಟೇ ಹೇಳಿದೆ."
    “ಒಳ್ಳೇದು. ಅವರ ಪತ್ರಿಕೆ ಯಾವುದು ?”
    “ಹಿಂದೂಸ್ಥಾನ್ ಹೆರಾಲ್ಡ್, ಪ್ರಧಾನಿ ಓದುವ ದೈನಿಕ."
    ....ಲಕೋಟ ತಲಪಿಸಿದ ಮೇಳಲೇ ಫೆರ್ನಾಂಡೀಸ್ ಹಿಂದೂಸ್ಥಾನ್ ಹೆರಾಲ್ಡ್ 
 ಕಾರ್ಯಾಲಯಕ್ಕೆ ಹೋದ. ಪರಶುರಾಮ ಫಟ್ ಫಟಿ ಹಿಡಿದು ಕುಟೀರ ತಲಪಿದ.
    ....ಸೌದಾಮಿನಿಯ ಎದುರು ಕುಳಿತ.
    “ಹೋದ ಸಲ ನಿಮ್ಮಿಂದಾಗಿ ಕಾರ್ಯಕ್ರಮ ಯಶಸ್ವಿಯಾಯ್ತು. ಈ ಸಲದ್ದು 
 ಅವಸರದ ಭೇಟಿ, ಆದರೂ ನಿಮ್ಮನ್ನಿಷ್ಟು ನೋಡಿ ಹೋಗೋಣ ಅನಿಸ್ತು, ನೀವು 
 ಬ೦ದಿರಿ, ಸಂತೋಷ."
    “ಇತ್ತೀಚೆಗೆ ಕಿಪ್ಕಿಂಧೆ ವಾರ್ತೆಗಳನ್ನ ಸ್ವಲ್ಪ ಕಾತರದಿಂದ ಓಧ್ತಾ ಇದ್ದೇನೆ."
    “ರಾಷ್ಟ್ರದ್ರೋಹಿಗಳು ವಾತಾವರಣವನ್ನ ಕಲುಷಿತಗೊಳಿಸಿದ್ದಾರೆ, 
 ಫೆರ್ನಾಂಡೀಸ್ ಎಲ್ಲ ಹೇಳಿರಬೇಕು, ಅಲ್ಲವೆ ?”
   “ಹೇಳಿದ್ದಾನೆ.”
   “ಪರಶುರಾಮ್, ಪ್ರಧಾನಿಗೆ ಬರೆದ ಪತ್ರದ ಒಂದು ಪ್ರತಿ ಕೊಡಿ, ನಮ್ಮ
 ಮಿತ್ರರು ಓದಿ ನೋಡಲಿ.”
   ಪ್ರತಿ ಬಂತು. ವಿಕಾಸ್ ಓದಿದ. 
   “ಟಿಪ್ಪಣೆ ಮಾಡ್ಕೊಳ್ಲಾ ? ಎಂದು ಕೇಳಿದ,
   “ಅವಶ್ಯ ಮಾಡ್ಕೊಳ್ಲಿ .”