ಪುಟ:ರಘುಕುಲ ಚರಿತಂ ಭಾಗ ೧.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಂ ಶ್ರೀ ಕಾ ರ ದ . ಎಲೈ ಮಹಾರಾಜನೆ ! ತಪೋನಿಧಿಯು ಯಜ್ಞಾನುಷ್ಠಾನತ್ತತ್ಪರನಾ ಗಿದ್ದನು, ನಿನ್ನ ತಾಪಕಾರಣವನ್ನು ತಿಳಿದಿದ್ದ ರೂ, ವಿಧಿಸಮಾಪ್ತಿಯ ನಡುವೆ ನಿನ್ನ ಬಳಿಗೆ ಬಂದು, ಸ್ವಭಾವದಲ್ಲಿ ಬದಲಾಯಿಸಿರುವ ನಿನ್ನನ್ನು ಪ್ರಕೃತಿಯಲ್ಲಿ ನೆಲೆಗೊಳಿಸಲು ಎಡೆಯಿಲ್ಲವಾಗಿದ್ದಿತು. ಎಲೆ ಸದಾಚಾರ ಸಂಪನ್ನನೆ ! ಆತನು ಹೇಳಬೇಕಾದ ಮಾತುಗಳ ಸಂಗ್ರಹರೂಪವಾದ ಸರಸ್ವತಿಯು ನನ್ನಲ್ಲಿ ನೆಲೆಗೊಂಡಿದೆ, ಲೋಕವಿಖ್ಯಾತವಾದ ಧೀರತ ಯಿಂದೊಡಗೂಡಿರುವ ನೀನು – ಆ ವಚನಸಾರವನ್ನು ಗ್ರಹಿಸಲಿಕ್ಕೂ, ಹೃದಯದಲ್ಲಿ ಧರಿಸಲಿಕ್ಕೂ ತಕ್ಕವನಾಗಿದ್ದೀಯೆ. ತ್ರಿವಿಕ್ರಮ ಪ್ರಕ್ರಿ ಯೆಮನ್ನಾಂತ ಪುರಾಣಪುರುಷನಾದ ನಾರಾಯಣನ ಮರಡಿಗಳಿಗೆ ಡೆಕೊಟ್ಟ ಮೂಲೋಕದಲ್ಲಿ ರು, ನಡೆದ, ನಡೆಯುತಲಿರುವ, ನಡೆಯ ಹೋಗುವ ವಿಷಯಗಳನ್ನೆಲ್ಲ ಯೋಗನಿಧಿಯಾದ ಮುನಿಯು - ತಡೆಯಿ ಯಿಲ್ಲದ ಜ್ಞಾನದೃಷ್ಟಿಯಿಂದ ಕರತಲಾಮಲಕದಂತೆ ತಿಳಿಯಬಲ್ಲ ನಾದಕಾರಣ, ಆತನ ಮಾತುಗಳನ್ನು ವಿಕ್ಷನಿಸಬೇಕೆಂದು ಮರಳಿ ನಿನಗೆ ನಾನು ಹೇಳಬೇಕಾದುದಿಲ್ಲ. ಪೂರ್ವದಲ್ಲಿ ತೃಣಬಿಂದುವೆಂಬ ಮುನಿಯು - ತನ್ನ ಆಶ್ರಮದಲ್ಲಿ. ತೀವ್ರವಾದ ತಪಸ್ಸನ್ನು ಆಚರಿಸುತಲಿದ್ದನು. ಆಗ ತನ್ನ ಪದವಿಗೆಲ್ಲಿ ಕೊರತೆಯುಂಟಾಗುವುದೋ ಎಂದು ಹೆದರಿದ ಹರಿಹಯನು-ಆ ತಪಸಿಯ ಸಮಾಧಿಯನ್ನು ಭೇದಿಸಿ, ತಪಸ್ಸಿಗೆ ಇ೦ಗವನ್ನುಂಟುಮಾಡುವಂತೆ ಕಟ್ಟುಮಾಡಿ, ಹರಿಣಿಯೆಂಬ ಸುರಾಂಗನೆಯನ್ನು ಕಳುಹಿದನು, ಅದ. ರಂತೆ ಹರಿಣಿಯು ತೃಣಬಿಂದುವಿನ ತಡಿಗೈದಿ ತನ್ನ ಕೈವಾಡವನ್ನು ತೋರತೊಡಗಿದಳು - ಶಾಂತಿಯಂಬ ಮರ್ಯಾದೆಯನ್ನೊಡೆದು ತಪಸ್ಸಿಗೆ ಅಡ್ಡಿಯನ್ನೆಸಗುವ ಬಗೆಬಗೆಯ ಬೆಡಗುಗಳನ್ನು ತೋರುತ್ತಾ ಇದಿರಿಗೆ ನಿಂತಿರುವ ಆ ಅಮರರವುಣಿಯಾದ ಹರಿಣಿಯಂ ಕಂಡು-ನಿಟ್ಟುಗೊಂಡ ಕಿತ್ತಡಿಯು-Ic ನೀನೀನೆಲದನಾರಿಯಾಗು ,, ಎಂದು ಶಪಿಸಿರನು, ಆ ಕೂಡಲೆ ಹೆದರಿದ ಹರಿಣಿಯು - ಎಲೈ ಭಗವಂತನೇ ! ಈ ನಾನು ಪರ ತಂತ್ರಳು, ಪರಾಧೀನತೆಯಿಂದಾದ ಪ್ರತಿಕೂಲಾಚರಣೆಯನ್ನು ಕ್ಷಮಿಸ ಬೇಕು ಎಂದು ನೆಲದಮೇಲೆ ಅಡ್ಡ ಬಿದ್ದು, ಶರಣಾಗತಳಾಗಿ, ಕೈಜೋ ಡಿಸಿ ದೈನ್ಯದಿಂದ ಬೇಡಿದಳು. ಬಳಿಕ ಶಾಂತನಾದ ಮುನಿಯು - ದಿವ್ಯ ಪುಪ್ರದರ್ಶನವೇ ಶಾಪವಧಿ, ಅದುವರೆಗೆ ಮಾನುಪಿಯಾಗಿರು .ವಿಂದು