ಪುಟ:ರಘುಕುಲ ಚರಿತಂ ಭಾಗ ೧.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಆವೃಂದ ಕಥಾಸಂರವು - ಬಹು ರಮಣೀಯವಾಗಿರುವುದರಿಂದಲೂ, ಊ ಕಾನುಭವವನ್ನು ಬಹುತರವಾಗಿ ತಿಳಿಸುವುದರಿಂದಲೂ, ಆಮೂಲಾಗ್ರವಾಗಿ ಕಥಾ ಭಾಗವು ಬಹುಮಂದಿಗೆ ತಿಳಿಯದಿರುವುದರಿಂದಲೂ, ಸಂಸ್ಕೃತವನ್ನರಿಯದ ನಮ್ಮ ಕನ್ನಡಿಗರಿಗೆ ಕೈಲಾದಮಟ್ಟಿಗೆ ಸುಲಭವಾಗಿ ತಿಳಿಸಬೇಕೆಂಬ ಬಯಕೆಯಿಂದ ಕಾಳಿ ದಾಸನ ಕಾವ್ಯಕ್ರಮವನ್ನನುಸರಿಸಿ ಈ ಕಥೆಯನ್ನು ಬರೆಯಬೇಕೆಂದು ಪ್ರಯತ್ನಿಸಿ ಕಥಾಮುಖದಿಂದ ದಿಲೀಪ, ರಘು, ಆಜ, ಇವರ ಚರಿತವು ಪೂರ್ಣವಾಗಿ ದಶರಥನ ಆಧಿಪತ್ಯದ ಆರಂಭದವರೆಗೆ ಈ ಮೊದಲನೆಯ ಸಂಪುಟವನ್ನು ಸಿದ್ಧ ಪಡಿಸಿದನು, ಎರಡನೆಯ ಸಂಪುಟವೂ ಅಣಿಯಾಗುತಲಿದೆ, ಮುಂದೆ ಈತನ ಕಾವ್ಯನಾಟಕಗಳನ್ನೆಲ್ಲ ಹೀಗೆಯೇ ಬರೆಯಬೇಕೆಂಬ ಬಯಕೆಯುಂಟು, ಆದರೆ ಈ ನಮ್ಮ ನಾಡಿನಲ್ಲಿ ಪ್ರೋತ್ಸಾಹಕರು ವಿರಳರಾ'ದಾರೆ, ಕಾಲಕ್ರಮದಲ್ಲಿ ಹೆರಳರಾಗಿ ಸರಳರೂ ಆಗಬ ಹುದು. ಭುಮಪವಾದಗಳು ಮನುಷ್ಯ ಸುಧಾರಣಧರ್ಮಗಳಾದುದರಿಂದ ಈ ನನ್ನ ರಚನೆಯಲ್ಲಿ ವ್ಯತ್ಯಾಸಗಳನ್ನು ಪ್ರಾಜ್ಞರು ತಿಳಿಸಿದರೆ ಕೃತಜ್ಞತೆಯಿಂದ ಸ್ವೀಕರಿಸಿ ಭವಿಷ್ಯ ನ್ನು ದ್ರಣದಲ್ಲಿ ಸರಿಪಡಿಸುವೆನು. ಪರಿವಯ್ಯನಕಾರ.