ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೦ ೪೨] ಮೋಹನತರಂಗಿಣಿ ಪರಿತೋಷದಿಂದೆ ಬೀಳ್ಕೊಟ್ಟನು ಗೋಕುಲದೆಲೆಯ ನಾರದ ಗರುತ್ಮರನು ಮನ್ನಣೆವಡೆದು ಬೀಳ್ಕೊಂಡೆಯ್ದಿದರು ಸೌ | ಪರ್ಣನಾರದರತ್ತಲಿತ್ತ! ತನ್ನ ವಧಟಿಯರೊಳಗೆ ನಿರ್ಜರಶಿರೋ | ರನ್ನ ಶ್ರೀಕೃಷ್ಣನೊಪ್ಪಿದನು ! ಗಂಧಶಾಲಿಯ ಬತ್ತದೊಳಗಿರ್ದ ಕಳೆಯ ಕೀ ಅಂದದೆ ಖಳರತಿರ್ಕಳಿಸಿ? ವೃಂದಾರಕ ಭೂಸುರ ರಕ್ಷಪಾಲ ಗೋ | ವಿಂದನಾಪುರದೊಳೊಪ್ಪಿದನು || ದುಷ್ಟರ ಮುಖದು ಸಜ್ಜನರ ಪಾಲಿಗೆ ಸಂ | ತುನ್ನಿಯ ಮಾಡಿ ಭಕ್ತರಿಗೆ ಇಷ್ಟಾರ್ಥವನೀವ ಕೃಷ್ಣ ದ್ವಾರಕಿಯೊಳ ಗಷ್ಟೆ ರದೊಪ್ಪಿದನು | ೭೪ ಭೋಜ್ಯವಸ್ತುಗಳೊಳುಮುಖ್ಯವಾದುದುಲಲಿ ತಾಜ್ಯ ನಿರ್ಜರಜನರೊಳಗೆ || ಸೋಜ್ಯ ಸುಖಾಡ್ಯಪಾಲಕ ಕೃಷ್ಣ ಸುಖಸಾಮ್ರಾಜ್ಯವನ್ನಾಳಿದ ಮುದದೆ | ನಿರ್ಮತ್ಸರದೊಳೀಕೃತಿಯ ಕೇಳ್ವರಿಗೆ | ಧರ್ಮಾರ್ಥಕಾಮಮೋಕ್ಷ [ಗಳ || ಭರ್ಮಾಂಬರನೀವ ಭಾಮೆ ಕೇಳ ನಮ್ಮ ದುಷ್ಕರ್ಮ ವಿಚ್ಛೇದನವಾಯ್ತು - ಯೋಗಿಹೃತ್ಕಮಲಾಸನ ದೈತ್ಯಕಾಮಾರಿ ರಾಗಿಪ ಭೋಗದೇವೇಂದ್ರ) ಕಾಗಿನೆಲೆಯ ನರಸಿಂಹಾದಿಕೇಶವ | ನಾಗಿ ಜನಮನೋರಥವ |೭೭|| ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ ತರಣಿಚಂದಮರುಳ್ಳನಕ ಸತ್ಕೃಪೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ! ಅಂತು ಸಂಧಿ ೪೦ ಕ್ಕೆ ಮಂಗಳಂ ಮಹತ್ ಶ್ರೀ ಶ್ರೀ ಶ್ರೀ

==

= = = = = = = = ಮೊ ಹ ನ ತ ರ೦ಗಿಣಿ ಸಂಪೂರ್ಣ೦. = == =