ಪುಟ:ಯಶೋಧರ ಚರಿತೆ.pdf/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಯಶೋಧರ ಚರಿತೆ
 

ಆದುದರಿಂದ ಇದರ ವಿಷಯವಾಗಿ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸೋಣ.
ಯಶೋಧರ ಚರಿತೆಯ ವಿಷಯವಾಗಿ ಆರ್. ನರಸಿಂಹಾಚಾರ್ಯರು
ಬರೆದ 'ಕವಿಚರಿತೆಯ ಪ್ರಥಮಾವೃತ್ತಿಯಲ್ಲಿ ಈ ಮಾತುಗಳಿವೆ:- “ಇದು ವರ್ಣಕ
ಪ್ರಬಂಧವು; ಇದರಲ್ಲಿ ಗದ್ಯಭಾಗವೇ ಇಲ್ಲ; ಸುಮಾರು ಎಂಟು ಹತ್ತು ವೃತ್ತಗಳು
ಹೊರತು ಉಳಿದುವೆಲ್ಲಾ ಕಂದ ಪದ್ಯಗಳೇ ಆಗಿವೆ. ಈ ಗ್ರಂಥವು ನಾಲ್ಕು
ಅವತಾರಗಳಾಗಿ ಭಾಗಿಸಲ್ಪಟ್ಟಿದೆ; ಇದರಲ್ಲಿ ಒಟ್ಟು ಕಂದ ವೃತ್ತಗಳು ಸಹ ೩೧೧
ಇವೆ ... ಇದೇ ಕಥೆಯನ್ನು ಈ ಕವಿಯ ಕಾಲಕ್ಕೆ ಹಿಂದೆ ಇತರ ಕವಿಗಳು
ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಬರದಿದ್ದರು ....
ಗ್ರಂಥಾವತಾರದಲ್ಲಿ ಇಪ್ಪತ್ತನೆಯ ತೀರ್ಥಂಕರನಾದ ಮುನಿಸುವ್ರತನನ್ನು
ಸ್ತುತಿಸಿ ಬಳಿಕ ಸಿದ್ಧಾದಿಗಳನ್ನೂ ವೀರಸೇನ, ಜಿನಸೇನ, ಸಿಂಹನಂದಿ, ಕೊಂಡ
ಕುಂದ, ಸಮಂತಭದ ಗುಣಭದ ಪೂಜ್ಯಪಾದ ಎಂಬಿವರುಗಳನ್ನು ಹೊಗಳಿದ್ದಾನೆ.
ಅನಂತರ-ಹುಲಿ ಪಾಯೆ ಗುರುಗಳ್ 'ಸಳಹೊಯ್” ಎಂದು ಕುಂಚದ ಸೆಳೆಯಂ
ಕೊಡಲು ಹುಲಿಯನಟ್ಟಿ ಹೊಯ್ಸಳನಾದನು. ಅವನ ಮಗ ವಿನಯಾದಿತ್ಯ;
ಅವನ ಪುತ್ರ ಎರೆಯುಂಗ; ಅವನ ಸುತ ಬಿಟ್ಟಿದೇವ; ಆತನ ಮಗ ನರಸಿಂಹ
; ಅವನ ಪುತ್ರ ವೀರಬಲ್ಲಾಳ – ಎಂದು ಹೊಯ್ಸಳ ರಾಜರ ಪರಂಪರೆಯನ್ನು
ಹೇಳಿ, ವೀರಬಲ್ಲಾಳನು ತನಗೆ ಸ್ವಾಮಿಯಾದುರಿಂದ ಅವನನ್ನು ವಿಶೇಷವಾಗಿ
ಸ್ತುತಿಸಿದ್ದಾನೆ. ಗ್ರಂಥಾಂತ್ಯದಲ್ಲಿಯೂ 'ಅಸಹಾಯ ಶೂರನ ಭುಜಕ್ಕೆ ಜಯಂ
ಸಮಸಲ್ಲೆ' ಎಂದು ವೀರಬಲ್ಲಾಳನನ್ನು ಆಶೀರ್ವದಿಸಿದ್ದಾನೆ ....”
ಯಶೋಧರ ಚರಿತೆಯನ್ನು ಜನ್ನನು ಬರೆದು ಮುಗಿಸಿದುದು
ಕ್ರಿ. ಶ. ೧೨೦೯ರಲ್ಲಿ ಎಂದು ಈ ಕೆಳಗಣ ಪದ್ಯದಿಂದ ತಿಳಿದುಬರುತ್ತದೆ:
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತೃರಮುತ್ತರೋತ್ತರ
ಕ್ಯಾಗಿರೆ ಶುಕ್ಲದಾಶ್ವಯುಜ ಕೃಷ್ಣದ ಪಂಚಮಿ ಮುಷ್ತಾರೆ ಪೂ
ರ್ಣಾಗುರುವಾಗೆ ಭೂತಳದೊಳೀ ಕೃತಿ ಪತ್ತುದು ಸುಪ್ರತಿಷ್ಯಂ
ಚಾಗದ ಭೋಗದಗ್ಗಳಿಕೆಯಂ ಮೇದಂ ಕವಿಭಾಳಲೋಚನಂ

(ಯಶೋಧರ ಚರಿತೆ : ೪-೮೬)
 

ಇದಿಷ್ಟು ಯಶೋಧರ ಚರಿತೆಯ ಬಾಹ್ಯ ಪರಿಚಯ ಮಾತ್ರ ಇನ್ನು,
ಕೃತಿಯ ಒಳಗನ್ನು ನೋಡಬಹುದು. 'ಕವಿಚರಿತೆಯಲ್ಲಿ "ಮಾರಿದತ್ತನೆಂಬ ರಾಜನು
ಮಾರಿಗೆ ಬಲಿಕೊಡುವುದಕ್ಕಾಗಿ ಇಬ್ಬರು ಕುಲೀನರಾದ ಹುಡುಗರನ್ನು ಹಿಡಿದು