ಪುಟ:ಯಶೋಧರ ಚರಿತೆ.pdf/೧೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಯಶೋಧರ ಚರಿತೆ
 

ಗಂಗಕುಲಚಕ್ರವರ್ತಿ ಕ-
ಳಿಂಗಧರಾಧೀಶರಿವರಸಾರಂ ಸಂಸಾ-
ರಂ ಗಡಮೆಂದರತರಿದರಿದು ತ-
ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್‌೫೨


ಎಂಬುದುಮರಸಂ ಮುನಿವರ-
ರಂ ಬಲಗೊಂಡೆರಗಿ ನೆಗಳ್ದಿ ಪೊಲ್ಲಮೆಗೆ ತದೀ-
ಯಾಂಬುಜಪದಮಾ ತನ್ನ ತಿ-
ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ೫೩


ಅದನವರವಧಿಯಿನರಿದಾ-
ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇ-
ಳ್ವುದುಮುಸಿರ್ದ‌ರ್ ಭವದೊಳ್ ಬ
ರ್ದಿದ ಮಾತರಪಿತರರಂ ಪಿತಾಮಹರಿರವಂ೫೪ಮಾಡಿದರೂ ಅಮೇಧ್ಯವು ಕುಂಕುಮವಾದಿತೆ? ಯೋಚಿಸಿರಿ! ೫೨. ಇವರು
ಗಂಗಕುಲದ ಚರ್ಕವರ್ತಿಗಳಾಗಿದ್ದವರು. ಕಳಿಂಗ ದೇಶದ ಅಧಿಪತಿಗಳಾಗಿದ್ದರು.
ಈ ಸಂಸಾರವೆಂಬುದು ಸಾರವಿಲ್ಲದ್ದು ಎಂಬುದು ಖಚಿತವಾದಾಗ ಇವರು
ತಪಸ್ಸಿಗೆ ತೆರಳಿದರು. ಇವರ ಹೆಸರು ಸುದತ್ತಾಚಾರ್ಯರು”. ೫೩. ಇಷ್ಟು
ಹೇಳಿದಾಗ ಯಶೋಮತಿಯ ಮನಸ್ಸು ಬದಲಾಯಿತು. ಅವನು ಆ ತಪಸ್ವಿಗಳಿಗೆ
ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿ ತಾನು ಮಾಡಿದ ಅಕೃತ್ಯಕ್ಕಾಗಿ ಅವರ
ಪಾದಕಮಲವನ್ನು ತನ್ನ ಶಿರಃ ಕಮಲದಿಂದ ಪೂಜಿಸಲು ನಿರ್ಧಾರಮಾಡಿದನು.
೫೪. ರಾಜನ ವಿಷಯವನ್ನೆಲ್ಲ ಸುದತ್ತಾಚಾರ್ಯರು ಅವಧಿಜ್ಞಾನದಿಂದ
ಅರಿತುಕೊಂಡರು. “ಆಗದು, ಬೇಡ” ಎಂದು ಅವರು ತಡೆದಾಗ ರಾಜನಿಗೆ
ಆಶ್ಚರ್ಯವಾಯಿತು. “ಅದೇಕೆ ಹಾಗೆ?” ಎಂದು ಪ್ರಶ್ನಸಿದನು. ಅವರು ಆತನ
ತೀರಿಹೋದ ತಂದೆತಾಯಿಗಳ ಮತ್ತು ಅಜ್ಜ ಅಜ್ಜಿಯರ ಸ್ಥಿತಿಗತಿಗಳನ್ನು