ಪುಟ:ರಘುಕುಲ ಚರಿತಂ ಭಾಗ ೧.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f೫ ೩). ರಘುಕುಲಚರಿತಂ ಸೈನ್ಯವು - ಬಿಲ್ಲಿನ ಹೆದೆಯನ್ನು ಸೆಳವುದರಲ್ಲಿ ಮುಂದರಿಯದ ಕರಗ೪೦ ದೊಡಗೂಡಿ, ಒಮ್ಮೊಗನಾಗಿ ಹೆಗಲಿನಕಡೆಗೆ ಜೋತತಲೆಸಾಗುಗಳನ್ನು ಇುದಾಗಿ, ರಥದಜಸ್ತಂಭಗಳಿಗೆ ದೇಹಗಳನ್ನೊರಗಿಸಿ ನಿದ್ರಾಪರವಶ ವಾಯಿತು, ಆ ಹಿಂದೆ ರಘುಕುಮಾರನು - ಇಂದುಮತಿಗೆ ಪ್ರೀತಿಪಾ ತ್ರವೆನಿಸಿದ ತನ್ನ ಕೆಳತುಟಿಯಮೇಲೆ ವಿಜಯಶಂಖವನ್ನಿಟ್ಟು ಮುಖಮಾರು ತದಿಂದ ದನಿಗೈಸಿದನು. ಅಂತಪ್ಪ ಜಯಜಲಜನಿನದದಿಂದ ಅದ್ವಿತೀಯ ವೀರನೆನಿಸಿ, ತನ್ನ ತೋಳುಬಲದಿಂದ ಗಳಿಸಲ್ಪಟ್ಟು ದಾಗಿ, ಶರೀರವನ್ನಾಂತಿ ರುವ ಯಶಸ್ಸನ್ನು ಪಾನಮಾಡುತಲಿರುವವನಂತೆ ವಿರಾಜಿಸುತಲಿದ್ದನು. ಅದುವರೆಗೆ ಪಲಾಯನರಾಗಿದ್ದ ಸೃಸೈನಿಕರು-ಅಜನ ವಿಜಯ ಶಂಖಧನಿ ಯನ್ನು ಕೇಳಿದರು, ಕೂಡಲೇ ಓಹೋ ! ನಮ್ಮ ದೊರೆಗೆ ಜಯವುಂ ಟಾಯಿತೆಂದು ತಿಳಿದು, ಹಿಂತಿರುಗಿ ಓಡಿಬಂದರು. ಹಗೆಗಳ ಪಡೆಯೆಲ್ಲ ಮೈಮರೆತು ಮಲಗಿರುವುದನ್ನೂ, ಅದರ ನಡುವೆ - ಮುಗಿದ ತಾವರೆಗಳ ಮಧ್ಯದಲ್ಲಿ ಪ್ರತಿಬಿಂಬಿಸಿದ `ಚಂದ್ರನಂತಿರುವ ಅಜಕುಮಾರನನ್ನೂ ಅವಲೋಕಿಸಿದರು. ತರುವಾಯ ರಘುಪುತ್ರನು- ಬಾಣದಲಗಿನ ತುದಿಯನ್ನು ರಕ್ತದಲ್ಲಿ ಅದ್ದಿ ಸಿ, ಶತ್ರುರಾಜರ ಧ್ಯಪಪಟಗಳಲ್ಲಿ t ಎಲೆ, ದೊರೆಗಳಿರಾ ! ಈಗ ರಘುವೀರ ಕುಮಾರನು-ಕರುಣೆಯಿಂದ ನಿಮ್ಮ ಯಶಸ್ಸನ್ನು ಮಾತ್ರವೇ ಅಪಹರಿಸಿದನಲ್ಲದೆ, ಪ್ರಾಣಗಳನ್ನಲ್ಲ ” ಎಂದೀಪ್ರಕಾರವಾಗಿರುವ ವರಾ ವಳಿಯನ್ನು ಸೇವಕರಿಂದ ಬರೆಯಿಸಿದನು. ಅಲ್ಲಿಂದ ಬಿಲ್ಲಿನ ತುದಿಯನ್ನು ಒಂದು ಕೈಯಿಂದ ಹಿಡಿದು ನೆಲದಮೇಲೆ ಊರುತ್ತಾ, ಮತ್ತೊಂದು ಕರ ದಿಂದ ತಲೆಪಾಗನ್ನು ತೆಗೆದು, ಕೆದರಿದ ತಲೆಗೂದಲುಳ್ಳವನೂ, ಹಣೆಯಲ್ಲಿ ತುಂಬಿದ ಬೆವರಿನ ಹನಿಗಳುಳ್ಳವನೂ ಆಗಿ ಬರುತಲಿರುವ ಅಜನು - ಪ್ರಯಳಾದ ಇಂದುಮತಿಯ ತಡಿಗೆ ಬೇಗನೈತಂದು, ಹೆದರಿರುವಾ ಕೆಯನ್ನು ಕುರಿತು ಇಂತೆಂದನು - ಎಲ್ಲ ವಿದರ್ಭರಾಜ ನಂದಿನಿಯೇ ! ನಾನು ಒಪ್ಪಿರುವೆನು, ಇತ್ಯ ನೋಡು, ಸಮರಭೂಮಿಯಲ್ಲಿ ಸವಳಿದಿರುವ ಈ ಹಗೆತನದ ಪೊಡವಿಯಾ ಇರ ಆಯುಧಗಳನ್ನೆಲ್ಲ ಎಳೆಯ ಹುಡುಗರು ಸೆಳೆದೊಯ್ಯುತಲಿರುವರು. ಈ ವಿಧವಾದ ರಣಚೇಷ್ಮೆಯಿಂದೊಡಗೂಡಿರುವ ದೊರೆಮಕ್ಕಳು-ನನ್ನ