ಪುಟ:ರಘುಕುಲ ಚರಿತಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. ರಘುಕುಲಚರಿತಂ ೩೬ w - ಇಂದ್ರನಿಗೆ ಕ್ಷಣಕಾಲಮಾತ್ರ ಕಳತ್ರವೆನಿಸಿ, ಪತಿಯ ನಿಟ್ಟಿನ ಬಿರುನುಡಿ ಯಿಂದ ಶಿಲೆಯಾಗಿ, ಅದೃಶ್ಯವೆನಿಸಿ ಬಿದ್ದಿದ್ದುದು ಅಲ್ಲಿಯೇ ಬಹುಕಾ ಲಕ್ಕೆ ಶಿಲಾಮಯವಾಗಿದ್ದ ತನ್ನ ರೂಪವನ್ನು ತೊರೆದು, ಬಲು ಅಂದವಾದ ಪೂರ್ವರೂಪವನ್ನು ಮುನಿವಧುವು ಪಡೆದುದು, ಪಾಪಪರಿಹಾ ರಕವಾದ ರಾಮಪದರಜದ ಅನುಗ್ರಹವೇ, - ಅರ್ಥಕಾಮಗಳೊಡನೆ ದೇಹವನ್ನಾ೦ತ ಧರವೆಂಬಂತೆ, ರಾಘ ವರಿಂದ ಸಹಿತನಾಗಿ ಮುನಿಯು ಬಂದಿರುವ ಸುದ್ದಿಯನ್ನು ಕೇಳಿ, ಜನಕ ಜನೇಶ್ವರನು - ಉಚಿತಸತ್ಕಾರದಿಂದ ಇದಿರ್ಗೊಂಡನು. ಬಾಂದ ಳದಿಂದ ಇಳೆಗೈತಂದ ಪುನರ್ವಸ ನಕ್ಷತ್ರಗಳಂತೆ ಕಂಗೊಳಿಸುವ ಗುಣಾಭಿರಾಮರಾದ ರಾಮಲಕ್ಷ್ಮಣರನ್ನು ಅತ್ಯಾದರಗೊಂಡು, ದೃಷ್ಟಿ ಗಳಿಂದ ಪಾನಮಾಡುತಲಿರುವ ಮಿಥಿಲಾನಗರ ನಿವಾಸಿಗಳ ಮನವು - ರೆಪ್ಪೆಗಳನ್ನು, ನೋಟಕ್ಕೆ ಅಡ್ಡಿ ಮಾಡುವ ವಂಚಕಗಳನ್ನಾಗಿ ತಿಳಿಯುತಲಿದ್ದಿತು. - ಕತುಕ್ರಿಯಾವಿಧಿಯು ಕ್ರಮವಾಗಿ ಪೂರಯಿಸಿತು, ಕುಶಿಕ ವಂಶಪ್ತದೀಪನಾದ ಮುನಿಯು - ಕಾಲವಿದನಾದುದರಿಂದ, ಬಾಣಾಸನ ವನ್ನು ನೋಡಬೇಕೆಂದು ರಾಮನು ಕುತೂಹಲಪಡುತಲಿರುವುದನ್ನು ಮೈಥಿಲನಿಗರುಹಿದನು, ವೈದೇಹನಾದರೆ - ಲೋಕಪ್ರಸಿದ್ಧವಾದ ರವಿ ವಂಶದಲ್ಲಿ ರಾಘವನ ಉತ್ಪತ್ತಿಯೆಂಬುದನ್ನು ಕೇಳಿದನು, ಬಲು ಕೋಮ ಲವಾದ ರಾಮನಾಕಾರವನ್ನು ಕಣ್ಣಾರೆ ನೋಡಿದನು, ಹಸುಳೆಗಳಿಂದ ಹಿಡಿದೆತ್ತಿ ಬಾಗಿಸಲಳವಲ್ಲದ ತನ್ನ ಬಿಲ್ಲನ್ನು ನೆನೆದನು, ವರನು ಮಗ ೪ಗೆ ಕೊಡಬೇಕಾಗಿರುವ ಧನುರ್ಭಂಗ ರೂಪವಾದ ಆ ಮೂಲ್ಯವನ್ನು ದುರ್ಘಟವಾದುದನ್ನಾಗಿ ಭಾವಿಸಿದನು, ಪ್ರತಿಜ್ಞೆಯು ಪ್ರಬಲವಾದು ದೆಂದು ಚಿಂತಿಸಿದನು, ಸಲುವಳಿಯಾದ ಸಂಬಂಧವು ಸಮನಿಸದೆ ಹೋಗು ವುದೆಂಬ ಸಂಕಟದಿಂದ ಕಳವಳಿಸಿದನು, ವಿಶ್ವಾಮಿತ್ರನನ್ನು ಕುರಿತು ಇಂತಂದನು - ಎಲೈ ಮುನಿವರನೇ ! ಪ್ರಬಲವಾದ ಮದದಾನೆಗಳಿಂದಲೂ ಮಾಡಿ ಮುಗಿಸಲಳವಲ್ಲದ ಮಹಾಕಾರವನ್ನು ಮಾಡಲೆಳಸುವ ಎಳೆಯ