ಪುಟ:ರಘುಕುಲ ಚರಿತಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಅ ರಘುಕುಲ ಚರಿತಂ ಹೋಲುತಲಿರುವ ಚಕ್ರವರಿಯೆನಿಸಿದ ದಶರಥ ಮಹಾರಾಜನನ್ನು ದರ್ಶ ನಮಾಡಬೇಕೆಂದೆಳಸಿರುವನೆಂಬಂತೆ ವಸಂತನು – ನವಕುಸುಮೋಪಹಾ ರದಿಂದ ಬೆಳಗುತ್ತ ಆ ನಾಡಿಗೈತಂದನು. ಅದುವರೆಗೆ ತೆಂಕಲದೆಸೆಯನ್ನ ಲಂಕರಿಸಿದ್ದ ರವಿಯು - ಕುಬೇರನಿಗೆಡೆಯಾದ ಬಡಗದಿಕ್ಕಿಗೆ ತೆರಳಬೇ ಕೆಂದೆಳಸಿ, ಸಾರಥಿಯಾದ ಅರುಣನಿಂದ ತೇರಿನ ಕುದುರೆಗಳನ್ನು ತಿರು ಗಿಸಿ, ಹಿಮವನ್ನ ಡಗಿಸುವುದರಿಂದ ಮುಂಜಾನಗಳನ್ನು ಬೆಳಗಿಸುತ್ತಾ, ಮಲಯಪರ್ವತವನ್ನು ಬಿಟ್ಟನು, ಮೊದಲು ತಳಿರು, ಆಮೇಲೆ ಹೂವು, ತರುವಾಯ ಆರಡಿ ಮತ್ತು ಕೋಗಿಲೆಗಳ ಇಂಪಾದ ದನಿ, ಈ ಕಮ ವನ್ನು ಅನುಸರಿಸಿದ ಮರಗಿಡಬಳ್ಳಿಗಳ ಗುಂಪಿನಿಂದ ಬೆಳಗುತಲಿರುವ ವನಸ್ಥಲಿಯಲ್ಲಿ, ವಸಂತನು ಮೈದುಂಬಿ ಕಂಗೊಳಿಸುತ್ತಿದ್ದನು, ವಿನಯದಿಂ ದಲೂ, ಶೌಯ್ಯಾದಿ ಗುಣಗಳಿಂದಲೂ ಏಳಿಗೆಗೆ ಬಂದು, ಪರೋಪಕಾರ ವನ್ನೇ ಫಲವನ್ನಾಗಿ ಪಡೆದಿರುವ ದಶರಥನ ನಿರಿಯನ್ನು, ಅರ್ಥಿಗಳು ಆಶ್ರಯಿಸುವಹಾಗೆ, ವಸಂತನು ಚೆನ್ನಾಗಿ ಪೋಪಿಸಿರುವ ಕಮಲಿನಿ ಯನ್ನು, ಅಳಿಗಳೂ, ಜಲಪಕ್ಷಿಗಳೂ ಅನುಸರಿಸತೊಡಗಿದುವು. ಅಶೋಕ ತರುಗಳೊಳಗೆ ತಳಿರುಗಳ, ಕುಸುಮಗಳ ನೋಟಕರ ಕಣ್ಮನಗ ಳನ್ನು ಸೆಳೆಯುತಲಿದ್ದುವು, ವಸಂತನು - ವನಲಕ್ಷ್ಮಿಯ ಕಪೋಲಗ ಳಲ್ಲಿ ಹೊಸದಾಗಿ ಬರೆದ ಚಿತ್ರಗಳೆಂಬಂತಿರುವ ಗೋರಂಟ ಗಿಡಗಳ ಹೂಗಳೊಳಗೆ ಬಂಡನ್ನು ಕುಡಿದ ದುಂಬಿಗಳು - ತಣಿದು, ಸಂತಸದಿಂದ ಆ ವನದೇವತೆಯನ್ನು ಕೊಂಡಾಡುತಲಿವೆಯೋ ಎಂಬಂತೆ ಎಲ್ಲೆಲ್ಲಿಯ ಇಂಪಾಗಿ ದನಿಗೆಯ್ಯುತಲಿದ್ದು ವು, ಕಾಮಿನಿಯಂತಿರುವ ಸಿಹಿಮಾವಿನ ಗಿಡದ ಕೊನೆಯು-ಮಲಯಪರ್ವತದಿಂದ ಹರಿದುಬರುವ ಮಂದಮಾರುತ ದಿಂದ ಅಲುಗುತ್ತಾ, ಕರತಲದಂತಿರುವ ತಳಿರುಗಳಿಂದ ಅಭಿನಯ ವಿದ್ಯೆ ಯನ್ನು ಕಲಿಯುತಲಿರುವಂತೆ ಕಾಣಬಂದು, ರಾಗದ್ವೇಷವಿಲ್ಲದವರ ಮನವನ್ನೂ ಸೆಳೆಯುತಲಿದ್ದಿತು. ವಸಂತರುತುವಿನ ಆದಿಭಾಗದಲ್ಲಿ - ಸುವಾಸನೆಯನ್ನೊಳಗೊಂಡಿರುವ ಸಿಹಿಮಾವಿನ ಗಿಡಗಳ ಸಾಲುಗಳೊ ಳಗೆ, ತ೪ರುಗಳನ್ನು ತಿಂದು, ಕೊಬ್ಬಿ, ಕೂಗುತಲಿರುವ ಸರಕೃತಗಳ ರುತಗಳು - ಮುದ್ದು ಮಕ್ಕಳ ತೊದಲು ನುಡಿಗಳಂತೆ ಇಂಪಾಗಿ ಕೇಳ