ಪುಟ:ರಘುಕುಲ ಚರಿತಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&4 ಶ್ರೀ ಶಾ ರ ದಾ . {ಅ ಎಂ ' - • • • `- - • vvvvvv ಧೂಮದಿಂದ ಜಲಯುಕ್ತವಾದ ನಿನ್ನ ಕಣ್ಣಿನ ಸೊಬಗು ನೆನಪಿಗೆ ಬಂ ದಿತು. ಆಗ ನನ್ನ ಮನನೊಂದ ಬಗೆಯನ್ನು ವಿವರಿಸಲಾರೆನು, ದಡದ ಲ್ಲಿ ಒತ್ತಾಗಿ ಬೆಳೆದಿರುವ ಮಂಜುಳವೃಕ್ಷಗಳಿಂದ ಆವರಿಸಲ್ಪಟ್ಟು, ಸ್ವಲ್ಪ ಸ್ವಲ್ಪವಾಗಿ ಕಾಣಬರುತ, ಹಾರುತಲಿರುವ ಸರಸ ಪಕ್ಷಿಗಳ ನ್ನೊಳಗೊಂಡಿರತಕ್ಕ ಇಗೋ ಆ ಪಂಪಾಸರೋವರದ ಬಳಿಗೆ ಗವಿಸಿದ ಈ ನನ್ನ ದೃಷ್ಟಿಯು - ಬಹುದೂರ ತೆರಳಿದುದರಿಂದ ಬಳಲಿ, ಆ ಹಲ ಗಳನ್ನು ಆದರದಿಂದ ಕುಡಿಯುವಂತಿದೆ. ನಿನ್ನ ವಿರಹದಲ್ಲಿದ್ದ ನಾನು ಆಗ ಇಲ್ಲಿಗೆ ಬಂದೆನು, ಒಡನಾಡಿಗಳಾದ ಚಕ್ರವಾಕ ಪಕ್ಷಿಗಳು-ಸತಿಯು ಪತಿಗೂ ಪತಿಯು, ಸತಿಗೂ ಪ್ರೇಮಭರದಿಂದ ನೈದಿಲೆದೂಗಳನ್ನು ಕೋ ಕ್ಕಿನಿಂದೆತ್ತಿ ಕೊಡುತಲಿದ್ದು ದನ್ನು ಕಂಡೆನು, ಪ್ರಿಯವಲ್ಲಭೆಯೇ ! ಆ ಗ ನಿನಗೆ ಬಹುದೂರದಲ್ಲಿದ್ದ ಆ ನಾನು-ಕೂಡಲೆ ತಹತಹ ಪಡುವ ಮನ ದಿಂದ ನಿನ್ನನ್ನು ನೆನೆದೆನು. ಅಲ್ಲಿಂದ ಮುಂದೆ ಸ್ವಲ್ಪ ದೂರ ಬಂದೆನು, ಬಲು ಅಂದವಾದ ಹೂಗಳ ಗೊಂಚಲುಗಳ೦ದ ಬಾಗಿರುವ ಸರೋವರದ ತೀರದಲ್ಲಿನ ಈ ಅಶೋಕಲತೆಯನ್ನು ನೋಡಿದೆನು, ನನ್ನ ಪ್ರಜ್ಞೆ ಯು ಎಲ್ಲಿ ಹಾರಿಹೋಯಿತೋ ಅರಿಯೆನು, ನೀನು ದೊರೆತೆ ಎಂದೇ ಭಾವಿಸಿದೆನು, ದುಡುದುಡನೆ ಓಡಿಹೋಗಿ, ಹಾ ! ಸೀತೆ ! ಸಿಕ್ಕಿದೆ ಯಾ ! ಎಂದು ಅಪ್ಪಿಕೊಳ್ಳಲಿಕ್ಕೆ ಹೋದೆನಂತೆ ! ಆಗ-ಅಯ್ಯೋ ! ಅಣ್ಣಾ !! ಸೀತೆಯಲ್ಲ, ಲತೆ ಎಂದು ಕಣ್ಣೀರನ್ನು ಸುರಿಸುತ್ತಾ ಸೌ ಮಿತ್ರಿಯು-ನನ್ನನ್ನು ತಡೆದನಂತೆ. ನಮ್ಮ ಈ ಪುಪ್ಪಕವಿಮಾನದ ಅಂತಸ್ತಿನ ಮೇಲುಗಡೆ ಗಾಳಿ ಯಿಂದ ಅಲುಗಿ, ಸದ್ದು ಮಾಡುತಲಿರುವ ಬಂಗಾರದ ಕಿರುಗೆಜ್ಜೆಗಳ ಧನಿಯನ್ನು ಕೇಳಿದ ಈ ಗೋದಾವರಿ ನದಿಯಲ್ಲಿನ ಸರಸ ಪಕ್ಷಿಗ ಳು-ತಮ್ಮಂತೆ ದನಿಗೆಯ ಬೇರೊಂದು ಹಿಂಡು ಬರುತಲಿದೆಯೆಂದು ಭಾವಿಸಿ, ಆಗಸಕ್ಕೆ ಹಾರಿ, ನಿನ್ನನ್ನು ಇದಿರೊಳ್ಳುವಂತಿವೆ. ಪ್ರಿಯಳೇ ! ನೀನು ಬಡನಡ ವಿನವಳಾದರೂ ಗಡಿಗೆಯಿಂದ ನೀರೆರೆದು ಸಾಕಿದ ಎಳಮಾವಿನ ಗಿಡಗಳುಳ್ಳುದೂ, ತಲೆಗಳನ್ನೆತ್ತಿ ರೆಪ್ಪೆ ಬಡಿಯದೆ ನೋಡುತಲಿರುವ ಹುಲ್ಲೆ ಗಳುಳ್ಳು ಆಗಿರುವ ಈ ಸಂಚ