ಪುಟ:ರಘುಕುಲ ಚರಿತಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದ . ಯನ್ನು ಪರಿಹರಿಸಿಕೊಂಡನು. ತರುವಾಯ ರಾಮಚಂದ್ರನು - ಅಶ್ವಮೇಧಯಾಗವನ್ನು ಮಾಡಬೇ ಕೆಂದು ನೆನೆದು, ಯಜ್ಞಾಶವನ್ನು ಬಿಟ್ಟನು, ಸುಗ್ರೀವ ವಿಭೀ ಪಣ ಮೊದಲಾದ ಅಗಸರು- ಮೇಘಗಳು ಜಲಗಳಿಂದ ಸಸ್ಯಗಳನ್ನು ಹೇಗೋ ಹಾಗೆ ಉಪಾಯನಗಳಿಂದ ರಾಮನನ್ನು ಸಂತೋಷಗೊಳಿಸಿದರು ಅಧ್ರರಕ್ಕಾಗಿ ಕರೆಯಲ್ಪಟ್ಟ ಮಹರ್ಷಿಗಳು- ಭೂಮಿಯಲ್ಲಿರುವ ತಂತಮ್ಮ ಸ್ಥಾನಗಳನ್ನು ಮಾತ್ರವಲ್ಲದೆ ನಕ್ಷತ್ರರೂಪವಾದ ಸ್ಥಾನಗಳನ್ನೂ ಬಿಟ್ಟು ನಾನಾದಿಕ್ಕುಗಳಿಂದಲೂ ರಾಮನನ್ನು ಕುರಿತು ಬಂದರು, ನಾಲೆಸೆಯ ಬಾಗಿಲುಗಳೆಂಬ ನಾಲ್ಕು ಮುಖಗಳನ್ನೊಳಗೊಂಡಿರುವ ಅಯೋಧ್ಯೆಯುಸುತ್ತಲೂ ಹತ್ತಿರದಲ್ಲಿ ಬಂದಿಳಿದಿರುವ ಮುನಿಗಳಿಂದ, ಆಗ ತಾನೆ ಜನ ರನ್ನು ಸೃಷ್ಟಿಸುತ್ತಿರುವ ಚತುರುಖನ ತನುವಿನಂತೆ ಕಂಗೊಳಿಸುತಲಿ ದ್ವಿತು. ಆಗ ರಾಮನು - ವೈದೇಹಿಯನ್ನು ತ್ಯಜಿಸಿದುದೂ ಶ್ಲಾ೯ವೆನಿ ನಿದುದಾಗಿಯೇ ಇದ್ದಿತು, ಏಕೆಂದರೆ ಪ್ರಾಚೀನಸ್ಕೂಣವೆಂದು ಹೇಳಿ ಸಿಕೊಳ್ಳುವ ಯಜ್ಞಶಾಲೆಯ ಒಂದು ಭಾಗವಾದ ಪ್ರಗ್ರಂಶದಲ್ಲಿ ಕುಳ ತಿದ್ದ ರಾಮನಿಗೆ ಸುವರ್ಣ ಪ್ರತಿಮೆಯ ರೂಪವಾದ ಸೀತೆಯೇ ನಿಜವಾದ ಜಾಯೆಯಾಗಿದ್ದಳು. ಆಮೇಲೆ ಶಾಸ್ತ್ರದಲ್ಲಿ ಹೇಳಿರುವ ವಿಧಿಗಿಂತಲೂ ಹೆಚ್ಚಿದ ಸಂಭಾರವನ್ನೊಳಗೊಂಡಿರುವ ಯಜ್ಞವು ಆರಂಭವಾಯಿತು. ಯಜ್ಞಾ ಚರಣೆಗೆ ವಿಘ್ನವನ್ನಾಚರಿಸುವ ರಾಕ್ಷಸರೇ ರಕ್ಷಕರಾಗಿ ನಿಂತಿದ್ದರು. ಮೈಥಿಲಿಯ ಕುಮಾರರಾಗಿರುವ ಕುಶಲವರು - ಪ್ರಾಚೇತಸನಿಂದ ಪ್ರೇರಿತರಾಗಿ ಆ ವಾಲ್ಮೀಕಿಯು ಮೊದಲು ಅರಿತು ರಚಿಸಿರುವ ರಾಮಾ ಯಣ ಕಾವ್ಯವನ್ನು ಅಲ್ಲಲ್ಲಿ ಹಾಡತೊಡಗಿದರು. ಆಹಾ ! ಕಿನ್ನರ ಕಂಠ ರಾಗಿ ಗಾಸಿನಿಪುಣರೆನಿಸಿರುವ ಆ ಕುಮಾರರು-ವಾಲ್ಮೀಕಿ ಮಹಾಮುನಿ ರಚಿತವಾದ ರಾಮನ ದಿವ್ಯ ಚರಿತೆಯನ್ನು ಸರಸವಾಗಿ ಹಾಡುತಲಿರಲು, ಕೇಳುವವರ ಮನವು ಪರವಶವಾಗುತಲಿದ್ದಿ ತು, ಆ ಮಕ್ಕಳ ರೂಪಗೀತ ಗಳನ್ನು ನೋಡಿ, ಕೇಳಿ, ಹರ್ಮಿತರಾದ ಯೋಗ್ಯರುಅರಿಕೆಮಾಡಲು, ಕುತೂ ಹಲದಿಂದ ರಾಮನು ಅವರನ್ನು ಕರೆಯಿಸಿ, ತನ್ನ ಸಹೋದರರಿಂದೊಹ ಗೂಡಿ, ಕೇಳಿ ಆನಂದಭರಿತನಾದನು, ಆಗಲಾ ಸಭೆಯು - ಅವರ