ಪುಟ:ರಘುಕುಲ ಚರಿತಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧e ಶ್ರೀ ಶಾ ರ ದಾ rnd MMಯ ಅರಸುವಹಾಗೆ, ಹರಿಯನ್ನು ಶರಣಾಗಿ ಬಯಸಿ, ಆತನಬಳಿಗೆತೆರಳಿದರು. ಆ ಅಮರರ್ಕಳೂ ಕಡಲತಡಿಗೈದುವಲ್ಲಿಗೆ ಸರಿಯಾಗಿ, ಪವಳಿಸಿದ್ದ ಪುರಾಣ ಪರುಪ್ಪನೂ ಎಚ್ಚತ್ತು, ಯಾಚಕರು ಗುರಿಯಿಟ್ಟು ಹೋದ ಯಜ ಮಾನನು - ಬೇರೊಂದು ಕೆಲಸಕ್ಕೆ ತೊಡರದಿರುವುದು, ಕಾರಸಿದ್ದಿಯಾ ಗಲು ಪ್ರಥಮ ಶುಭಲಕ್ಷಣವಲ್ಲವೆ ? ದಿವೇಕ .ರು - ಶೇಷನ ಶರೀರವೆಂಬ ನಿಂಹಾಸನದಮೇಲೆ ಮಂಡಿಸಿರುವ ಸರಸಿಜಾಕ್ಷನನ್ನು ಕಂಡರು, ಆಗ ಲಾವಿಷ್ಣುವಿನ ದೇಹವು – ಆದಿಶೇಷನ ಹೆಡೆಯ ರತುನಗಳಿಂದ ಹೊರ ಹೊರಟು ಬೀರುತಲಿರುವ ಬೆಳಕಿನಿಂದ ಬೆಳಗುತಲಿದ್ದಿತು, ಸಿರಿಯು - ಅರಳಿದ ತಾವರೆಯಲ್ಲಿ ಪದ್ಮಾಸನದಿಂದ ಕುಳಿತು, ತೊಡೆಯ ದುಕೂಲದ ಮೇಲೆ ಮೇಖಲೆಗೆ ಅಡಿಗಳು ತಾಗದಹಾಗೆ ತನ್ನೆರಡು ಕರತಲಗಳನ್ನೂ ನೀಡಿದ್ದಳು, ಅಲ್ಲಿ ಹರಿಯು ತನ್ನ ಚರಣಗಳನ್ನು ಅರ್ಪಿಸಿದ್ದನು, ಮತ್ತು - ಅರಳಿದ ಬೆಳ್ಳಾವರೆಯಂತೆ ಬೆಳಗುವ ಕಣ್ಣುಗಳನ್ನೊಳಗೊಂಡು,ಎಳೆಬಿಸಿ ಲಿನಂತೆಸೆವ ಬಟ್ಟೆಯನ್ನು ಇದ್ದುದರಿಂದ, ಪ್ರಾರಂಭದಲ್ಲಿ ನೋಡ ಲಿಕ್ಕೆ ಹಿತವಾಗಿರುವ ಶರತ್ಕಾಲದ ದಿವಸದ ಬೆಳಗಿನಂತೆ ಕಂಗೊಳಿಸುತಲಿ ದನು. ತಳತಳನೆ ಹೊಳೆಯುತಲಿರುವ ಪ್ರಭೆಯಿಂದ ತುಂಬಿದ ಶ್ರೀವ ತೃವೆಂಬ ಮಚ್ಛೆಯನ್ನುಳ್ಳವನಾಗಿ, ಲಕುಮಿಯು – ತನ್ನ ಬೆಡಗನ್ನು ನೋಡಿಕೊಳ್ಳಲು ಅಣಿಯಾದ ಕನ್ನಡಿಯಂತಿ ವ ಸಾಗು ಜಲಸಾರವಾದ ಕೌಸ್ತುಭವೆಂಬ ದಿವ್ಯರತ್ನವನ್ನೂ, ಅಗಲವಾದ ಎದೆಯಲ್ಲಿ ಅಳವಟ್ಟಿದ್ದನು ಶಾಖೆಗಳಂತಿರುವ ತೋಳುಗಳಿಂದ, ಬೆಲೆಯಿಲ್ಲದ ಬಗೆಬಗೆಯ ಉಡಿಗೆ ತೊಡಿಗೆಗಳ ಅಲಂಕಾರವನ್ನು ಪಡೆದು, ಜಲನಿಧಿಯ ನಡುವೆ ಮೊಳೆತ ಪಾರಿಜಾತ ವೃಕ್ಷದಂತೆ ಕಾಣಬರುತ್ತಿದ್ದನು. ಅಸುರಾಂಗನೆಯರ ಕಪೋ ಲಗಳಲ್ಲಿನ ಮದರೇಖೆಗಳನ್ನು ಅಳಿಸಬಲ್ಲ ಸುದರ್ಶನನೇ ಮೊದಲಾದ ಆಯುಧಗಳ ಅಭಿಮಾನಿ ದೇವತೆಗಳ - ಶರೀರವನ್ನಾಂತು ಸನ್ನಿಧಿಯಲ್ಲಿ ಜಯಘೋಷವನ್ನು ಉದಹರಿಸುತ್ತಿದ್ದ ಸೇವೆಯನ್ನು ಸ್ವೀಕರಿಸುತಲಿ ದ್ದನು, ಮತ್ತು-ಸನ್ನಿಧಾನ ವಿಶೇಷದಿಂದ ಶೇಪನೊಡನೆ ವಿರೋಧವನ್ನು ತೊರೆದು, ಮಾಗಿರುವ ವಜ್ರಾಯುಧದ ಗಾಯಗಳನ್ನೊಳಗೊಂಡಿರುವ ಟ ೧