ಪುಟ:ಯಶೋಧರ ಚರಿತೆ.pdf/೧೦೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
 


ನಾಲ್ಕನೆಯ ಅವತಾರ

ರತಿವೆರಸು ಮನಸಿಜಂ ಬನ-
ದತಿಶಯಮಂ ನೋಡಲೆಂದು ಬರ್ಪಂತೆ ಯಶೋ-
ಮತಿ ಕುಸುಮಾವಳಿವೆರಸು-
ನೃತಪೀತಚ್ಛತ್ರನಂದನಂ ನಡೆತಂದಂ


ಬಾಳಲರ್ಗುಡಿ ಪಿಕರುತಿ ಬಾ-
ಯ್ಕೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ
ಪಾಳಂ ಬರೆ ಶೋಧಿಪ ವನ-
ಪಾಳನವೊಲ್ ಮುಂದೆ ಬಂದುದಂದು ವಸಂತಂ


ತಳಿರ್ಗಳ ಚಾಳೆಯಮೆಳಲತೆ-
ಗಳ ಲುಳಿ ತಿಳಿಗೊಲದ ತೆರೆಯ ತಾಳಂ ಪೊಸವೂ-
ಗಳ ನೋಟಮಾಗೆ ನೃಪನಂ
ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ೧. ಕಾಮನೂ ರತಿಯೂ ಜತೆಗೂಡಿ ವನದ ಅತಿಶಯವೇನೆಂದು ನೋಡಲು
ಬರುವಂತೆ, ಒಮ್ಮೆ ಯಶೋಮತಿ ತನ್ನ ಪತ್ನಿಯಾದ ಕುಸುಮಾವಳಿಯನ್ನೂ
ಕೂಡಿಕೊಂಡು ಉದ್ಯಾನವನಕ್ಕೆ ಬಂದನು. ತಲೆಯ ಮೇಲೆ ಉನ್ನತವಾಗಿ
ಮೆರೆಯುತ್ತಿದ್ದ ಬಂಗಾರದ ಛತ್ರದಡಿಯಲ್ಲಿ ಸಂತೋಷದಿಂದ ಅವನು ಬಂದನು.
೨. ವಸಂತಕಾಲವೂ ಆಗ ಆಗಮಿಸಿತು. ಹೂವಿನ ಕುಡಿಗಳೇ ಕೈಯಕತ್ತಿಯಾಗಿ,
ಕೋಗಿಲೆಯ ಕೂಗೇ ವಾಗ್ವಿನೋದವಾಗಿ, ಮಾವಿನ ಚಿಗುರ ಕೆಂಪೇ ದೀಪವಾಗಿ;
ಅರಸನು ಬರುವಾಗ ವನವನ್ನೆಲ್ಲ ಸರಿಪಡಿಸುವ ವನಪಾಲಕನಂತೆ ವಸಂತವು
ಬಂದಿತು. ೩. ಬೆನ್ನಲ್ಲೇ ಮಲಯಮಾರುತನು ನಟ್ಟುವನಾಗಿ ಕಾಣಿಸಿಕೊಂಡನು.
ಚಿಗುರುಗಳ ನೆಗೆತ, ಎಳಲತೆಗಳ ಅಲುಗಾಟ, ನಿರ್ಮಲ ಸರೋವರದ ತೆರೆಗಳ