ಪುಟ:ರಘುಕುಲ ಚರಿತಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ) ರಘುಕುಲಚರಿತಂ, ೧೧೫ ಕುಮುದನೆಂಬ ನಾಗನು ಅದನ್ನು ಲೋಭದಿಂದ ಅಪಹರಿಸಿರಬಹುದೆಂದು ತೋರುತ್ತದೆ ಎಂದರು. ಆ ಬಳಿಕ ಬಿಲ್ಲಾಳ, ಬಲಶಾಲಿಯೂ ಆಗಿರುವ ಕುಶನು - ಹೊಳೆಯ ದಡದಲ್ಲಿ ನಿಂತು, ಸಿಟ್ಟಿನಿಂದ ಕೆಂಪಡರಿದ ಕಣ್ಣುಳುವನಾಗಿ, ಆ ಭಜಂಗಮವನ್ನು ನಾಶಪಡಿಸಬೇಕೆಂದು ನೆನೆದು, ಬೇಗನೆ ಬಿಲ್ಲಿಗೆ ಹೆದೆ ಯನ್ನೇರಿನಿ ಗಾರುಡಾಸ್ತ್ರವನ್ನು ಸಂಧಾನ ಮಾಡಿದನು ಆ ಬಾಣಸಂಧಾನದ ವೇಗದಿಂದ ಕೂಡಲೆ ಆ ಮಡುವು - ಕಲಕಲ್ಪಟ್ಟುದಾಗಿ, ಅಲೆಗಳಂಬ ಕರಗಳಿಂದ ಕೂಲವನ್ನು ಅಪ್ಪಳಿಸುತ್ತಾ, ಕಪ್ಪದಲ್ಲಿ ಬಿದ್ದ ಕಾಡಾನೆಯಂತೆ ಘೋರವಾಗಿ ಅಬ್ಬರಿಸಿತು, ಆ ಹಿಂದೆ - ಕಡೆಯಲ್ಪಟ್ಟ ಕಡಲಿನಿಂದ ಪದ್ಮಾದೇವಿ ಯೊಂದಿಗೈತಂದ ಪಾರಿಜಾತ ವೃಕ್ಷದಂತೆ, ಒಬ್ಬ ಕನ್ನೆಯನ್ನು ಮುಂದು ಮಾಡಿಕೊಂಡು, ಕುಮುದನೆಂಬ ಭುಜಂಗರಾಜನು ಆ ಮಡುವಿ ನಿಂದ ಬೇಗನೆ ಮೇಲ ಕೈತಂದನು. - ಪ್ರಜಾಪಾಲಕನಾದಕುಶನು - ತನ್ನ ಆ ಭರಣವನ್ನು ತನಗೇ ಒಪ್ಪಿ. ಸಬೇಕೆಂದು ಕಯ್ಯಲ್ಲಿ ಹಿಡಿದು, ಇದಿರಿಗೆ ಬಂದು ನಿಂತ ಕುಮುದನನ್ನು ಕಂಡು, ಗಾರುxತಾಸ್ತ್ರವನ್ನು ಹಿಮ್ಮೆಟ್ಟಿಸಿದನು, ಸಜ್ಜನರ ಸಿಟ್ಟು ತಗ್ಗಿ ದನ ವರಲ್ಲಿ ಮುಂಜರಿವುದಿಲ್ಲ ಎಂಬುದು ದಿಟ. ಆಗ - ಗಾರುಡಾಗದೆ, ಮಹಿಮೆ ಯನ್ನು ಬಲ್ಲವನಾಗಿದ್ದ ಕುಮುದನು - ಬಹುಮಾನಕ್ಕೀಡಾದುದಾಗಿದ್ದರೂ ತನ್ನ ತಲೆಯನ್ನು ಮೂಲೋಕ ದೊಡೆಯನಾದ ಶ್ರೀರಾಮನ ಕುಮಾರ ನಾಗಿರುವ ಕುಶನಿಗೆ ತಗ್ಗಿಸಿ ಇಂತೆಂದನು:- - ಎಲೈ ದೊರೆಯೇ ! ಕಾರೈವಿಶೇಷದಿಂದ ಮಾನುಷ ವೇಷವನ್ನು. ತಾಳಿದ್ದ ವಿಷ್ಣುವಿನ ರೂಪಾಂತರವಾಗಿರುವ ನಿನ್ನನ್ನು ಚೆನ್ನಾಗಿ ಬಲ್ಲೆನು. ಇನಾನು - ನಿನ್ನ ಪ್ರೀತಿಗೆ ಎಂದಿಗೂ ಭಂಗವನ್ನುಂಟು ಮಾಡತಕ್ಕವನಲ್ಲ. ಕೈಗೆಟ್ಟಿನಿಂದ ಪುಟನೆಗೆದು ಮೇಲಕ್ಕೆ ಹಾರಿದ ಚೆಂಡನ್ನು ಆಂತು ಕೊಳ್ಳಲು ಕಯ್ಯನೆತ್ತಿ ನಿರುಕಿಸುತಲಿದ್ದ ಈ ಬಾಲೆಯು ಆಗಸದಿಂದ ಉದಿರುವ ನಕ್ಷ ತವನ್ನು ಹೇಗೋಹಾಗೆ, ಮಡುವಿನಿಂದ ಬೀಳುತಲಿರುವ ನಿನ್ನ ಈ ವಿದ ಯಾಭರಣವನ್ನು ಕೌತುಕದಿಂದ ಪರಿಗ್ರಹಿಸಿದಳು, ಸೌಭಾಗ್ಯ, ಶೌರ, ಕಾರಂನಿರ್ವಾಹ್ನ ಒಲ, ಇತ್ಯಾದಿಗಳಿಗೆ ಗಣಿಯೆನಿಸಿದ ಎಲೈ ಅರಸೆ !