ಪುಟ:ರಘುಕುಲ ಚರಿತಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , ( ry * * *ry / / rvJMM ೧rv ,

  • - * * *

ಅಣಿಮಾಡಿಸಿದ್ದನು, ಕುದುರೆಯ ಸಂಚಾರಕ್ಕೆ ಹಾದಿಯನ್ನು ಸರಿಪ ಡಿಸಿದ್ದನು. ಅಲ್ಲಲ್ಲಿ ಜಲವಸತಿಯನ್ನು ಕಲ್ಪಿಸಿದ್ದನು, ಬಳಿಕ ಹುಲ್ಲೆ ಮೊದಲಾದ ಮೃಗಗಳಿಂದಲೂ, ಪಕ್ಷಿಗಳಿಂದಲೂ ತುಂಬಿರುವ ಆ ವನವನ್ನು ಹೊಕ್ಕನು. ತರುವಾಯ - ಯಾವುದೊಂದು ಕೊರತೆಯೂ ಇಲ್ಲದೆ, ಟಂಕಾರದಿಂದ ಕೇಸರಿಗಳಿಗೆ ರೋಷವನ್ನುಂಟುಮಾಡುವ ನರ ವರನು - ಚಿನ್ನದಂತೆ ತಳತಳನೆ ಹೊಳೆವ ಮಿಂಚೆಂಬ ಹೆದೆಯಿಂದೊಡ ಗೂಡಿದ ಇಂದ್ರಚಾಪವನ್ನು ತಳೆವ ಭಾದ್ರಪದ ಮಾಸದಂತೆ, ಮರ್ವಿ ಯಿಂದ ಸಹಿತವಾದ ಚಾಪವನ್ನು ಕಯ್ಯಲ್ಲಿ ಎತ್ತಿಹಿಡಿದನು. ಅಪ್ಪು ಹೊತ್ತಿಗೆ ಸರಿಯಾಗಿ, ಒಂದು ಹುಲ್ಲೆಗಳ ಹಿಂಡು ಇದಿರಿಗೆ ಸುಳಿಯಿತು. ಅದರೊಳಗೆ, ಕೆಲವು ಎಳೆಮರಿಗಳು- ತಂತಮ್ಮ ತಾಯ ಕೆಚ್ಚಲಲ್ಲಿ ಹಾಲು ಕುಡಿವ ಸಡಗರದಲ್ಲಿ, ಅಡಿಗಡಿಗೂ ಕಾಲುಗಳಿಗೆ ತೊಡರಿ, ನಡೆಗೆಗೆ ಎಡೆ ಗುಡದಿದ್ದು ವು. ಮತ್ತೆ ಕೆಲವು – ಬಾಯ್ಕ ಳಿಂದ ದರ್ಭಯ ಹುಲ್ಲನ್ನು ಕಡಿಯುತಲಿದ್ದು ವು. ಇನ್ನು ಕೆಲವ-ತಿಂದು ಕೊಬ್ಬಿ ನೆಲದಲ್ಲಿ ಗೊರಸ ನ್ಯೂರುವುದೇ ಅರಿವಿಗೆ ಬಾರದಹಾಗೆ ಹಾರಾಡುತಲಿದ್ದು ವು ಆಗಲಾ ವಸುಮತೀಶನು - ಬಯಸಿದ ಹೊತ್ತಿಗೆ ಸರಿಯಾಗಿ ಇದಿರಿಗೆ ಬಂದ ಜಿಂಕೆಯ ಹಿಂಡನ್ನು ಕಂಡಕೂಡಲೆ, ಬಹು ತೊರೆಯಿಂದೊಡಗೂಡಿ, ವೇಗಶಾಲಿಯಾದ ವಾಜಿಯಮೇಲೆ ಕುಳಿತಿದ್ದವನಾಗಿಯೇ, ಬತ್ತಳಿಕೆ ಯಿಂದ ಬಾಣವನ್ನು ಹಿರಿದು ಹೆದೆಯಲ್ಲಿಡತೊಡಗಿದನು ಅದನ್ನು ನೋ ಡಿದ ಹುಲ್ಲೆಗಳು-ಅಂಜೆ, ಚೆದರಿ, ತಲೆಯನ್ನೆತ್ತಿ, ನೀರುತುಂಬಿ ಚಲಿಸುತ ಲಿರುವ ದೃಷ್ಟಿಗಳನ್ನು ಒಟ್ಟಿಗೆ ಆಗಸದ ಬೈಲಿನಲ್ಲಿ ಹರಡಿದುವು, ಆಗಲಾ ಕಾಡು- ಅರಳಿ, ಹರಡಿ, ಗಾಳಿಯಿಂದಲುಗುತಲಿರುವ ತಂಪಾದ ಕನ್ನದಿ ಲೆಗಳಿಂದೊಡಗೂಡಿದಂತೆ ಕಪ್ಪಾಗಿ ಕಂಗೊಳಿಸುತಲಿದ್ದಿತು, ಬೆಲ್ಲಾಳುಗ ಳೊಳಗೆ ಹರಿಯಂತೆ ಹೆಸರುವಾಸಿಯನ್ನು ಪಡೆದಿರುವ ತಿರೆಯಾಣ್ಮ ನೂಂದು ಹರಿಣವನ್ನು ಗುರಿಹಿಡಿದು ಹೊಡಯಲಿಕ್ಕಣಿಯಾದನು, ಹರಿಣಿ ಯೊಂದು ತನ್ನಿನಲ್ಲಿರುವ ಅನುರಾಗದಿಂದ ಅಂಬಿನಸೆಟ್ಟು ಅದಕ್ಕೆ ಬೀಳದ ಹಾಗೆ ತನ್ನ ಮೆಯ್ದನ್ನು ಮರೆಮಾಡಿ ನಿಂತಿತು. ಬಾಣವನ್ನು ಬಿಡಲು ಕಿವಿಯವರೆಗೂ ಹೆದೆಯನ್ನು ಸೆಳೆದಿದ್ದ ದೊರೆಯು - ಅದನ್ನು ಕಂಡನು