ಪುಟ:ರಘುಕುಲ ಚರಿತಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಶ್ರೀ ಕಾ ರ ದ . r೧ ರಾಮನಾಗಿ ಇದಿರಿಸಿ ನಿಂತಿರುವಂತ ಶರವರ್ಷಗುರುಬೆಯಿಂದ ಕಾಣಿ ಸಿಕೊಂಡನು, ಮತ್ತು-ಸದತನೂ, ರಣಧೀರನೂ ಆಗಿರುವ ರಾ ಮನು ದುರ್ಜನನಾದ ದೂಪಣಾಸುರನ ದೂಷಣೆಯನ್ನು ಸಹಿಸಲಿಲ್ಲ. ಆ ದೂಷಣನನ್ನೂ, ಹಾಗೆಯೇ ಖರತ್ರಿಶಿರನ್ನೂ, ಶರಗಳಿಂದ ಸದೆ ಬಡಿಯತೊಡಗಿದನು, ಕೂರಗಳಾದ ರಾಮಶರಸರ್ಪಗಳು -ರಾಕ್ಷ ಸರ ರಕ್ತಲೇಪವಿಲ್ಲದಂತೆ ಮೊದಲೇ ಪ್ರಾಇವಾಯುಗಳನ್ನು ಪಾನಮಾ ಡಿದುವು, ಬಳಿಕ ಆ ರಕ್ಕಸರ ಮೈರಕುತವನ್ನಾದರೋ, ರಣಪಕ್ಷಿಗ ಳು ಕುಡಿದು ತಣಿದುವು. ರೌದ್ರಾವೇಶದಿಂದ ರಣರಂಗದಲ್ಲಿ ನಿಂತಿರುವ ರಾಮನ ಬಾಣಗಳ ಹೊಡೆತದಲ್ಲಿ, ಕುಣಿಯುತಲಿರುವ ತಲೆಯಿಲ್ಲದ ಮುಂಡಗಳು ಹೊರತ್ತು, ಮತ್ತಾವ ಪ್ರಾಣಿಯ ಇದಿರಿಗೆ ಕಾಣಬರಲಿಲ್ಲ ಇಂತು ಆ ರಾಕ್ಷಸರ ಪಡೆಯು - ರಾಮಶರವೃಷ್ಟಿಯಲ್ಲಿ ಮುಳುಗಿ, ಆಗಸದೊಳಗೆ ನೆರೆದಿರುವ ರಣಹದ್ದು ಗಳ ವಿಶಾಲವಾದ ನೆಳಲಿನಲ್ಲಿ ಮರಳಿ ಎಚ್ಚರವಿಲ್ಲದಂತೆ ಮೈಮರೆತು ಮಲಗಿತು. ತರುವಾಯ - ಮೊರದಂತ ಉಗುರುಗಳನ್ನುಳವಳೆಂದು ಹೆಸರುವಾಸಿಯನ್ನು ಪಡೆದು ನಿಂತಿರುವ ಮೂಗುಹರಿಕಿಯಾದ ಶೂರ್ಪಣಖೆಯೊಬ್ಬಳೇ ಆ ಯುದ್ಧ ಭೂಮಿಯಲ್ಲಿ ಮಡಿದು ಬಿದ್ದಿ ರುವ ರಕ್ಕಸರ ಮರಣವಾರೆಯನ್ನು ರಾವಣನ ಬಳಿಗೆ ಕೊಂಡೊಯ್ಯಲು ದೂತಿಯಾಗಿದ್ದಳು. ಬಳಿಕ ವೈಶ್ರವಣನ ತಮ್ಮನಾದ ರಾವಣನು - ತಂಗಿಗಾಗಿರುವ, ಭಂಗದಿಂದಲೂ, ಆಪ್ತಬಂಧುಗಳಾದ ಖರಾಗಿಗಳ ಮರಣದಿಂದಲೂ, ರಾಮನು ತನ್ನ ಹತ್ತು ನೆತ್ತಿಗಳಮೇಲೆಯೂ ಹಜ್ಜೆಯನ್ನೂರಿದನೆಂದು ಭಾವಿಸಿದನು. ಕೂಡಲೆ ರೋಷದಿಂದ ಉರಿದೆದ್ದನು, ಕಾಡಿಗೆ ಬಂದನು, ಮಾರೀಚನನ್ನು ಕಂಡನು, ಹೇಮಮಯವಾದ ಮೃಗರೂಪವನ್ನು ತಾಳ ಸಿದನು, ರಾಮನನ್ನು ವಂಚಿಸಿದನು, ನೀತೆಯನ್ನು ಅಪಹರಿಸಿದನು; ಜಟಾಯುವೆಂಬ ದೃಢರಾಜನ ಕೋಟಲೆಯಿಂದ ಕ್ಷಣಕಾಲ ಅಡ್ಡಿ ಯನ್ನು ಪಡೆದಿದ್ದನು, ಆ ಪಕ್ಷಿಗೂ ಪಕ್ಷಪಾತವನ್ನೆಸಗಿದನು, ತನ್ನ ಪುರವನ್ನು ಕುರಿತು ತೆರಳಿದನು,