ಪುಟ:ರಘುಕುಲ ಚರಿತಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉ ಹಾ ರ ಕನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪೂಣ್ಣ ಪಾಣ್ಣೆ ತೃವನ್ನು ಪಡೆದು, ಶ್ರೀಮನ್ಮಹೀ ಶೂರ ಸಂಸ್ಥಾನದಲ್ಲಿ ವಿದ್ಯಾಭ್ಯಾಸದ ಇಲಾಖೆಯ ಇನಸ್ಪೆಕ್ಟರ್‌ ಜನರಲ್ ಪದವಿಯನ್ನು ಅಲಂಕರಿಸುತ್ತಾ, ದೇತವತ್ಸಲರಾಗಿ, ಉದಾರಹೃದಯರೆನಿಸಿ, ಶಾಂತಿ, ಮಹಪ್ಪ, ರಾಜಭಕ್ತಿ, ಯಶಸ್ಸು, ರುಜ, ಏತದಾದ್ಯಸ್ಥಾನವಾಗಿರುವ ಶ್ರೀರ್ಮಾ, ಎಂ, ಶಾನು ರಾಯರು, ಎಂ, ಎ, ಇವರು-ಕವಿಕುಲಲಲಾಮನಾದ ಕಾಳಿದಾಸ ಮಹಾ ಕವಿಯ ವಿಚಿತ್ರ ಸೃಷ್ಟಿಯಾಗಿರುವ ರಘುವಂಶ ಮಹಾಕಾವ್ಯದಲ್ಲಿನ ಮಧುರರಸವನ್ನು ಕನಡಿಗರು ಆಸ್ವಾದಿಸಿ ಆನಂದಿಸಲಿ, ಎಂಬದಾಗಿ ಅಪ್ಪಣೆ ಕೊಡಿಸಿದ್ದನ್ನು ಆದರ ಪೂರ್ವಕವಾಗಿ ಅಂಗೀಕರಿಸಿ, ಹತ್ತೊಂಭತ್ತು ಸರ್ಗಗಳ ಕಥೆಯನ್ನೂ ಕನಡ ಭಾಷೆಯಲ್ಲಿ ವಚನರೂಪದಿಂದ ಬರದಿದೇನೆ. ಚೀಫ್ ಇಂಜನಿಯರ್, ರಾಜಸಭಾ ಭೂಷಣಂ, ಶ್ರೀರ್ಮಾ ಕರ್ಪೂರ ಶ್ರೀನಿವಾಸರಾವ್, ಬಿ, ಎಸ್, ಸಿ, ಎಲ್‌, ಸಿ, ಇ, ಇವರ ಅಪ್ಪಣೆಯನ್ನನು ಸರಿಸಿ ಸಂಸ್ಕೃತ ವಚನರೂಪದಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ, ಭ್ರವಸ್ತ್ರ ಮಾದಗಳು ಮನುಷ್ಯ ಸಾಧಾರಣವಾಗಿರುವುದರಿಂದಲೂ, ಕೇವಲ ಗುಣವು ಯವೇ ಆಗಿಯಾಗಲಿ, ಅಥವಾ ದೋಸಮಯವೇ ಆಗಿಯಾಗಲೀ, ಇರುವ ವಿಷಯವೇ ಇಲ್ಲದಿರುವುದರಿಂದಲೂ, ದೋಷಜ್ಞರು ಗುಣಾಂಶ ಗ್ರಹಣ ದಿಂದ ಸಂತೋಷಿಸಬೇಕು ಎಂದು ಪ್ರಾರ್ಥಿಸುವ, ಪ ರಿ ವ ರ ನ ಕಾ ರ ,