ಪುಟ:ರಘುಕುಲ ಚರಿತಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , [ಣ \norAr/ r/ / w - * , - - - - - - - - - » , ಪಡೆದರು, ಪ್ರಿಯತಮೆಯರೆನಿಸಿದ ಮೂವರಾದ ಆ ಅರಸಿತಿಯರಿಂದ ಆ ಧರಾನಾಥನು - ಅರಿಗಳನ್ನಿರಿಯುವ ಉಪಾಯಗಳಲ್ಲಿ ದಕ್ಷನಾದ ಸಹಸ್ತಾಕ್ಷನು - ಮೂರು ಶಕ್ತಿಗಳಿಂದೊಡಗೂಡಿ, ಪ್ರಜೆಗಳನ್ನು ವಿನಯ ಸಂಪನ್ನರಾಗಿಮಾಡಲು, ತಿರೆಗಿಳಿದಿರುವನೆಂಬಂತೆ ಬೆಳಗುತಲಿದನು. ಒಂದು ಸಮಯ - ಮಹಾರಥನಾದ ಮಹಾರಾಜನು - ಸಮರಾಂಗಣ ದಲ್ಲಿ, ಮಘವಂತನಿಗೆ ಸಹಾಯಕನಾಗಿ ತೆರಳಿ, ಶರಗಳಿಂದ ಅಸುರರನ್ನು ಇರಿದನು, ಅಭಯವನ್ನು ಪಡೆದ ಅಮರಾಂಗನೆಯರು - ದಶರಥನ ತೋಳುಬಲವನ್ನು ಗಂಭೀರವಾಗಿ ಗಾನಮಾಡಿದರು. ಭುಜಬಲದಿಂದ ದಿಗಂತಗಳಲ್ಲಿ ಆರ್ಜಿಸಿದ ಅಧಿಕಸಂಪದವನ್ನೊಳಗೊಂಡಿರುವ ಅಜನಂದ ನನು - ಅನೇಕವೇಳೆ ರಾಜಚಿಹ್ನೆಯನ್ನು ತೆಗೆದಿಟ್ಟು, ತಮೋಗುಣಕ್ಕೆ ಡೆಗುಡದೆ, ತಮಸಾ ಸರಯೂ ತೀರಗಳಲ್ಲಿ, ಅಶ್ವಮೇಧಗಳನ್ನಾಚರಿಸಿ, ಕನಕಾಲಂಕಾರ ಸಂಶೋಭಿತವಾದ ಯೂಪಸ್ತಂಭಗಳನ್ನು ನಟ್ಟನು, ಔದುಂಬರ ದಂಡವನ್ನೂ, ಮೃಗಶ್ರಂಗವನ್ನೂ ಹಿಡಿದು ಕುಶಮಯವಾದ ಮಂಜಿಯನ್ನು ಧರಿಸಿ, ದೀಕೈಗೊಂಡು, ಮನದಿಂದ ಕೃಷ್ಣಾಜಿನದ ಮೇಲೆ ಯಜ್ಞವಾಟದೊಳಗೆ ಯಜಮಾನನಾಗಿ ಕುಳಿತಿರುವಾಗ - ಪರಮೇಶರನು - ಆತನಲ್ಲಿ ಸಾನಿಧ್ಯವನ್ನು ತೋರಿ, ಬಹು ತೇಜಸ್ವಿಯನ್ನಾಗಿ ಮಾಡುತಲಿದ್ದನು. ಜಿತೇಂದ್ರಿಯನಾಗಿ, ಯಜ್ಞಗಳ ನಾಚರಿಸಿ, ಕಡೆಯಲ್ಲಿ ಅವನ್ಮಥನೆಂಬ ಮಂಗಳಸ್ತಾನವನ್ನು ಮಾಡುವ ಸಂದರ್ಭದೊಳಗೆ - ಶಕಸಮಾಜವನ್ನು ಆಕ್ರಮಿಸಲು ತಕ್ಕವನೆನಿಸಿದ್ದ ದಶರಥನು - ದೇವೇಂದ್ರನಿಗೆ ಮಾತ್ರವೇ ತಲೆಯನ್ನು ತಗ್ಗಿಸುತ್ತಿದ್ದನು. ಏಕರಥನಾಗಿದ್ದ ಮಹಾಬಲಶಾಲಿ ಯಾದ ಈ ದಶರಥನು - ಚಾಪಧರನಾಗಿ ಹರಿಹಯನಿಗೆ ನುಂಗಲಾಳೆನಿಸಿ, ಅನೇಕಸಾರಿ ಅಸುರಾಳಿಯೊಡನೆ ಹೋರಾಡುವಾಗ - ವಿಮಂಡಲವನ್ನು ಮುಚ್ಚುತಲಿರುವ ರಣಧ ಆಯನ್ನು, ಹಗೆಗಳ ಮೆಯ್ತಿಂದಿಳಿದ ರಕ್ತಧಾರೆಗಳಿಂದ ಪರಿಹರಿಸು ತಲಿದ್ದನು. ಆ ಬಳಿಕ - ಸಮದೃಷ್ಟಿಯಲ್ಲಿ ಯಮನನ್ನೂ, ಧನದಾನದಲ್ಲಿ ಕುಬೇರನನ್ನೂ, ನೇಮದಲ್ಲಿ ಈಶ್ವರನನ್ನೂ, ಐಶ್ವಥ್ಯದಲ್ಲಿ ಇಂದ್ರನನ್ನೂ