ಪುಟ:ರಘುಕುಲ ಚರಿತಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ಆ ಚಿರಜೀವಿಯು - ಮೂಲೋಕದಲ್ಲಿಯ ಅಲೆದು, ಎಲ್ಲಿಯ ರಕ್ಷಕ ನನ್ನು ಕಾಣದೆ, ಮರಳಿ ರಾಮನನ್ನೇ ಮರೆಹೊಕ್ಕು, ತನ್ನ ಒಂದು ಕಣ್ಣನ್ನು ಮಾತ್ರ ವ್ಯರ್ಥವಾದುದನ್ನಾಗಿಮಾಡುವ ರಾಮಬಾಣಕ್ಕೆ ಬಲಿ ಕೊಟ್ಟು, ತನ್ನ ಆತ್ಮವನ್ನು ಉಳಿಸಿಕೊಂಡಿತು. ತರುವಾಯ ರಾಘವನು - ತಾನು ವಾಸಮಾಡುತಲಿರುವ ಚಿತ್ರ ಕೂಟ ಪರ್ವತವು ಅಯೋಧ್ಯೆಗೆ ಹತ್ತಿರವಾಗಿರುವುದೆಂದೂ, ಆಗಾಗ ಭರತನೇ ಮುಂತಾದವರು ಬಂದು ತೊಂದರೆಗೊಳಿಸಬಹುದೆಂದೂ ಊ ಹಿಸಿ, ಆ ಸ್ಥಲವನ್ನು ಬಿಟ್ಟು ಹೊರಟನು ಅಲ್ಲಿದ್ದ ಸಾರಂಗಗಳು ತನ್ನನ್ನು ಬಹು ಮಮತೆಯಿಂದ ಸಾಕುತಲಿದ್ದ ರಾಮಾದಿಗಳ ಪ್ರಯಾ ಣದಿಂದ ಬಹಳವಾಗಿ ಕಳವಳಗೊಂಡುವು. ಅಲ್ಲಿಂದ ಮುಂದೆ ರಾಮನು - ಅತಿಥಿಸತ್ಕಾರಗಳಿಗೆ ಅಣಿಯಾಗಿದ್ದ ತಪಸ್ವಿಗಳ ಆಯಾಯ ಪುಣ್ಯಾಶ್ರಮಗಳಲ್ಲಿ ಟಂಕಿಗಳನ್ನು ಮಾಡಿ ಕೊಂಡು, ಕ್ರಮವಾಗಿ, ಸೂರನು ಮೇಷಾದಿ ರಾಶಿಗಳನ್ನು ದಾಟ ಹೋಗುವಹಾಗೆ, ದಕ್ಷಿಣ ದೆಸೆಯನ್ನು ಕುರಿತು ಬಂದನು, ಆ ರಘು ನಂದನನನ್ನು ಹಿಂಬಾಲಿಸುತಲಿರುವ ವೈದೇಹಿಯು - ಕೈಕೇಯಿಯು ಬಲಾತ್ಕಾರದಿಂದ ತಡೆದರೂ, ಅವಳನ್ನು ತಿರಸ್ಕರಿಸಿ,ಗುಣಾನುರಕ್ತಳಾಗಿ ರಾಮನ ಬೆನ್ನಟ್ಟಿ ಬರುತಲಿರುವ ರೂಪವತಿಯಾದ ರಾಸ್ಥಲಕ್ಷ್ಮಿಯಂತ ಕಂಗೊಳಿಸುತಲಿದ್ದಳು, ಮುತ್ತು - ಅತಿಮುನಿಯ ಧರ್ಮಪತ್ನಿಯಾದ ಅನಸೂಯೆಯು ಪ್ರೀತಿಯಿಂದ ಕೊಟ್ಟ ಪುಣ್ಯಗಂಧದ ಅಂಗರಾಗವನ್ನು ಪಡೆದು, ಅದರ ಸುವಾಸನೆಯಿಂದ ಆ ವನವನ್ನು, ಪರಿಮಳಭರದಿಂದ ಪುಪ್ಪಗಳನ್ನು ಬಿಟ್ಟು ಹಾರಿಬರುತಲಿರುವ ದುಂಬಿಗಳನ್ನುಳುದನ್ನಾಗಿ ಮಾಡಿದಳು. ಹಾಗೆಯೇ ಪ್ರಯಾಣ ಮಾಡುತಲಿರುವಲ್ಲಿ, ಸಂಜೆಯ ಹೊತ್ತಿನ ಮೋಡದಂತೆ ಮೈಬಣ್ಣವುಳ್ಳ ವಿರಾಧನೆಂಬ ಘೋರನಾದ ರಾಕ್ಷಸನು ಚಂದ್ರನನ್ನು ಲಾಹುಗ್ರಹದಂತೆ,ರಾಮನ ಮಾರ್ಗವನ್ನು ತಡೆದು ನಿಂತನು. ಕೂಡಲೆ, ಲೋಕಕಂಟಕನಾದ ಆ ರಕ್ಕಸನು-ರಾಮುಲಕಣರ ನಡುವೆ ಇದ್ದ .ಅವನಿಕೆಯನ್ನು, ಶ್ರಾವಣ, ಭಾದ್ರಪದ ಮಾಸಗಳ ಮಧ್ಯದಲ್ಲಿ