ಪುಟ:ರಘುಕುಲ ಚರಿತಂ ಭಾಗ ೧.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ರಘುಕುಲಚರಿತಂ 4 ತರುವಾಯ-ಬೇಡುವವರ ಮನವನ್ನು ತಣಿಸುವನೆನಿಸಿ, ತೋಳು ಬಲದಿಂದ ಮಹಾ ವೀರನೆಂಬ ಹೆಸರುವಾಸಿಯನ್ನು ಗಳಿಸಿರುವ ತಿರೆಯಾ ಇನು-ಕರಗಳನ್ನು ಜೋಡಿಸಿ ನಿಂತು, ಎಲೌ ತಾಯೇ! ಕುಲದೇಳಿಗೆಗೆಗ ನೆಯಾಗುತ, ಅಪಾರಕಿರಿ ಸಂಪನ್ನನಾಗಿ ಬಾಳುವ ಕುಮಾರನನ್ನು ಸುದಕ್ಷಿಣೆಯಲ್ಲಿ ಕರುಣಿಸಬೇಕು ಎಂದು ಕೇಳಿಕೊಂಡನು. ಆಮೇಲೆ ಆ ಪಯನಿಯು - ಪುತ್ರಕಾಮನಾಗಿರುವ ಪೃಥ್ವಿ ಪತಿಗೆ ಹಾಗೆಯೇ ಆಗಲೆಂದು ವರಮುಂ ಕರುಣಿಸಿದುದಲ್ಲದೆ, ಪುತ್ರವಾತ್ಸ ಲ್ಯದಿಂದ ಎಲೈ ಪುತ್ರನೇ ! ಪತ್ರ ಪುಟದಲ್ಲೆನ್ನ ಪಾಲಂಕರೆದು ಪಾನ ಮಾಡು, - ಎಂದಾಣತಿಯನಿತ್ತುದು. ಆಗಲಾ ಅರಸು - ಎಲೌ ಮಾತೆಯೇ ! ಕರುವನ್ನು ಕುಡಿಸಿ, ನಿನ್ನ ಹಾಲನ್ನು ಕರೆದು, ಮುನಿಯ ಹೋಮಕ್ಕೆ ವಿನಿಯೋಗಿಸಿ, ಉಳಿದ ಪ್ರಸಾದವನ್ನು, ನನ್ನಿಂದ ಆಳಲ್ಪಡುವ ಭೂಮಿಯ ಹುಟ್ಟುವಳಿಯಲ್ಲಿನ ಆರನೆಯ ಒಂದು ಭಾಗವನ್ನು ಹೇಗೋ ಹಾಗೆ, ಮಹರ್ಷಿಯ ಆಣತಿ ಯನ್ನು ಪಡೆದು, ಅನುಭವಿಸಬೇಕೆಂದು ಬಯಸುತ್ತೇನೆ ; ಎಂದು ವಿಜ್ಞಾ ವಿಸಲು, ವಶಿಷ್ಠ ಧೇನುವು - ವಿಶೇಷವಾಗಿ ಪ್ರೀತಿಸಿತು; ಮತ್ತು - ಆ ದೊರೆಯಿಂದೊಡಗೂಡಿ ಹಿಮಶೆಲದ ತಡಿಯಿಂದ ಆಶ್ರಮದ ಕಡೆಗೆ ತಿರುಗಿತು. ತಿವನವನ್ನು ಸೇರಿದ ಬಳಿಕ -ನಗೆಮೊಗದ ಜನರೊಡೆಯನುತನ್ನ ಸಂತಸದ ಕುರುಹುಗಳಿಂದ ನಂದಿನಿಯ ಅನುಗ್ರಹವನ್ನು ಮೊದಲೇ ಊಹಿನಿ ತಿಳದಿದ್ದರೂ, ಪುನರುಕ್ತಿಯಂತಿರುವ ಮಾತಿನಿಂದ ಮುನಿಗೆ ಬಿನ್ನವಿಸಿ, ತರುವಾಯ ಪ್ರಿಯಳಿಗೂ ತಿಳಿಸಿ, ಆಮೇಲೆ - ದೋಷ ಲೇಶವಿಲ್ಲದೆ ಸಾಧುಪ್ರಿಯನೆನಿಸಿದಾಪಾರ್ಥಿವನು-ಕರುವಿಗೂ, ಮುನಿಯ ಹೋಮಕ್ಕೂ ಉಪಯೋಗಿನಿ ಉಳಿದು, ತನ್ನ ಪರಿಶುದ್ಧವಾದ ಕಿರಿಯಂತಿರುವ ಧೇನುವಿನ ಹೀರವನ್ನು, ವಶಿಷ್ಠ ಮುನಿಯ ಅಪ್ಪ ಣೆಯಿಂದ ಅತ್ಯಾಶೆಗೊಂಡು ಪಾನಮಾಡಿದನು. ಹೀಗೆ ನೇಮದಿಂದ ಇಪ್ಪತ್ತೆರಡನೆಯ ದಿವಸಕ್ಕೆ ವ್ರತವು ಪೂರ ಯಿಸಿತು, ಇಪ್ಪತ್ತು ಮೂರನೆಯ ದಿನ ಬೆಳಗಾದಕೂಡಲೆ – ವ್ರತಸಾಂ ಗತೆಯ ಮರಣೆಯಾಯಿತು, ಪತ್ನಿಯೊಡನೆ ದಿಲೀಪನು ಪುರಪ್ರಯಾಣಕ್ಕೆ