ಪುಟ:ರಘುಕುಲ ಚರಿತಂ ಭಾಗ ೧.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಶ್ರೀಕಾ ರ ದ . [ಅ ವರನು ಈ ಪುರದಿಂದ ನಾಳೆ ಹೊರಡುವನು, ನಾವೆಲ್ಲ ಇಂದೇ ಪುಯಾ ಮಾಡಿ ದಾರಿಯಲ್ಲಿ ಕಾದಿದ್ದರೆ, ಕಪ್ಪವಿಲ್ಲದೆ ಕನೈಯು ಕರಗತಳಾಗು ವಳು ?” ಎಂದು ಮೊದಲೇ ಸಂಕೇತಮಾಡಿಕೊಂಡಿದ್ದ ಮೇರಿಗೆ ಮುಂಚಿ ತವಾಗಿಯೇ ಬಂದು, ಆಮಿಷಾಪಹಾರಕ್ಕಾಗಿ ಮಾರ್ಗವನ್ನು ಆವರಿಸಿ ಅಲ್ಲಲ್ಲಿ ಇದಿರುನೋಡುತಲಿದ್ದ ರು. ಇತ - ಭೋಜಭೂಪಾಲನು - ಅನುಜೆಯ ವಿವಾಹಸಂ ಭನ ವೆಲ್ಲ ಬೆಳೆದಬಳಿಕ, ಮನದ ಉತ್ಸಾಹಾನುಸಾರ ತನ್ನ ಸಂಪದವನ್ನು ಹೆಣ್ಣಿಗೆ ಬಲುವಳಿಯಾಗಿ ಕೊಟ್ಟು, ವಧೂವರರನ್ನು ಪ್ರಯಾಣಮಾಡಿಸಿ ದನಲ್ಲದೆ, ತಾನೂ ಹಿಂಬಾಲಿಸಿದನು. ಮೂಲೋಕದಲ್ಲಿಯೂ ಮೇಲಾದ ಹೆಸರುವಾಸಿಯನ್ನು ಪಡೆದಿರುವ ರಾಘವನೊಡನೆ ಮೂರು ಟ ಕಿಗಳು ಇದ್ದು, ಬಳಿಕ ಶುಕ್ಲ ಪಕ್ಷದ ಪಾಡ್ಯಮಿಯಲ್ಲಿ ತಣ್ಣದಿರನು - ಬೆಂಗದಿರ ನಿಂದ ತಿರುಗುವಹಾಗೆ, ರಘುಕುಮಾರನಿಂದ ಕುಂಡಿನ ಪುರಾಭಿಮು ಖನಾದನು. ಈ ಹಿಂದೆ - ರಘುವು - ದಿಗ್ವಿಜಯಮಂ ಮಾಡಿದಾಗ, ನಾಡೊಡೆಯರ ಬೊಕ್ಕಸಗಳನ್ನೇ ಬಳಿದು ತಂದಿದ್ದನೆಂದು ಆತನ ವಿಷಯದಲ್ಲಿ ದೊರೆಗಳೆದೆ ಯಲ್ಲಿ ವೈರವು ಕುದಿಯುತಲಿದ್ದಿತು. ಅವನ ಮಗನಾದ ಅಜನೀಗ ಭೋಜಕನ್ಯಾರತ್ನವನ್ನು ಅಪಹರಿಸಿದುದು ಆ ಅವನಿಪಾಲರಿಗೆ ಸೈರಿಸ ಲೇಇಲ್ಲ. ಆ ದ್ವೇಷವನ್ನೆಲ್ಲ ಕಾರಲಿಕ್ಕೆ ಇದು ಸರಿಯಾದ ಸಮಯ ವೆಂದು ಬಗೆದರು. ಪೂರ್ವದಲ್ಲಿ - ವಿರೋಚನನ ಮಗನಾದ ಬಲಿಯು ಕೊಟ್ಟ ಸಿರಿಯನ್ನು ಪಡೆದು, ಅಳೆಯಲು ಬೆಳೆಯತೊಡಗಿದ ತ್ರಿವಿಕ ಮನ ಅಡಿಯನ್ನು, ಇಂದ್ರನಿಗೆ ಹಗೆಯಾದ ಪ್ರಹ್ಲಾದನು ಹೇಗೋಹಾಗೆ, ಕೊಬ್ಬಿರುವ ಅರಸುಮಕ್ಕಳ ಹಿಂಡು - ಭೋಜಕನೇಯನ್ನು ಕರೆದೊ ಯುತಲಿರುವ ಅಜಕುಮಾರನನ್ನು ಅಡ್ಡಗಟ್ಟಿತು. ಅಜರಾಜ ಕುಮಾ ರನೇನು ಸಾಧಾರಣನೆ ? ಆ ಕೂಡಲೆ - ತನ್ನ ತಂದೆಗೆ ಆಪ್ತನಾದ ಮಂತ್ರಿ ಯನ್ನು ಬಹುಮಂದಿ ವೀರಭಟರೊಡನೆ ಕನೈಯ ಕಾವಲಿಗೆ ನೇಮಿಸಿ, ಉಕ್ಕಳಿಸುವ ಅಲೆಗಳನ್ನೊಳಗೊಂಡ ಶೋಣನದವು ಭಾಗೀರಥಿಯನ್ನು ಹೇಗೋಹಾಗೆ, ಆ ವಸುಮತೀಶರ ವಾಹಿನಿಯನ್ನು ಇದಿರಿಸಿದನು. ಕಾಲಾ ಳನ್ನು ಕಾಲಾಳೂ, ರಥಿಕನನ್ನು ರಥಿಕನೂ, ಕುದುರೆಯನೇರಿದವನನ್ನು