ಪುಟ:ರಘುಕುಲ ಚರಿತಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ] ರಘುಕುಲಚರಿತಂ, ೩೧

  • ~ ~ ~ ~ ~ ~ ~ , , »v

ರಾಗವನೊಳಗೊಂಡ ಶಂಕರನ ಶರೀರದಂತೆ ದೇದೀಪ್ಯಮಾನವಾಗಿ ರುವುದು, ಇದೇ ಮಹಾ ಭೂಭಾಗವೆನಿಸಿದ ಪ್ರಯಾಗವು, ಸಮು ದ್ರ ಪತ್ನಿಯರೆನಿಸಿದ ಗಂಗಾ ಯಮುನೆಯರ ಈ ಸಂಗಮ ಸ್ಥಲದಲ್ಲಿ ಸ್ನಾನ ಮಾಡಿ, ತನುವನ್ನು ತ್ಯಜಿಸಿ, ಪೂತಾತ್ಮರೆನಿಸಿದ ಪುರುಷರಿಗೆ, ತತ್ತ್ವಜ್ಞಾನವಿಲ್ಲದಿದ್ದರೂ ಪ್ರಾಬ ಕರ ದಿಂದ ಒದಗಿರವ ಶರೀರದ ತ್ಯಾಗಾನಂತರದಲ್ಲಿ ಮರಳಿ ಶರಿರ ಸಂಬಂಧವಿಲ್ಲದ ಮುಕ್ತಿಯು ಸವ ನಿಸುವುದೆಂದು ಪ್ರಾಜ್ಞರು ಹೇಳುವರು. ಅಯಿ ಜನಕ ರಾಜನಂದಿನೀ ! ಅದೇ ಬೇಡರೊಡೆಯನಾದ ಗುಹನ ಶೃಂಗಿಬೇರಪುರವು, ಹಿಂದೆ ನಾನು ಮಳಿಮಣಿಯನ್ನು ತೆಗೆದಿ ಟ್ಟು, ಆಲದಹಾಲಿನಿಂದ ಜಡೆಗಳನ್ನು ಕಲಿಸಿಕೊಳ್ಳುತಲಿರುವುದನ್ನು ನೋಡಿ, ನಮ್ಮ ಮಂತ್ರಿಯಾದ ಸುಮಂತ್ರನು-ಅಯ್ಯೋ ! ರಾಮಾ ! ನಿನಗೀಸ್ಥಿತಿಯು ಬಂದಿತೇ ? ಓ ಕೈಕೇ ಮಾ ! ನಿನ್ನ ಕಾವ, ವು ಕೈಗೂಡಿತೇ ? ಎಂದು ಮೋರೆಗೆ ಸೆರಗನ್ನಿಟ್ಟು, ಕಣ್ಣಿನಿಂದ ನೀರ ನ್ನು ಸುರಿಸುತ್ತಾ, ಗಟ್ಟಿಯಾಗಿ ಗೊಳೋ ಎಂದು ಅತ್ತುದು ಇಲ್ಲಿಯೇ. ಯಕ್ಷಾಂಗನೆಯರ ಜಲಕ್ರೀಡೆಗೆಡೆಯೆನಿಸಿ, ಹೇಮಾಂಬುಜಗಳಿಗಾ ಕರವಾದ ಬ್ರಹ್ಮಸರೆ ನೀವರವಿಲ್ಲಿ ಕಾಣಬರುತಲಿದೆನೋಡು, ಬುದ್ದಿಗೆ ಅಕ್ಕವೆಂಬ ಪ್ರಧಾನವು ಕಾರಣವಾಗಿರುವ ಹಾಗೆ, ಸರಯನದಿಗೆ ಈ ಮಾನಸ ಸರವು ಮೂಲಕಾರಣವೆಂದು ಆಪ್ತವಚನಗಳೆನಿಸಿದ ವೇ ದಗಳೂ, ವೇದವಿದರೆನಿಸಿದ ಮುನಿಗಳ ಹೇಳುತ್ತಾರೆ. ಇತ್ತ ತಿರುಗಿನೋಡು, ಇದೇ ಅಯೋಧ್ಯಾರಾಜಧಾನಿಯ ಬಳಿ ಯಲ್ಲಿ ಹರಿಯುತಲಿರುವ ಸರುಯನದಿ, ಪಶುಬಂಧಕ್ಕೆ ಉಪಯೋಗಿ ಸಿದ ಯೂಪಸ್ತಂಭಗಳು ಇದರ ತೀರದಲ್ಲಿ ಸಾಲಾಗಿ ಕಾಣಬರುತ ಲಿವೆ, ಇಕ್ಷಾಕುಮಹಾರಾಯನ ವಂಶದಲ್ಲಿ ಜನಿಸಿದ ಬಹುಮಂದಿ ನಮ್ಮ ಹಿರಿಯರು - ಅನೇಕ ವೇಳೆ ಅಶ್ವಮೇಧಗಳನ್ನಾಚರಿಸಿ, ಅವಳ್ಳ ಥಸ್ಥಾನಗಳನ್ನು ಮಾಡಿದುದರಿಂದ ಈ ಮಹಾನದೀಜಲಗಳನ್ನು ಮತ್ತ ಈು ಪಾವನ ತರಗಳನ್ನಾಗಿ ಮಾಡಿರುವರು. ಈ ತರಂಗಿಣಿಯ ತೀರ ದ ಮಳಲುನೆಲದಲ್ಲಿಯೇ ನನ್ನವರೆಲ್ಲರೂ ಬೆಳೆದುದು, ಭೂರಿಪಯೋ