ಪುಟ:ರಘುಕುಲ ಚರಿತಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ರಘುಕು೬ಚರಿತಂ. ೧೪೩ ಕಾಮುಕಾ ವಸ್ಥೆಗೆ ತಕ್ಕಂತೆ ಇತ್ತು. ದೊರೆಯು ಹೀಗೆ ಕ್ಷಯರೋಗ ಗ್ರಸ್ತನಾಗಲು, 'ಆ ರಘುವಂಶವು, ಕೊನೆಯ ತಲೆಯೊಂದು ಮಾತ್ರವುಳ ಚಂದ್ರಸಿರುವ ಆಕಾಶದಂತೆಯೂ, ಕೆಸರುಮಾತ್ರ ಉಳಿದಿರುವ ಒಣ ಹೊಂಡದಂತೆಯ, ಸಣ್ಣಗೆ ಉರಿಯುತ್ತಿರುವ ಸೊಡರಿನಂತೆಯ, ಕಾಂತಿ ರಹಿತವಾಗಿತ), ಅಗ್ನಿವಣ್ಣನ ಮಂತ್ರಿಗಳು, ದೊರೆಗೆ ಏನೋ ರೋಗವಿ ರಬಹುದೆಂದು ಅನುಮಾನ ಪಡುತ್ತಿದ್ದ ಪ್ರಜೆಗಳಿಗೆ ಆತನ ಮಂತ್ರಿಗಳು ರೋಗವನ್ನು ಮುಚ್ಚಿ, ದೊರೆಯ ಸಂತಾನಾಪೇಕ್ಷೆಯಿಂದ ಜಪದಿಗ ಳನ್ನು ಮಾಡುತ್ತಿರುವನೆಂದು ಹೇಳುತ್ತಿದ್ದರು. ಆಅಗ್ನಿ ನತ್ಥನು ಅನೇಕಪತ್ನಿ ಯುಳ್ಳವನಾದರೂ ಮಕ್ಕಳಿಲ್ಲದವನಾಗಿ, ವೈದ್ಯರ ಪ್ರತಿಕ್ರಿಯೆಗೆ ತಗ್ಗದ ರೋಗವನ್ನು ಹೊಂದಿ, ದೊಡ್ಡ ದೀಪವು ವಾಯುವನ್ನು ಅತಿಕ್ರಮಿನಿಲಾ ರದಂತೆ ಆ ರೋಗಬಾಧೆಯನ್ನು ಪರಿಹಾರಮಾಡಿಕೊಳ್ಳಲಾರದೆ ರೋಗವಶ ವಾದನು, ಮಂತ್ರಿಗಳು ಮೃತನಾದ ದೊರೆಯ ಕಳೆಬರವನ್ನ ಅಪರ ಪ್ರಯೋಗಜ್ಜನಾದ ಪುರೋಹಿತನ ಲಕ, ಅರಮನೆಯ ಉಪವನದಲ್ಲಿ ರೋಗಶಾಂತಿ ಎಂಬವಾಗದಿಂದ ಗೂಢವಾಗಿ ದಹಿಸಿದರು, ಮಂತ್ರಿಗಳು-ಪ್ರಮುಖರಾದ ಪ್ರಜೆಗಳನ್ನು ಕರೆಯಿಸಿ, ಅಗ್ನಿವಣ್ಣನ ಪತ್ನಿ ಯೊಬ್ಬಳು ಗರ್ಭಿಣಿಯಾಗಿರುವುದನ್ನ ಕಂಡು, ಆಕೆಗೆ ರಾಜ್ಯಪಟ್ಟ ವನ್ನು ಕಟ್ಟಿದರು, ಈ ಪ್ರಕಾರವಾ: ರಾಜನು ಮೃತನಾದನೆಂಬ ದುಃಖ ದಿಂದ ಸುರಿಸಿದ ಕಣ್ಣೀರುಗಳಿಂದ ಮೊದಲು ತಾಪವನ್ನು ಹೊಂದಿದ್ದ ಆಕೆಯ ಗರ್ಭವು, ರಾಜ್ಯಾಭಿಷೇಕಕ್ಕಾಗಿ ಸುವ ಕುಂಭಗಳಿಂದ ಸುರಿವ ಶೀತೋ ದಕದಿಂದ ತಾಪಶಾಂತಿಯನ್ನು ಹೊಂದಿತು. ರಾಣಿಗೆ ಪ್ರಸವ ಕಾಲವು ಯಾವಾಗ ಪ್ರಾಪ್ತವಾಗುವುದೋ ಎಂಗು ನಿರೀಕ್ಷಿಸುತ್ತಿರುವ ಪ್ರಜೆ ಗಳ ಪುರೋಭಿವೃದ್ಧಿಗಾಗಿ, ಶ್ರಾವಣಮಾಸಗಲ್ಲಿ ಬಿತ್ತಿದ ಬೀಜವನ್ನು ಭೂಮಿಯು ಹೇಗೆ 'ಗೋಪ್ಲವಾಗಿಟ್ಟು ಕೊಂಡಿರುವುದೋಹಾಗೆ ಆಗರ್ಭ ವನ್ನು ಧರಸಿರುವ ರಾಣಿಯು, ಆಪ್ತರಾದ ವೃದ್ಧ ಮಂತ್ರಿಗಳೊಡನೆ ನಿಂಹಾ ಸನವನ್ನು ಹೊಂದಿ, ಪತಿಯ ಆಜ್ಞಾನುಸಾರವಾಗಿ ಕ್ರಮವಾಗಿ ರಾಜ್ಯ ವನ್ನು ಆಳುತ್ತಿದ್ದಳೆಂಬಲ್ಲಿಗೆ ಹತ್ತೊಂಭತ್ತನೆಯ ಸರವು ಪೂಧ್ಯವಾದುದು.