ಪುಟ:ರಘುಕುಲ ಚರಿತಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ [೧೨ 1 y> F1 } -- - Y ವೃಷ್ಟಿಯನ್ನು, ವರ್ಷಪತಿಬಂಧದಂತೆ ಕೊಂಡೊಯ್ದನು, ಅದನ್ನು ಕಂಡ ಕಾಕುತ್ಸ್ಥ ರೀರ್ವರೂ- ಆ ನಿಶಿಚರನನ್ನು ಸದೆಬಡಿದು, ಅಲ್ಲಿಯೇ ಕೆಡಹಿದರೆ ದುರ್ವಾಸನೆಯಿಂದ ಆಶ್ರಮ ಭೂಮಿಯನ್ನು ಕೆಡಿಸುವನೆಂದು ನೆಲದಲ್ಲಿ ಹೂಳಿಬಿಟ್ಟರು. ಮುಂದೆ ಪಯಣವನ್ನು ಬೆಳೆಸಿದರು, ಅಗಸ್ತ್ರ ಮುನಿಯ ಸಂದರ್ಶನವನ್ನು ಮಾಡಿದರು, ಆತನ ಆಪ್ಪಣೆಯ ಪ್ರಕಾರ ಪಂಚವಟಿಯ ಪ್ರದೇಶಕ್ಕೆ ಬಂದರು, ಹಿಂದೆ ವಿಂಧ್ಯಪರ್ವತವು ತನ್ನ ಪೂರ್ವಸ್ಥಿತಿಯಲ್ಲಿಯೇ ನಿಂತಹಾಗೆ ಅಲ್ಲಿಯೇ ನೆಲಸಿದರು. ಹೀಗೆ ಕೆಲವು ಕಾಲ ಕಳೆಯುತ್ತಿರಲು, ಒಂದುವೇಳೆ - ರಾವಣನ ತಂಗಿಯಾದ ಶೂರ್ಪಣಖೆಯೆಂಬೊಬ್ಬ ರಕ್ಕಸಿಯು - ಬಿಸಿಲಿನ ಬೇಗೆ ಯಿಂದ ಬೆಂದ ಹೆಣ್ಣು ಹಾವು ಚಂದನ ತರುವನ್ನು ಅರಸುವಹಾಗೆ, ಕಾಮ ಪರವಶಳಾಗಿ, ರಾಮನನ್ನು ಬಯಸುತ ಬಂದಳು.ರಾಘವನ ಸನ್ನಿಧಿಗೈತಂ ದಳು, ತನ್ನ ವಂಶಾವಳಿಯನ್ನರುಹಿದಳು, ಸೀತೆಯ ಇದಿರಿಗೇ ತನ್ನನ್ನು ವರಿಸಬೇಕೆಂದು ಬೆಸಗೊಂಡಳು. ಕಾಮನು ಯಾರಿಗೂ ಹಿತನಲ್ಲ, ಮೇರೆಮೀಾರಿದರೆ ಕಾಮಿನಿಯರಿಗೆ ಕಾಲದೇಶಗಳನ್ನು ಮರೆಯಿಸುವನು. - ಗೂಳಿಯ ಹಿ೪ಲಿನಂತೆ ಹೆಗಲುಳ್ಳ ರಾಮನು . ವೃಪಸ್ತಂತಿಯಾದ ಆ ಶೂರ್ಪಣಖಿಯನ್ನು ಕುರಿತು, ಎಲೆ ಬಾಲೆ ! ನಾನು ಸಪತ್ನಿಕನಾ ಗಿದೇನೆ, ನೀನು ನನ್ನ ಅನುಜನನ್ನು ಭಜಿಸುವುದು ಮೇಲು, ತೆರಳು ಎಂದಾಜ್ಞಾಪಿಸಿದನು, ಆ ರಾಕ್ಷಸಿಯು- ಮೊದಲು ರಾಮನಬಳಿಗೆ ಬಂದು, ಅಲ್ಲಿಂದ ಲಕ್ಷ್ಮಣನನ್ನು ಸೇರಿ, ಆತನಿಂದಲೂ ತಿರಸ್ಕಾರವನ್ನು ಹೊಂದಿ, ಮರಳಿ ರಾಘವನಾಸರೆಗೈತಂದಳು, ಇದರಿಂದ, ಒಂದುಸಾರಿ ಒಂದು ದಡಕ್ಕೆ ಬಂದು, ಅಲ್ಲಿ ತಡೆಯನ್ನಾಲತು,ಪುನಃ ಬೇರೊಂದು ತೀರಕ್ಕೆ ದಿ, ಅಲ್ಲಿಯೂ ಅಡ್ಡಿಯಾಗಲು, ಮರಳಿ ಹಿಂದಿನ ಗಡ್ಡೆಗೆ ಬಂದು ಸೇರುವ ಹೊಳೆಯಂತಿದ್ದಳು. ಚಂದ್ರೋದಯವು - ಗಾಳಿಯಲುಗದಿರುವ ವೇಳೆ ಯಲ್ಲಿ ಕ್ಷಣಕಾಲ ಶಾಂತವಾಗಿದ್ದ ಕಡಲಿನ ಜಲವನ್ನು ಹೇಗೋ ಹಾಗೆ ಮೈಥಿಲಿಯ ನಗೆಯು - ಸ್ವಲ್ಪ ಹೊತ್ತು ಸೌಮ್ಯವಾದ ಆಕಾರದಿಂದಿದ್ದ ಆ ಯಾಮಿನೀಚರಿಯನ್ನು ಬಹು ವಿಕಾರಗೊಳಿಸಿತು. ಕೂಡಲೆ ಶೂರ್ಪ ೧ಖೆಯು - ಜಾನಕಿಯನ್ನು ಕುರಿತು ಎಲೆ ನಾರಿ ! ನನ್ನನ್ನು ನೋಡಿ