ಪುಟ:ರಘುಕುಲ ಚರಿತಂ ಭಾಗ ೧.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಶ್ರೀ ಶಾ ರ ದ .

  1. MP

mM ಕ್ರಮದಿಂದ ಅಜನಿಗೆ ಮನೋವ್ಯಥೆಯು ಕಡಮೆಯಾಯಿತು. ಬಳಿಕ ಬಿಲ್ಲಿನಲ್ಲಿ ಹೆದೆಯಿನ್ನೇರಿಸಿ ಎಲ್ಲೆಲ್ಲಿಯೂ ತನ್ನ ಆಣತಿಗೆ ಅಡ್ಡಿಯಿಲ್ಲದಂತ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡು ಸಮಾಧಾನಸ್ಥಿತಿಗೆ ತಂದನು. - ಬಳಿಕ ಭೂಮಿಭಾಮಿನಿ, ಇಂದುಮತೀಕಾಮಿನಿ, ಇವರೀ ರರೂ-ಆ ಅಜನನ್ನು; ಮಹಾ ಪರುಪ್ರಸಂಪನ್ನನೂ, ಭೋಗಶಕ್ತಿಸಂಪ ನನೂ ಆಗಿರುವ ಪತಿಯನ್ನಾಗಿ ಪಡೆದು, ಮೊದಲನೆಯವಳು - ಮಹಾ ರತ್ನಜನನಿಯಾಗಿ ಕಂಗೊಳಿಸಿದಳು. ಎರಡನೆಯವಳು-ವೀರಕುಮಾರ ಮಾತೆಯಾಗಿ ಬೆಳಗಿದಳು. ದಶಶತಕಿರಣನಿಗೆಣೆಯೆನಿಸಿದವನು, ದಶದಿಶಗ ಳೊಳಗೂ ಹೆಸರುವಾಸಿಯನ್ನು ಹೊಂದಿನವನು, ದಶಕಂಠಾರಿಯಗುರುವು, ವಶಪದದಿಂದೊಡಗೂಡಿದ ರಥಶಬ್ದ ವನ್ನು ಪಡೆದವನು, ಎಂದು ಯಾರನ್ನು ಬುಧರು - ಯಾವಾಗಲೂ ಹೊಗಳುತಲಿರುವರೋ, ಆ ದಶರಥನನ್ನೇ ಅಜನು ಕುಮಾರನನ್ನಾಗಿ ಪಡೆದುದು. ಆಗ - ಅಧ್ಯಯನ, ಯಜ್ಞ, ಸಂತಾನ ಎಂಬಿವುಗಳ ಮೂಲಕ ನಮ್ಮಿಗಳ, ದೇವತೆಗಳ, ಮತ್ತು ವಿತೃ ಗಳ ಋಣಗಳಿಂದ ಅಜನು ಕ್ರಮವಾಗಿ ಬಿಡುಗಡೆಯನ್ನು ಹೊಂದಿದನು. ಸುತ್ತುಗಟ್ಟುವ ಪರಿವೇಷದಿಂದ ಹೊರಗೆಬಂದ ರವಿಯಂತೆ ರಾರಾ ಟಿಸಿದನು. ಶ್ಲೋ!! ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿಃ ಪರೇಷಾಂ ಪರಿವೀಡನಾಯ!lಖಲಸ್ಯ ; ಸಾಧೋದ್ವಿಪರೀತ ಮೇತತ್ ಜ್ಞಾನಾಯ ದಾನಾಯಕ ರಕ್ಷಣಾಯ || * ನೀಚನ ವಿದ್ಯೆಯು ವಿವಾದಕ್ಕೂ, ಹಣವು ಹೆಮ್ಮೆಗೂ, ಬಲವು ಹೆರರನ್ನು ಹಿಂಸಿಸಲಿಕ್ಕೂ ವಿನಿಯೋಗವಾಗುವುದು, ಇದು ಸಾಧುವಿನ ರಿಷಯದಲ್ಲಿ ತಲೆಕೆಳಗಾಗುವುದು ; ಹೇಗೆಂದರೆ -ಸಜ್ಜನನ ವಿದ್ಯೆಯುಸ್ಥಾನಕ್ಕೂ, ವವ್ವು - ಕಾಲದೇಶವನ್ನರಿತು ಸತ್ಪಾತ್ರದಲ್ಲಿ ದಾನಕ್ಕೂ, ಶಕ್ತಿಯು-ಅಶಕ್ತರ ಸಂರಕ್ಷಣೆಗೂ ಸಾಧಕವಾಗುವುದು ಎಂಬದಾಗಿ ಹೇಳುವ ಹಿರಿಯರ ಮಾತು ಸವೆಯಲ್ಲ; ಏಕೆಂದರೆ -ಆ ಅಜಭೂಪಾಲನ ನನವು ಮಾತ್ರವೇ ಪರರಿಗೆ ಉಪಕರಿಸಲು ಸಾಧಕನೆನೆಸಿದುದಾಗಿರಲಿಲ್ಲ. ಕೌರುಷವು – ಆಪನ್ನರಾದವರ ಭಯವನ್ನು ಪರಿಹರಿಸಲಿಕ್ಕೆ ವಿನಿಯೋ ಗವಾಗುತಲಿದ್ದಿ ತು, ಶಾಸ್ತ್ರಜ್ಞಾನವು - ವಿದ್ಯಾವಂತರನ್ನು ಸತ್ಕರಿಸಲಿಕ್ಕೆ