ಪುಟ:ರಘುಕುಲ ಚರಿತಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ 44 ಸೆಳೆತದಿಂದ ಮುರಿದ ಕಾರು ಕದಿಂದ ಬರಸಿಡಿಲಿನಂತೆ ಹೊರಟ ಬಹು ಘೋರವಾದ ಆರನವು - ಪಡುವಣ ಕಡಲ ತಡಿಯೊಳಿದ್ದ ಬಲು ಸಿಟ್ಟುಗಾರನಾದ ಭಾರ್ಗವನಿಗೆ, ಮಲಿನವಾಗಿದ್ದ ಕತ್ರ ಕುಲವು ಮರಳಿ ತಲೆಯನ್ನೆತ್ತಿದುದು ಎಂದು ಅರುಹುವಂತಿದ್ದಿತು. ಅಹಹ ! ಆ ಬಳಿಕ ಮೈಥಿಲನು - ರುದ್ರಕಾರು ಕದಲ್ಲಿ ರಾಘವನ ವೀರವನ್ನು ಸಾರವತ್ತಾದುದನ್ನಾಗಿ ಅವಲೋಕಿಸಿದನು, ಬಹುವಾಗಿ ಅಭಿನಂದಿಸಿದನು; ರೂಪವತಿಯಾಗಿ ಬಂದ ಲಕ್ಷ್ಮಿಯಂತಿರುವ ಅಯೋ ನಿಜೆಯಾದ ತನ್ನ ಆತ್ಮಜೆಯನ್ನು ಇದೇ ನಿನ್ನ ವೀTಶುಲ್ಕವೆಂದು ದಾಶರ ಥಿಗೆ ವಚನದಿಂದ ಒಪ್ಪಿಸಿದನು, ಮತ್ತು - ಸತ್ಯಸಂಗರನಾದುದರಿಂ ದಲೇ, ತೇಜಸ್ವಿಯ, ತಿನಿಧಿಯೂ ಆಗಿರುವ ಮನಿಯ ಸನ್ನಿಧಾನ ದಲ್ಲಿ, ಆ ಕೂಡಲೇ ಅಗ್ನಿ ಸಾಕ್ಷಕನಂತೆ ಅವನಿಖೆ ಯನ್ನು ಆ ರಾಘವನಿಗೆ ದಾನವಾಗಿ ಕೊಟ್ಟನು. ತರುವಾಯ ಮಹಾತೇಜನಿಯಾದ ಜನಕನು-" ಎಲೈ ಮಹಾ ರಾಜನೆ ! ನನ್ನ ಮಗಳಾದ ಈ ಗೀತೆಯನ್ನು ನಿನ್ನ ಸೊಸೆಯನ್ನಾಗಿ ಸ್ವೀಕರಿಸು, ಆಳುತನದಲ್ಲಿರುವ ಈ ನಿಮಿಕುಲವನ್ನು ಗೌರವಿಸು 22 ಎಂದು ಅರಿಕೆ ಮಾಡುವಂತೆ, ದಶರಥನಬಳಿಗೆ ಪೂಜ್ಯನಾದ ಪುರೋಹಿತ ನನ್ನು ತಡಮಾಡದೆ ಕಳುಹಿಸಿಕೊಟ್ಟನು. ದಶರಥನೂ - ರಾಮನಿಗೆ. ಮದುವೆ ಮಾಡಬೇಕೆಂದು ಸರಿಯಾದ ಸಂಬಂಧವನ್ನು ಬೆಳೆಸಲು ಯಾರ ಮನೆತನದಲ್ಲಿ ಒಳ್ಳೆಯ ಹೆಣ್ಣಿದೆ ? ಎಂದು ಚಿಂತಿಸುತಲೇ ಇದ್ದನು. ಅದುವರೆಗೆ ಸರಿಯಾಗಿ ಅನುಕೂಲವಾದ ಮಾತನ್ನು ಹೇಳತಕ್ಕ ಜನಕ ಪುರೋಹಿತನೂ ಬಂದು ಸುದ್ದಿಯನ್ನು ತಿಳಿಸಿದನು. : ಕಲ್ಪವೃಕ್ಷ ಫಲ ದಂತೆ , ಪುಣ್ಯವಂತರ ಕೋರಿಕೆಯು ತತ್ ಕ್ಷಣದಲ್ಲಿಯೇ ಫಲಿಸುವುದು ಎಂಬುದು ಸಹಜವಾಗಿದೆ. ದೇವೇಂದ್ರ ಮಿತ್ರ ನೆನಿಸಿ, ಜಿತೇಂದ್ರಿಯನಾ ಗಿರುವ ಕೋಸಲನಾಥ ನು - ಮಿಥಿಲೆಯಿಂದ ಬಂದ ಬ್ರಾಹ್ಮಣನನ್ನು ಉಚಿತವಾದ ಸತ್ಕಾರಗಳಿಂದ ಗೌರವಿಸಿ, ಆತನಿಂದ ಶುಭಸಮಾಚಾರವ ನೆಲ್ಲಿ ಕ್ರಮವಾಗಿ ಕೇಳಿ ತಿಳಿದನು. ಹರ್ಷಿತನಾದನು ಕೂಡಲೆ ಸಕಲ ಸಲಕರಣೆಗಳಿಂದೊಡಗೂಡಿ,ಸೇನೆಯೊಂದಿಗೆ ಹೊರಟನು. ಪಡೆಯಿಂದೆದ್ದ