ಪುಟ:ರಘುಕುಲ ಚರಿತಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨. ಶ್ರೀ ಶಾ ರ ದ . [೧೧ ಗುರಿಯಿಟ್ಟನು. ಮಹಾಸರ್ಪವನ್ನು ಹಿಡಿದಪ್ಪಳಿಸಿ,ವಿಕ್ರಮವನ್ನು ತೋರುವ ಗರುಡನು- ನೀರು ಹಾವುಗಳಲ್ಲಿ ಪ್ರವರ್ತಿಸುವುದುಂಟೆ ? ಅಸ್ತ್ರ ವಿದ್ಯಾ ಪಾರಂಗತನಾದ ರಾಮನು – ಅಂಬಿನಲ್ಲಿ ತೀವ್ರವಾದ ವಾಯುದೇವತೆ ಯನ್ನು ಅಭಿಮಂತ್ರಿಸಿ ಇಟ್ಟನು, ದೊಡ್ಡ ಬೆಟ್ಟದಂತೆ ಬಲು ತೋರವಾಗಿ ಯ ಭಾರವಾಗಿಯೂ ಇರುವ ಆ ರಕ್ಕಸರನ್ನು ಬಿರುಗಾಳಿಯು ಹಣ್ಣೆಲೆ ಯನ್ನು ಹೇಗೋಹಾಗೆ, ನಿಮಿಷಮಾತ್ರದಲ್ಲಿ ಹಾರಿಸಿದನು, ಆ ಮಾರೀ ಚನ ಸಂಗಡ ಮಾಯೆಯಿಂದ ಅಲ್ಲಲ್ಲಿ ಓಡಾಡುತಲಿದ್ದ ಸುಬಾಹುವೆಂಬಸು ರನನ್ನು ಕಂಡನು. ಕುಶಲನಾದ ಕಾಕುತ್ಸ್ಥನು - ಕಣೆಗಳಿಂದ ಆ ರಕ್ಕಸನನ್ನು ತುಂಡುತುಂಡಾಗಿ ಕತ್ತರಿಸಿ, ಆಶ್ರಮದ ಹೊರಗಿರುವ ಹಕ್ಕಿಗಳಿಗೆ ಹಂಚಿಕೊಟ್ಟನು. ಆ ಬಳಿಕ ಯಾಜ್ಞೆಸರು - ಸಂಯುಗದಲ್ಲಿನ ರಾಘವರ ವಿಕ್ರಮವನ್ನು ಕೊಂಡಾಡಿದರು, ಯಜ್ಞವಿಘವು ತೊಲಗಲು ಹರ್ಷಿತರಾದರು, ಮನ ದಿಂದಿರುವ ಕುಲಪತಿಯಾದ ಮುನಿಯ ಅಧ್ಯರ ಕ್ರಿಯೆಗಳನ್ನು ಕ್ರಮ ವಾಗಿ ನೆರವೇರಿಸಿದರು. ದೀಕ್ಷೆಯು ನಿರಂತರಾಯವಾಗಿ ಈಡೇರಿ, ಅವಭ್ಯಥಸ್ನಾನವನ್ನು ಮಾಡಿದ ಕೂಡಲೆ, ಚಲಿಸುತಲಿರುವ ಕಾಕ ಪಕ್ಷಗಳನ್ನೊಳಗೊಂಡಿರುವ ಶಿರಗಳಿಂದ ಬಾಗಿದ ರಾಮಲಕ್ಷ್ಮಣರನ್ನು ಮುನಿಯು ಹರ್ಷದಿಂದ ಹರಸುತ, ದರ್ಭೆಯನ್ನು ಹಿಡಿದು ಗಾಯವಾಗಿದ್ದ ಕರತಲದಿಂದ ತಡವಿದನು. ಅದುವರೆಗೆ ಮಿಥಿಲಾ ನಗರದಲ್ಲಿ ಜನಕ ಮಹಾರಾಜನು - ಕ್ರತು ವನ್ನಾಚರಿಸಬೇಕೆಂದು ಸಂಚಾರವನ್ನೆಲ್ಲ ಪಡಿಸಿಕೊಂಡಿದ್ದನು, ವಿಶ್ವಾಮಿತ್ರನನ್ನು ಕರೆಯಕಳುಹಿದನು. ರಾಮಲಕ್ಷ್ಮಣರು - ಮಿಥಿಲಾ ಧಿಪನ ಬಳಿಯಲ್ಲಿ ಬಲವಾದ ಬಿಲ್ಲೊಂದಿರುವುದೆಂದು ಕರ್ಣಾಕರ್ಣಿಕ ಯಿಂದ ಕೇಳಿದ್ದರು, ಅವರ ಮನದ ಬಯಕೆಯನ್ನು ತೀರಿಸಲು - ತಪ ನಿಯು ಸಂಗಡಲೇ ಅವರನ್ನೂ ಕರೆದುಕೊಂಡು ಹೊರಟನ:. ಪಯಣದಮೇಲೆ ಪಯಣವನ್ನು ಬೆಳಸುತ ದಾರಿಯನ್ನು ನಡೆದು, ಒಂದು ರಾತ್ರಿ - ಒಂದಾನೊಂದು ರಷ್ಟವಾದ ತರುಮೂಲದಲ್ಲಿ ಟಂಕಿ ಯನ್ನು ಮಾಡಿದರು, ದೀರ್ಘತಪನಾದ ಗೌತಮ ಮುನಿಯ ಕಳವು