ಪುಟ:ರಘುಕುಲ ಚರಿತಂ ಭಾಗ ೧.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ರಘುಕುಲಚರಿತಂ ೨೧ ಬರುವ ಅರರೂ ತಪೋವನದಿಂದ ಹಿಂದಿರುಗಿ ಬರುವ ದಾರಿಯನ್ನು ಅಂದವಾದ ತಮ್ಮ ನಡಗೆಯಿಂದ ಸಿಂಗರಿಸುತಲಿದ್ದ ರು. ಅಷ್ಟು ಹೊತ್ತಿಗೆ ಸುದಕ್ಷಿಣೆಯು - ಪುಣ್ಯಾಶ್ರಮದ ಎಲೆಯಲ್ಲಿ ನಿಂತು ಇದಿರುನೋಡುತಲಿದ್ದಳು. ವನದಿಂದ ಹಿಂದಿರುಗಿ ಮುನಿಧೇ ನುವನ್ನು ಹಿಂಬಾಲಿಸಿ ಬರುತಲಿರುವ ತನ್ನ ಪ್ರಿಯವಲ್ಲಭನನ್ನು ರೆಪ್ಪೆ ಬಡಿಯದೆ ಉಪವಾಸವಿದ್ದವುಗಳಂತಿರುವ ಎರಡು ಕಣ್ಣುಗಳಿಂದಲೂ ತಣಿವಾರ ಕುಡಿದಳು, ಆ ಹಾದಿಯಲ್ಲಿ ದಿಲೀಪನ ಧರ್ಮಪತ್ನಿಯಿಂದ ಇದಿರ್ಗೊಳ್ಳಲ್ಪಟ್ಟುದೂ, ಪೊಡವಿಯೊಡೆಯನಿಂದ ಮುಂದರಿಸಲ್ಪಟ್ಟು ದೂ ಆಗಿರುವ ಆ ಧೇನುವು-ಹಗಲಿರುಳುಗಳ ನಡುವಣ ಸಂಜೆಯಂತೆ ಕಂಗೊ ಆಸುತಲಿದ್ದಿ ತು. ಆಗಲಾ ಸುದಕ್ಷಿಣೆಯು - ಆ ಪಯಸ್ವಿನಿಗೆ ಬಲವಂದು, ತಲೆಬಾಗಿ ಅಡ್ಡಬಿದ್ದು, ಮನೋರಥಸಿದ್ಧಿಯ ಬಾಗಿಲಿನಂತಿರುವ ಆ ಧೇನುವಿನ ಕೊಡುಗಳ ಅಗಲವಾದ ನಡುಭಾಗವನ್ನು ಪುಷ್ಟಾಕ್ಷತೆಗಳಿಂದ ಪೂಜಿಸಿ ದಳು. ಆಹಾ ! ಸಂಜೆಯವರೆಗೂ ಅಗಲಿದ್ದ ಎಳೆಗರುವಿನ ತಾಯಿಗೆ ತನ್ನ ಕಂದನನ್ನು ಕಾಣಬೇಕೆಂಬ ತವಕವು ಹೆಚ್ಚಲ್ಲವೆ? ಆದರೂ, ದುಡುಕದೆ ನಿಂತು, ಅರ್ಚನೆಯನ್ನು ಆ ಧೇನುವು ಕೈಗೊಂಡಿತಲ್ಲಾ ಎಂದು ಆ ದಂಪತಿಗಳು ಆನಂದಿಸಿದರು, ಆದರೆ - ಆ ಧೇನುವಿನಂತಹ ಸತ್ಕಾ ತ್ರಗಳು ( ಮಹಾತ್ಮರು) ತಮ್ಮ ಪ್ರಿಯ ಭಕ್ತರಲ್ಲಿ ತೋರುವ ಅನುಗ್ರಹದ ಕುರುಹುಗಳಿಂದ ಅಪ್ಪನಿದ್ದಿ ಗಳು ಇದಿರಿನಲ್ಲಿವೆಯೆಂದೇ ಅರಿಯಬೇಕು. ಇಂತಾದಬಳಿಕ-ಶೂರನಾದ ದಿಲೀಪನು-ತನ್ನ ಧರ ಪತ್ನಿಯೊಡನೆ ಪರ್ಣಶಾಲೆಯನ್ನು ಹೊಕ್ಕು, ಸಹಧರಿಣಿಯೊಡನೆ ಸುಖಾಸೀನನಾಗಿದ್ದ ವಶಿವ ಮುನಿಯ ಅಡಿದಾವರೆಗಳಿಗೆ ಅಭಿವಂದಿಸಿ, ಸಾಯಂಕಾಲದ ಅನುಷ್ಠಾನವನ್ನು ಆಚರಿಸಿ, ಕರುವನ್ನು ಕುಡಿಸಿ, ಆಕಳಿನಲ್ಲಿ ಹಾಲು ಕರೆದನು. ಬಳಿಕ ವಿಶ್ರಮಿಸಿಕೊಂಡ ಆ ಧೇನುವಿನಬಳಿಗೆ ಸೇವಾರ್ಥ ವಾಗಿ ತೆರಳಿದನು. ಮತ್ತು-ಪೂಜಾಸಾಮಗ್ರಿಗಳನ್ನೂ, ನೇಮದ ದೀಪ ವನ್ನೂ, ಅದರ ಹತ್ತಿರದಲ್ಲಿಟ್ಟು, ಅದು ನಿದ್ದೆ ಗೈದಬಳಕ, ತಾನೂಅಲ್ಲಿಯೇ ಪವಳಿಸಿದನು. ಬೆಳಗಾಗುತ ಬಂದಮೇಲೆ ಅದು ಎಡ್ಜ್ರಗೊಳ್ಳಲು ತಾನೂ ವಿಚ್ಛತ್ತನು.