ಪುಟ:ರಘುಕುಲ ಚರಿತಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ ೧೬ ದೇಹದಿಂದೊಡಗೂಡಿ * ವಿಶೇಷವಾಗಿ ತಗ್ಗಿ, ಸಮಿಾಪದಲ್ಲಿ ಅಂಜಲಿ ಬದ್ದ ನಾಗಿ ನಿಂತಿರುವ ಗರುತ್ಮಂತನ ಸೇವೆಯನ್ನು ಕೈಗೊಳ್ಳುತಲಿದ್ದನು ಹಾಗೆ ಎಚ್ಚರಗೊಂಡ ಭಗವಂತನನ್ನು ಕುರಿತು, ಏನ್ಯ ಜಗನ್ನಾಥನೆ ! ಸುಖಶಯನವು ಮುಗಿದುದೆ ? ಎಂದು ಬೃಗುಮೊದಲಾದ ಮಹರ್ಷಿಗಳು ಕುಶಲಪ್ರಶ್ನೆಯನ್ನು ಮಾಡುತಲಿದ್ದರು. ಆಗತಾನೆ ಯೋಗನಿದ್ರೆಯಿಂದೆ ಘ್ನತ್ತಿದ್ದ ಪದ್ಮನಾಭನು - ನಿದ್ರಾವಸಾನದಿಂದ ನಿಲವಾಗಿರುವ ಪಾವ ನವಾದ ಕಟಾಕ್ಷಗಳನ್ನು ಆವರಮೇಲೆ ಹರಡುತ ಅನುಗ್ರಹಿಸುತಲಿದ್ದನು. ಆಗ - ಅಸುರನ್ನಡಗಿಸುವ ಹರಿಗೆ ಸುರರೆಲ್ಲರೂ ಉದ್ದವಾಗಿ ಬಾಗಿ ಭಕ್ತಿಯಿಂದ ಅತ್ತ ಬಿದ್ದ ರು. ಬಳಿಕ ವಾಕ್ಕಿಗೂ ಮನಸ್ಸಿಗೂ ಅಗೋಚರನಾಗಿ, ಸೋತಾರ್ಹನೆನಿಸಿ- ವ ಸರ್ವೆ ಶರನನ್ನು ಸ್ತುತಿಸ ತೊಡಗಿದರು. ಮೊಟ್ಟಮೊದಲು ಜಗತ್ತನ್ನು ಸೃಷ್ಟಿಸಿ, ಬಳಿಕ ಆ ಪ್ರಪಂಚ ವನ್ನು ಪೋಷ್ಟಿಸುತ್ತಿದ್ದು, ತದನಂತರದಲ್ಲಿ ವಿಶ್ವಸಂಹಾರಿಯೂ ಆಗುತ್ತಾ, ಹೀಗೆ ಮೂರುಬಗೆಯಾದ ಸ್ವರೂಪವನ್ನೊಳಗೊಂಡಿರುವ ಭಗವಂತನಾದ ನಿನಗೆ ವಂದನೆಯನೆ ಸ್ಪಿಸುವೆವು. ಮುಗಿಲಿನಿಂದ ಸುರಿಯುವ ಮಳೆ ನೀರು- ಒಂದೇ ಬಗೆಯಾದ ಸವಿಯನ್ನೊಳಗೊಂಡಿದ್ದ ರೂ, ಬೇರೆಬೇರೆ ಸ್ಥಳಗಳಲ್ಲಿ ಬಿದ್ದು , ಭಿನ್ನ ಭಿನ್ನವಾದ ರುಚಿಯನ್ನು ಪಡೆಯುವಹಾಗೆ, ಎಲೈ ದೇವನೇ ! ನೀನೂ ಬೇರುಬೇರಾದ ಗುಗಳನ್ನಾಶ್ರಯಿಸಿ, ಸೃಷ್ಟಿಯೆ ಮುಂತಾದ ಕೆಲಸಗಳನ್ನು ಮಾಡುವೆ. ಎಲೈ ಸರ್ವ ಶಕ್ತನೇ ! ಯಾವನೊ ಬೃನೂ - ನಿನ್ನ ಇಯತ್ತೆಯನ್ನು ಅರಿಯಲಾರ, ಎಲ್ಲ ಲೋಕಗಳನ್ನೂ ನೀನು ಅಳೆಯಬಲ್ಲೆ ನೀನಾದರೆ ನಿಷ್ಪ ಹನು, ಎಲ್ಲರ ಪ್ರಾರ್ಥನೆಗಳನ್ನೂ


- - " -

  • ಪೂರ್ವ ದಲ್ಲಿ ತಲೆಯಿಂದ ಖುರ್ಥಿಸಲ್ಪಟ್ಟ ಭಗವಂತನು - ಮಾ ತಲಿ ದು ತಂಗಿಯಾದ ಗುಣಕೇಶಿಗೆ ಪತಿಯಾಗಿದ್ದ ನಾಗಸಿಗೆ ಛಯವಿಲ್ಲದಂತೆ ಅಭಯದಾನ ಮಾಡಿದನು. ದಹನವಾಗಿದ್ದರೂ ತನ್ನ ಶತ ಪಕ್ಷವನ್ನು ರಕ್ಷಿಸಿದನೆಂದು ಗರುಡ ನಿಗೆ ಸಿಟ್ಟು ಹತ್ತಿತು, ಹರಿಯು - ತನ್ನ ಕಾ೦ಕಿರಿಬೆರಳಿನ ಭಾರದಿಂದ, ಕೊಬ್ಬಿದ್ದ ಗರುತ್ಮ೦ತನ ಹೆಮ್ಮೆಯನ್ನು ಅಡಗಿಸಿ ತಗ್ಗಿಸಿದನು ಎಂದು ಭಾರತಕಥೆ,