ಪುಟ:ರಘುಕುಲ ಚರಿತಂ ಭಾಗ ೧.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V) ರಘುಕುಲಚರಿತಂ ' ೧೦ ••••••• • • ಉಪಯೋಗಿಸುತಲಿದ್ದಿತು, ಹೀಗೆ ಆತನ ಸುಗುಣಗಳೆಲ್ಲವೂ ಪರೋಪ ಕೃತಿಗಾಗಿಯೇ ವೆಚ್ಚವಾಗುತಲಿದ್ದು ವು. - ಸತ್ಯವಂತನೆನಿಸಿದ ಆ ಅಜಮಹಾರಾಜನು - ತನ್ನ ನಾಡಿನ ಪ್ರಜೆ ಗಳನ್ನೆಲ್ಲ ಸಕಲ ವಿಷಯದಲ್ಲಿಯೂ ನೆಮ್ಮದಿಗೊಳಿಸಿ, ಸುಪುತ್ರನಾದ ದಶರಥನಲ್ಲಿ ರಾಜ್ಯಭಾರವನ್ನಿಟ್ಟು, ದೇವೇಂದ್ರನು - ಶಚೀದೇವಿಯೊಡನೆ ಅಮರಾವತಿಯ ಹತ್ತಿರದಲ್ಲಿರುವ ನಂದನವನದಲ್ಲಿ ಸಂಚರಿಸುವಹಾಗೆ, ಒಂದುವೇಳೆ-ತನ್ನ ಪಟ್ಟಮಹಿಷಿಯಾದ ಇಂದುಮತಿಯ ಸಂಗಡ, ನಗರ ಸವಿಾಪದಲ್ಲಿರುವ ಉದ್ಯಾನದಲ್ಲಿ ವಿಹರಿಸತೊಡಗಿದ್ದನು. ಅನಂತರದಲ್ಲಿ- ವೀಣಾವಿನೋದರಸಿಕನೆನಿಸಿರುವ ದೇವರ್ಷಿಯಾದ ನಾರದನು - ದಕ್ಷಿಣ ಸಮುದ್ರತೀರದಲ್ಲಿ, ಗೋಕರ್ಣ ಕ್ಷೇತ್ರದೊಳಗೆ ನೆಲೆಗೊಂಡಿರುವ ಪರಮೇಶ್ವರನನ್ನು ಸೇವಿಸಬೇಕೆಂದು ಕುತೂಹಲಪಟ್ಟು, ಸೂರ್ಯನುದಯಿಸುವ ಹಾದಿಯಿಂದ ಹೊರಟುಬರುತಲಿದ್ದನು. ಆ ದೇವ ಮುನಿಯ ವೀಣೆಯ ತುದಿಯು - ದೇವಲೋಕ ಕುಸುಮಗಳನ್ನು ಪೋಣಿಸಿ ರಚಿಸಿರುವ ದಿವ್ಯಹಾರದಿಂದ ಸುತ್ತಲ್ಪಟ್ಟಿದ್ದಿತು ; ಆಗ - ಬಹು ವೇಗದಿಂದ ಹರಿದುಬರುತಲಿರುವ ವಾಯುವು - ಸುವಾಸನೆಯಿಂದ ತನ್ನನ್ನು ಸಿಂಗರಿಸಿಕೊಳ್ಳಲಿಕ್ಕೆಂಬಂತೆ, ಆ ದಿವ್ಯ ಪುಪ್ಪಮಾಲೆಯನ್ನು ಅಹಹ !! ಸೆಳೆದೊಯ್ಲಿ ತು, ಮಾಲೆಯ ಕುಸುಮಗಳಮೇಲೆ ಹಾರಾ ಡುತ ದನಿಗೆಯ್ಯುತಲಿರುವ ದುಂಬಿಗಳಿಂದ ಆವರಿಸಲ್ಪಟ್ಟಿದ್ದ ಆ ಪರಿವಾದಿ ನಿಯು- ಪವನಾತಿಕ್ರಮವನ್ನು ತಾಳಲಾರದೆ, ಕಾಟಿಕೆಯಿಂದೊಡಗೂಡಿದ ಕಣ್ಣೀರಿನ ಹನಿಗಳನ್ನು ಬಟ್ಟಾಡಿಸುವಂತೆ ಕಾಣಬರುತಲಿದ್ದಿತು, ವಾಯು ವೇಗ ವಶದಿಂದ ಹಾರಿಬಂದ ಆ ಅಮರಕುಸುಮಹಾರವು - ತನ್ನಲ್ಲಿರುವ ಮಕರಂದ ಸುವಾಸನೆಗಳ ವೈಭವದಿಂದ, ಆ ಉದ್ಯಾನದಲ್ಲಿನ ಲತೆಗಳಲ್ಲಿ ಋತುಧರ್ಮದ ಮೂಲಕ ಉಂಟಾಗಿರುವ ಪುಪ್ಪಸಮೃದ್ಧಿಯನ್ನು ತಿರಸ್ಕ ರಿಸುತ್ತಾ, ಅಜರಾಜನ ಪಟ್ಟದರಸಿಯ ಅಗಲವಾದ ಎದೆಯಲ್ಲಿ ಎಡೆಗೊಂ ಡಿತು. ಬಹು ಸುಂದರವೂ, ವಿಶಾಲವೂ ಆಗಿರುವ ಉರಸ್ಥಲಿಗೆ ನಿಮಿಷ ಕಾಲಮಾತ್ರ ಗೆಳತಿಯಂತಿರುವ ಆ ವಿಬುಧಕುಸುಮಮಾಲಿಕೆಯನ್ನು, ಕಟಾಕ್ಷಸಿದ ಕ್ಷಣದಲ್ಲಿಯೇ ಇಂದುಮತಿಯು - ಚಂದಿರನನ್ನು ರಾಹುವು ನುಂಗಲು, ಕೌಮುದಿಯಂತೆ ಮುಗಿದಳು, ಇಂದ್ರಿಯ ಸಮುದಾಯದಿಂದ